ಜಿಲ್ಲಾ ಸುದ್ದಿತಾಜಾ ಸುದ್ದಿ

ಕೃಷಿಕರ ವಿಶ್ವವಿದ್ಯಾಲಯವಾಗಿ ಬೆಳೆಯಬೇಕು: ಕಾಗೋಡು ತಿಮ್ಮಪ್ಪ

Share Below Link

ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿeನಗಳ ವಿವಿ ಕೇವಲ ವಿದ್ಯಾ ರ್ಥಿಗಳಿಗೆ ಮಾತ್ರವಲ್ಲ, ಕೃಷಿಕರ ವಿವಿಯಾಗಿ ಬೆಳೆಯಬೇಕು ಎಂದು ಮಾಜಿ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿeನಗಳ ವಿವಿಯಲ್ಲಿ ಆಯೋಜಿಸಲಾಗಿದ್ದ ವಿವಿದ ೧೧ನೇ ಸಂಸ್ಥಾಪನಾ ದಿನಾ ಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಭೂಮಿ ಯನ್ನು ಉಳುಮೆ ಮಾಡುತ್ತಿzರೆ. ಯಾವ ಭೂಮಿ ಯಲ್ಲಿ ಎಂತಹ ಬೆಳೆಯನ್ನು ಬೆಳೆಯ ಬೇಕೆಂಬ ಪರಿeನ, ಮಾಹಿತಿ ನೀಡಲು ಪಂಚಾಯಿತಿವಾರು ಕನಿಷ್ಟ ೫೦ ಜನರಿಗೆ ಕಾರ್ಯಾಗಾರಗಳನ್ನು ವಿವಿ ಕೈಗೊಳ್ಳಬೇಕು. ರೈತರ ಇಳು ವರಿ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಸಂಶೋಧನೆ, ಪ್ರಯೋಗ ಗಳನ್ನು ಕೈಗೊಂಡಲ್ಲಿ ರೈತರು ಸಹ ಕೈ ಜೋಡಿಸುತ್ತಾರೆ ಎಂದರು.


