ಜಿಲ್ಲಾ ಸುದ್ದಿತಾಜಾ ಸುದ್ದಿ

ಸಂಗೀತಾಸಕ್ತರ ಮನಗೆದ್ದ ವೀಣಾ ವಾದನ…

Share Below Link

ಶಿವಮೊಗ್ಗ : ರವೀಂದ್ರ ನಗರದ ಶ್ರೀ (ಬಲಮುರಿ) ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ನವ ರಾತ್ರೋತ್ಸವದ ಅಂಗವಾಗಿ ಗುರು ವಾರ ನಗರದ ಸುಪ್ರಸಿದ್ಧ ವೀಣಾ ವಾದಕರಾದ ವಿದುಷಿ ಶ್ರೀಮತಿ ವಿಜಯಲಕ್ಷ್ಮೀ ರಾಘು ಹಾಗೂ ಅವರ ಶಿಷ್ಯ ವೃಂದದವರು ೨೫ ವೀಣೆಗಳಿಂದ ನುಡಿಸಿದ ವೀಣಾ ವಾದನ ಸಂಗೀತಾಸಕ್ತರ ಮನಗೆ ದ್ದಿತು.
ಸುಮಾರು ಮೂರು ಗಂಟೆಗಳ ಕಾಲ ನಡೆದ ವೀಣಾವಾದನ ಕಾರ್‍ಯ ಕ್ರಮದಲ್ಲಿ ವಿದ್ವಾನ್ ಮತ್ತೂರು ರಾಜೀವ್ (ಮೃದಂಗ), ವಿದ್ವಾನ್ ತುಕಾರಾಂರಾವ್ ರಂಗಧೋಳ್ (ತಬಲ), ವಿದ್ವಾನ್ ರಾಘವೇಂದ್ರ ರಂಗಧೋಳ್ (ರಿದಂ ಪ್ಯಾಡ್) ಪಕ್ಕಾ ವಾದ್ಯಗಳಲ್ಲಿ ಸಹಕರಿಸಿದರು.
ವಿದುಷಿ ಶ್ರೀಮತಿ ವಿಜಯ ಲಕ್ಷ್ಮೀ ರಾಘುರವರು ೨೦೦೦ ನೇ ಇಸವಿಯಲ್ಲಿ ಶಿವಮೊಗ್ಗದ ತಿಲಕ್ ನಗರದಲ್ಲಿ ಶ್ರೀ ಸರಸ್ವತಿ ವೀಣಾ ವಿದ್ಯಾಲಯವನ್ನು ಪ್ರಾರಂಭಿಸಿ, ನೂರಾರು ವಿದ್ಯಾರ್ಥಿಗಳಿಗೆ ವೀಣೆಯನ್ನು ಕಲಿಸಿ, ನಂತರ ಅವರನ್ನು ವೇದಿಕೆ ಮೂಲಕ ಸಂಗೀತ ಕ್ಷೇತ್ರಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿzರೆ.
ವಿದುಷಿ ಶ್ರೀಮತಿ ವಿಜಯ ಲಕ್ಷ್ಮೀ ರಾಘುರವರು ಆಕಾಶ ವಾಣಿಯ ಬಿ ಹೈಗ್ರೇಡ್ ಕಲಾವಿದೆ ಯಾಗಿದ್ದು, ೨೦೧೫ ನೇ ಇಸವಿ ಯಲ್ಲಿ ಇವರು ಶಿವಮೊಗ್ಗದ ಎನ್.ಇ.ಎಸ್. ಕ್ರೀಡಾಂಗಣದಲ್ಲಿ ನಡೆದ ಅಷ್ಟೋತ್ತರ ಶತ ವೀಣಾ ವೈಭವ ಕಾರ್ಯಕ್ರಮದಲ್ಲಿ ಏಕ ಕಾಲದಲ್ಲಿ ಒಂದು ನೂರ ಎಂಟು ವೀಣೆಗಳನ್ನು ತಾವು ಹಾಗೂ ತಮ್ಮ ಶಿಷ್ಯರೊಂದಿಗೆ ನುಡಿಸಿದ ಕೀರ್ತಿಗೆ ಪಾತ್ರರಾಗಿzರೆ.
ಸ್ವಾಗತ ಹಾಗೂ ವಂದನಾ ರ್ಪಣೆಯನ್ನು ಉಪನ್ಯಾಸಕಿ ಡಾ. ಮೈತ್ರೇಯಿ ಆದಿತ್ಯ ನಿರ್ವಹಿಸಿ ದರು. ಕಾರ್ಯಕ್ರಮದಲ್ಲಿ ಹಲ ವಾರು ಸಂಗೀತಾಸಕ್ತರು ಭಾಗವಹಿ ಸಿದ್ದರು.