ಜಿಲ್ಲಾ ಸುದ್ದಿತಾಜಾ ಸುದ್ದಿ

ವ್ಯಾಪಾರ ವೃದ್ಧಿಸಿಕೊಳ್ಳಲು ಪರಸ್ಪರ ಸಹಕಾರ ಮುಖ್ಯ: ಪೂರ್ಣಿಮಾ ಸುನೀಲ್

Share Below Link

ಶಿವಮೊಗ್ಗ: ವ್ಯಾಪಾರ ವಹಿ ವಾಟು ವೃದ್ಧಿಸಿಕೊಳ್ಳಲು ಪ್ರತಿಯೊ ಬ್ಬರೂ ಪರಸ್ಪರ ಸಹಕಾರ ನೀಡು ವುದು ಅತ್ಯಂತ ಮುಖ್ಯ ಎಂದು ಜೆಸಿಐ ಶಿವಮೊಗ್ಗ ಭಾವನಾ ಅಧ್ಯಕ್ಷೆ ಪೂರ್ಣಿಮಾ ಸುನೀಲ್ ಹೇಳಿ ದರು.
ಶಿವಮೊಗ್ಗ ನಗರದಲ್ಲಿ ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಜೆಸಿ ಸದಸ್ಯರ ಬೈ ಫ್ರಮ್ ಜೆಸಿ ಎಂಬ ಶೀರ್ಷಿಕೆಯಡಿ ಜೆಕಾಂ ಕಾರ್ಯ ಗಳ ಬಗ್ಗೆ ಮಾತನಾಡಿ, ವ್ಯಾಪಾರ ವಹಿವಾಟು ಹೆಚ್ಚಿಸಿಕೊಳ್ಳುವ ದೃಷ್ಠಿ ಯಿಂದ ಹೆಚ್ಚು ಜನರ ಸಂಪರ್ಕ ಪರಸ್ಪರ ಪರಿಚಯ ಮುಖ್ಯ ಆಗಿ ರುತ್ತದೆ. ಇದರಿಂದ ಉದ್ಯಮ ಗಳಲ್ಲಿ ಯಶಸ್ಸು ಕಾಣಬಹುದಾಗಿದೆ ಎಂದು ತಿಳಿಸಿದರು.
ಜೆಸಿಐ ವಲಯ ಅಧ್ಯಕ್ಷ ಅನುಷ್ ಗೌಡ ಮಾತನಾಡಿ, ಜೆ ಸಿ ಸದಸ್ಯರ ವ್ಯವಹಾರವನ್ನು ಮತ್ತ ಷ್ಟು ವೃದ್ಧಿಗೊಳಿಸಲು ಕೆಲವೊಂದು ವ್ಯವಹಾರಿಕ ಸಂಬಂಧಗಳ ವಿಷಯದ ಕುರಿತು ಜೆ ಸಿ ಸಂಸ್ಥೆಯು ನಿರಂತರ ಮಾರ್ಗದರ್ಶನ ನೀಡು ವ ವಿಶೇಷ ಶಿಬಿರಗಳನ್ನು ಆಯೋ ಜಿಸುತ್ತದೆ ಎಂದು ಹೇಳಿದರು.
ಜೆಸಿ ಸಂಸ್ಥೆಯ ಮತ್ತೊಂದು ವಿಭಾಗವಾದ ವ್ಯವಹಾರಕ್ಕೆ ಸಂಬಂ ಧಿಸಿದ ಜೆಕಾಂ ಕಾರ್ಯಗಳ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳ ಬೇಕು ಎಂದು ಮಾಹಿತಿ ನೀಡಿ ದರು.
ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆ ಸದಸ್ಯೆ ಸ್ಮಿತಾ ಶಿವಕುಮಾರ್ ಅವರು ಗಾಂಧಿ ಬಜರ್ ನಲ್ಲಿ ಇರುವ ದೋಸೆ ಕ್ಯಾಂಪ್, ಏರ್ ಪೋರ್ಟ್ ರಸ್ತೆಯಲ್ಲಿರುವ ಅಶ್ವಿನಿ ಅವರ ಬಿಗ್ ಬ್ಯೂಟಿ ಪಾರ್ಲರ್ ಹಾಗೂ ಕರಿಬಸಮ್ಮ ಅವರ ಸೀರೆ ವ್ಯಾಪಾರವನ್ನು ಯಾವ ರೀತಿ ವೃದ್ಧಿಸಿಕೊಳ್ಳಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಜೈತ್ರ ಹಬ್ಬದ ಕೋಆರ್ಡಿನೇಟರ್ ಪ್ರದೀಪ್ ಹಾಗೂ ಭಾವನದ ಎಲ್ಲ ಸದಸ್ಯರು ಪಾಲ್ಗೊಂಡು ವ್ಯವಹಾರ ವೃದ್ಧಿಸುವಲ್ಲಿ ಪರಸ್ಪರ ಸಹಕರಿಸುತ್ತೇವೆ ಎಂದು ಮಾಹಿತಿ ಹಂಚಿಕೊಂಡರು. ಜೆಸಿಐ ಶಿವಮೊಗ್ಗ ಭಾವನಾ ಪದಾಧಿಕಾರಿಗಳು ಉಪಸ್ಥಿತರಿದ್ದರು.