ಜಿಲ್ಲಾ ಸುದ್ದಿತಾಜಾ ಸುದ್ದಿ

ನಾಡಹಬ್ಬ ಶಿವಮೊಗ್ಗ ದಸರಾಕ್ಕೆ ಅದ್ಧೂರಿ ಚಾಲನೆ

Share Below Link

ಶಿವಮೊಗ್ಗ : ನಮ್ಮ ಸಂಸ್ಕೃತಿ ಹಬ್ಬ ಉತ್ಸವಗಳಿಂದ ತುಂಬಿದೆ ಎಂದು ಚಿತ್ರ ನಿರ್ದೇಶಕ, ನಿರ್ಮಾಪಕ ಸುನಿಲ್ ಕುಮಾರ್ ದೇಸಾಯಿ ಅಭಿಪ್ರಾಯಪಟ್ಟರು .
ಮಹಾನಗರ ಪಾಲಿಕೆಯಿಂದ ಹಮ್ಮಿಕೊಳ್ಳಲಾಗಿದ್ದ ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತ ನಾಡಿದ ಅವರು, ಪ್ರತಿ ಮಾಸದ ಲ್ಲಿಯೂ ಕೂಡ ಒಂದಲ್ಲ ಒಂದು ಹಬ್ಬ ಉತ್ಸವಗಳು ಆಚರಣೆ ಯಲ್ಲಿವೆ. ಇವೆಲ್ಲವುಗಳಿಗೂ ಒಂದೊಂದು ಹಿನ್ನೆಲೆ ಇದೆ ಎಂದು ಹೇಳಿದರು.
ಆಂತರಿಕವಾಗಿ ಅಂದರೆ ಪಂಚೇಂದ್ರಿಯಗಳ ಮೂಲಕ ಅನುಭವಿಸುವ ಮತ್ತು ಬಾಹ್ಯವಾಗಿ ಅನುಭವಿಸುವ ಉತ್ಸವಗಳು ರೂಢಿ ಯಲ್ಲಿವೆ ಎಂದ ಅವರು, ರಾವಣ ಅತ್ಯಂತ ಮೇಧಾವಿ ಎ ವೇದ ಗಳನ್ನು ಅರಿತವನು. ಅಲ್ಲದೇ ಶಿವ ಭಕ್ತ ಆದರೆ ಈತನಲ್ಲಿ ಅಹಂಕಾರ ವೆಂಬ ದುರ್ಗುಣವಿತ್ತು. ಅದರ ಪರಿಣಾಮ ತನ್ನ ಬದುಕನ್ನೇ ಹಾಳು ಮಾಡಿಕೊಂಡ ರಾಮನ ಮುಖಾಂತರ ಹತನಾದ ಎಂದು ಹಬ್ಬದ ಆಚರಣೆಯ ಹಿನ್ನೆಲೆಯನ್ನು ಹೇಳಿದರು.
ನಮ್ಮಲ್ಲಿಯೂ ಸಹ ರಾಮನಿ zನೆ. ರಾವಣನಿzನೆ. ಅದರಲ್ಲಿ ರಾಮನ ಸದ್ಗುಣಗಳನ್ನು ಅರಿತು ಕೊಂಡು, ರಾವಣನ ದುರ್ಗುಣವನ್ನು ಬಿಟ್ಟುಕೊಡು ವುದೇ ನಿಜವಾದ ಹಬ್ಬದ ಆಚರಣೆಗಳು. ಅದೇ ರೀತಿಯಲ್ಲಿ ದುರ್ಗೆ ರಾಕ್ಷಸರನ್ನು ಸಂಹರಿಸಿದಳು. ದುರ್ಗೆಯ ಶಕ್ತಿಯನ್ನು ನಾವುಗಳು ಅಳವಡಿಸಕೊಂಡು. ರಾಕ್ಷರ ರೂಪದ ನಮ್ಮಲ್ಲಿನ ಅವಗುಣ ಗಳನ್ನು ಸಂಹಾರ ಮಾಡಬೇಕೆಂದು ಮಾರ್ಮಿಕವಾಗಿ ಹೇಳಿದರು.
ಶಕ್ತಿಯ ದೇವತೆಗಳ ಉತ್ಸವ ವಾದ ಈ ದಸರಾ ಹಬ್ಬ ನಾಡಿನ ಅತ್ಯಂತ ವೈಶಿಷ್ಟ್ಯಪೂರ್ಣ ಹಬ್ಬವಾ ಗಿದೆ. ಈ ಹಬ್ಬ ಸಮಸ್ತ ಕನ್ನಡ ನಾಡಿನ ಜನತೆಗೆ ಸುಖ-ಶಾಂತಿ ನೆಮ್ಮದಿಯನ್ನು ನೀಡಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಅವರು ಮಾತನಾಡಿ, ದೇವರ ಮೇಲೆ ಯಾರಿಗೆ ನಂಬಿಕೆ ಇರುವುದಿಲ್ಲವೋ ಅವರು, ಜೀವನದಲ್ಲಿ ನೆಮ್ಮದಿ ಯನ್ನು ಹೊಂದಲು ಸಾಧ್ಯವಿಲ್ಲ. ದೇವರು, ಧರ್ಮ ಇವುಗಳ ಮೇಲೆ ನಂಬಿಕೆ ಇzಗ ಮಾತ್ರ ಶಾಂತಿಯುತ ಜೀವನ ಹೊಂದಲು ಸಾಧ್ಯ ಎಂದು ಹೇಳಿದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಈ ಬಾರಿ ದಸರಾದಲ್ಲಿ ೬೮ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿ zವೆ, ಹೊಸದಾಗಿ ಪೌರ ಕಾರ್ಮಿಕರ ಗಮಕ ಹಾಗೂ ಪತ್ರಿಕಾ ದಸರಾವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಕೊನೆಯ ದಿನ ನಡೆಯುವ ಉತ್ಸವದಲ್ಲಿ ನಗರದ ೨೫೦ಕ್ಕೂ ದೇವಾನು ದೇವತೆಗಳು ಪಾಲ್ಗೊಳ್ಳ ಲಿವೆ. ಉತ್ಸವದಲ್ಲಿ ಮೂರು ಆನೆಗಳು ಪಾಲ್ಗೊಳ್ಳಲಿವೆ. ನಮ್ಮ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಯಾವ ಸರ್ಕಾರವೂ ಕೂಡ ಹಿಂದೆ ಬಿದ್ದಿಲ್ಲ ಎಂದರು.
ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ತಹಶೀಲ್ದಾರ್ ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *