ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಭಾರತದಲ್ಲಿ ಮಾತ್ರ ಮುಸ್ಲಿಂರು ಸುರಕ್ಷಿತ: ಈಶ್ವರಪ್ಪ

Share Below Link

ಶಿವಮೊಗ್ಗ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದು, ಆರ್ಥಿಕವಾಗಿಯೂ ದಿವಾಳಿ ಯಾಗಿದೆ ಎಂದು ಟೀಕಿಸಿದರು.
ಲೋಕೋಪಯೋಗಿ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಸುಮಾರು ೩೭,೦೦೦ ಕೋಟಿ ಹಣ ಪಾವತಿಯಾಗಬೇಕಾಗಿದೆ. ಈ ಹಣ ಬಿಡುಗಡೆಯಾಗದೆ ಗುತ್ತಿಗೆದಾರರು ಅತ್ಯಂತ ಸಂಕಷ್ಟಕ್ಕೆ ತಲುಪಿದ್ದು, ಸರ್ಕಾರದ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿzರೆ. ಹಣಬರುವ ಗ್ಯಾರೆಂಟಿಯೂ ಇಲ್ಲವಾಗಿ ಟೆಂಡರ್ ಹಾಕುವುದನ್ನೇ ನಿಲ್ಲಿಸಿಬಿಟ್ಟಿzರೆ. ಇದಕ್ಕೆ ಶಿವಮೊಗ್ಗz ಉದಾಹರಣೆ ಎಂದರೆ ಯಲವಟ್ಟಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಯಾವ ಗುತ್ತಿಗೆ ದಾರನು ಟೆಂಡರ್ ಹಾಕಿಲ್ಲ ಎಂದರು.
ಈಗಾಗಲೇ ರಾಜ್ಯದ ಗುತ್ತಿಗೆ ದಾರರು ಮಾ.೩ರಂದು ರಾಜ್ಯ ಮಟ್ಟದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಿ zರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.
ಮುಸ್ಲಿಂರು ಭಾರತದಲ್ಲಿ ಮಾತ್ರ ಸುರಕ್ಷಿತವಾಗಿzರೆ. ಆದರೆ ಇದನ್ನು ಅರಿಯದ ಮುಸ್ಲಿಂರು ಇರಾನ್ ದೇಶಕ್ಕೆ ಬೆಂಬಲ ನೀಡುವುದು ಅಲ್ಲಿನ ನಾಯಕ ಅಲಿ ಖಮೇನಿ ಹತ್ಯೆ ವಿರೋಧಿಸುವುದು, ಸಂತಾಪ ವ್ಯಕ್ತಪಡಿಸುವುದು, ಮೋದಿ ವಿರುದ್ಧ ಮಾತನಾಡುವುದು ಇವೆಲ್ಲವೂ ಖಂಡನೀಯ. ಇರಾನ್ ಪಾಕಿಸ್ತಾನ ವನ್ನು ಬೆಂಬಲಿಸಿರುವುದನ್ನು ನಾವು ನೋಡಿzವೆ. ಅದು ಕಾಶ್ಮೀರದ ಮುಸ್ಲಿಂರ ಪರವಾಗಿಯೇ ಇತ್ತು ಎಂದ ಅವ ರು, ಈ ದೇಶದ ನೀರು, ಗಾಳಿ ಸೇವಿಸಿದ ದೇಶದ್ರೋಹಿ ಮುಸ್ಲಿಂರು ಈ ಬಗ್ಗೆ ಯೋಚಿಸಬೇಕಾಗಿದೆ ಎಂದರು.
ಪ್ರಮುಖರಾದ ಕೆ.ಈ. ಕಾಂತೇಶ್, ಮಹಾಲಿಂಗಯ್ಯ ಶಾಸ್ತ್ರೀ, ಮೋಹನ್ ಜದವ್, ಮಧುಸೂದನ್, ಕುಬೇರಪ್ಪ, ಚನ್ನಬಸಪ್ಪಇನ್ನಿತರರಿದ್ದರು.

Leave a Reply

Your email address will not be published. Required fields are marked *