ಅಧಿಕಾರಿಗಳು, ಉಪನ್ಯಾ ಸಕರು ವಿದ್ಯಾರ್ಥಿಗಳ ಶ್ರಮದಿಂದ ಈ ವಿವಿ ಇನ್ನೂ ಚೆನ್ನಾಗಿ ವಿವಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಬೋಧಕ ಬೋಧಕೇತರ ವರ್ಗ ದವರು ಇಲ್ಲಿಯೇ ವಾಸಿಸುವಂತಾ ದರೆ ವಿವಿ ಕುರಿತಾದ ಆಸಕ್ತಿ , ಒಲವು ಹೆಚ್ಚುತ್ತದೆ. ಅಭಿವೃದ್ಧಿಗೆ ಸಹಕಾರಿ ಯಾಗುತ್ತದೆ. ಆದ್ದರಿಂದ ಸಿಎಂ ಗಳು, ಕೃಷಿ ಸಚಿವರನ್ನು ಭೇಟಿ ಯಾಗಿ ವಸತಿ ಗೃಹಗಳನ್ನು ನೀಡಲು ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಾನೂ ಕೃಷಿಕನಾಗಿz. ನನಗೆ ಎಲ್ಲ ರೀತಿಯ ಕೃಷಿ ಚಟುವಟಿ ಕೆಗಳ eನ ಇದೆ. ವಿವಿ ಆಯೋ ಜಿಸುವ ಕೃಷಿ ಮೇಳಗಳಲ್ಲಿ ರೈತರು ಪಾಲ್ಗೊಂಡು ವೈeನಿಕ ಕೃಷಿ ಪದ್ಧತಿ, ಹೊಸ ಸಂಶೋಧನೆಗಳ ಕುರಿತು ತಿಳಿದುಕೊಂಡು ಅಳವಡಿಸಿ ಕೊಳ್ಳ ಬೇಕು ಎಂದ ಅವರು ಕೃಷಿ ವಿವಿ ಬೆಳೆಯಬೇಕು ಇದರಿಂದ ರೈತರಿಗು ಅನು ಕೂಲವಾಗುತ್ತದೆ ಎಂದರು.
ಪ್ರಗತಿಪರ ರೈತ ದೊಡ್ಡಗೌಡ ಸಿ ಪಾಟೀಲ್ ಮಾತಾಡಿ, ೭ ಜಿಗಳ ವ್ಯಾಪ್ತಿ ಹೊಂದಿರುವ ಈ ವಿವಿ ವೈವಿಧ್ಯತೆ ಹೊಂದಿದೆ. ವಿವಿಗೆ ಮೊದಲ ಹಂತದಲ್ಲಿ ರೂ. ೧೫೦ ಮತ್ತು ನಂತರ ರೂ.೩೮ ಕೋಟಿ ಅನುದಾನ ಮಾತ್ರ ಬಿಡುಗಡೆ ಯಾಗಿದೆ. ವಿವಿ ಅಭಿವೃದ್ದಿಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಇತ್ತೀಚೆಗೆ ೧೦೮ ಪ್ರೊಫೆಸರ್ ಗಳ ನೇಮಕ ಆಗಿದೆ. ಬರಗಾಲ ದಿಂದ ರೈತರು ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ರೈತರಿಗೆ ಮಾರ್ಗ ದರ್ಶನ ಮಾಡುವ ಜವಾಬ್ದಾರಿ ವಿವಿ ಮೇಲಿದೆ. ಬೆಳೆ,ರೋಗ ನಿರ್ವಹಣೆ ಕುರಿತು ತಿಳಿಸಬೇಕು. ರೈತರ ಜೀವನ ಹಸನು ಮಾಡಲು ಪ್ರಯತ್ನಿಸಬೇಕು. ವಿವಿಯಲ್ಲಿ ರೈತರ ಮಕ್ಕಳಿಗೆ ಶೇ.೫೦ ಮೀಸ ಲಾತಿ ಇದೆ. ಇಂಜಿನಿಯರಿಂಗ್ ಗಿಂತ ಕೃಷಿ ವಿeನಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ವಿವಿ ಬೆಳೆಯಬೇಕು ಎಂದರು.
ವಿವಿ ಕುಲಪತಿ ಡಾ.ಆರ್.ಸಿ ಜಗದೀಶ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ೬ ಹೊಸದಾಗಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಗಳನ್ನು ಇಲ್ಲಿ ಆರಂಭಿಸಲಾಗುವುದು ಹಾಗೂ ವಿವಿ ಸಾಧನೆಗಳ ಬಗ್ಗೆ ತಿಳಿಸಿ, ಮುಂಬರುವ ದಿನಗಳಲ್ಲಿ ಈ ಆವರಣ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವಿಶಿಷ್ಟ ಸಾಧನೆ ಮಾಡಿದ ಅತ್ಯುತ್ತಮ ಶಿಕ್ಷಕರು, ವಿeನಿಗಳು, ಸಿಬ್ಬಂದಿ ಗಳಿಗೆ ಪ್ರಶಸ್ತಿ ವಿತರಣೆ ಮಾಡಲಾ ಯಿತು ಹಾಗೂ ನಿವೃತ್ತರಾದ ಶಿಕ್ಷಕ, ಸಿಬ್ಬಂದಿ ವರ್ಗವನ್ನು ಗೌರವಿಸ ಲಾಯಿತು. ವಿವಿ ಕುಲಸಚಿವ ಡಾ. ಕೆ.ಸಿ.ಶಶಿಧರ್ ಸ್ವಾಗತಿಸಿದರು. ವ್ಯವಸ್ಥಾಪನಾ ಮಂಡಳಿ ಸದಸ್ಯರು ಹಾಗೂ ಪ್ರಗತಿಪರ ರೈತರಾದ ವೀರಭದ್ರಪ್ಪ ಪೂಜಾರಿ, ಶಿಕ್ಷಣ ತಜ್ಞ ಪಿ ಕೆ.ಬಸವರಾಜ ಮಾತನಾ ಡಿದರು. ಪ್ರಗತಿಪರ ರೈತರಾದ ನಾಗರಾಜ್, ಕೃಷಿ ಉದ್ದಿಮೆದಾರ ಬಿ. ಕೆ. ಕುಮಾರಸ್ವಾಮಿ, ಅಧಿಕಾರಿ ವರ್ಗದವರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.