ಜಿಲ್ಲಾ ಸುದ್ದಿತಾಜಾ ಸುದ್ದಿಸಿನಿಮಾ

ರುದ್ರಾಭಿಷೇಕಂ ಚಲನಚಿತ್ರಕ್ಕೆ ಮುಹೂರ್ತ…

Share Below Link

ಬೆಂಗಳೂರು : ಫ್ಯಾನ್ ಇಂಡಿಯಾ ಕ್ರಿಯೇಷನ್ಸ್ ವಿಜಯಪುರವರ ಪ್ರಥಮ ಕಾಣಿಕೆ ರುದ್ರಾಭಿಷೇಕಂ ಕನ್ನಡ ಮತ್ತು ತೆಲುಗು ದ್ವಿಭಾಷೆಯಲ್ಲಿ ನಿರ್ಮಾಣ ವಾಗುತ್ತಿರುವ ಚಿತ್ರದ ಚಿತ್ರೀಕರಣದ ಮುಹೂರ್ತ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿತು.


ಬಿವಿಕೆ ಗ್ರೂಫ್‌ನ ಕೃಷ್ಣಪ್ಪನವರು ಕ್ಲಾಪ್ ಮಾಡಿದರೆ ವಿಜಯಪುರದ ಬಸವಕಲ್ಯಾಣಮಠದ ಶ್ರೀ ಮಾದೇವ ಶ್ರೀಗಳು ಕ್ಯಾಮರಾ ಗುಂಡಿ ಒತ್ತುವ ಮೂಲಕ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ನಿರಂಜನ ಶ್ರೀಗಳು, ಸಿದ್ದಗಂಗಾಮಠದ ನಿರಂಜನ ಶ್ರೀಗಳು, ಚಲನಚಿತ್ರ ರಂಗದ ಗಣ್ಯರು, ನಿರ್ಮಾಪಕರು, ಕಲಾವಿದರು, ತಂತ್ರಜ್ಞರು ಪಾಲ್ಗೊಂಡು ಚಿತ್ರಕ್ಕೆ ಶುಭಕೋರಿದರು.
ದಕ್ಷಿಣ ಭಾರತದ ಹೆಸರಾಂತ ಜನಪದ ಕಲೆಯನ್ನು ಒಳಗೊಂಡಿರುವ ಪ್ರಚಲಿತವಾಗಿ ರುವ ಕಥೆ ಇದು. ದೇವನಹಳ್ಳಿ ಸುತ್ತಮುತ್ತ, ನಂದಿಬೆಟ್ಟ, ಸಕಲೇಶಪುರ, ಮಲ್ಪೆ ಬೀಚ್ ಮೊದಲಾದ ಕಡೆ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಕೆ.ವಸಂತ್ ಕುಮಾರ್ ತಿಳಿಸಿದರು.
ನಾಯಕ ನಟನಾಗಿ ಸನತ್, ಶ್ರೀದೇವಿ ಜೋಶಿ ನಾಯಕಿಯಾಗಿ, ಖಳನಾಯಕರುಗಳಾಗಿ ಬುಲೆಟ್ ವಿನ್, ಮನು, ಮುಕುಂದ್, ವಿಜಯರಾಜ್ ಹಾಗೂ ವಿಶಿಷ ಪಾತ್ರದಲ್ಲಿ ಖ್ಯಾತ ಜನಪದ ದಿಗ್ಗಜ ಗುರುರಾಜ್ ಹೊಸಕೋಟೆ ಇವರೊಂದಿಗೆ ಶಂಖನಾದ ಆಂಜಿನಪ್ಪ, ಬಿರಾದಾರ್, ಮಾಲತಿಶ್ರೀ, ಮಮತಾ, ಐಟಂ ಸಾಂಗ್ ನಾಯಕಿ ಎಂದೇ ಪ್ರಸಿದ್ಧಿ ವಾಗಿರುವ ಅಲೀಷಾ ಮೊದಲಾದವರು ಚಿತ್ರದಲ್ಲಿzರೆ.
ತಾಂತ್ರಿಕವರ್ಗದಲ್ಲಿ ಛಾಯಾ ಗ್ರಹಣ ಮುತ್ತುರಾಜ್, ವಿ. ಮನೋಹರ್ ಸಂಗೀತ ಚಿತ್ರಕ್ಕಿದ್ದು ಐದು ಗೀತೆಗಳಿಗೆ ರಾಗ ಸಂಯೋಜನೆ ಮಾಡಿzರೆ. ಸುರೇಶ್ ಗುಟ್ಟಹಳ್ಳಿ ನೃತ್ಯ ಸಂಯೋಜನೆ, ಬಾಬುಖಾನ್ ಕಲಾ ನಿರ್ದೇಶನ, ಮೇಕಪ್ ರಾಜ್, ವಸ್ತ್ರಾಲಂಕಾರ ವಿಜಯ ಕುಮಾರ್, ಸಂಕಲನ ಮುತ್ತುರಾಜ್ ಟಿ , ಪಿ ಆರ್ ಓ ಡಾ. ಪ್ರಭು. ಗಂಜಿಹಾಳ, ಡಾ.ವೀರೇಶ್ ಹಂಡಿಗಿ, ಸಹ ನಿರ್ದೇಶನ ಕಾಳಿದಾಸ ಅವರದಿದ್ದು, ಸುಮಾರು ೨೫ ವರ್ಷಗಳ ಸಿನಿ ಪ್ರಯಾಣದಲ್ಲಿ ಹಲವಾರು ನಿರ್ದೇಶಕರುಗಳ ಜೊತೆ ಕಾರ್ಯನಿರ್ವಹಿಸಿದ ಕೆ ವಸಂತ್ ಕುಮಾರ್ ಅವರು ಮೊದಲ ಸಲ ಚಿತ್ರ ನಿರ್ದೇಶನಕ್ಕಿಳಿದು ಅದೃಷ್ಟ ಪರೀಕ್ಷೆಗೆ ಹೊರಟಿzರೆ.
ವಕೀಲರಾದ ಎನ್ ಜಯ ರಾಮ್, ಬಿ.ಎ .ರಮೇಶ್, ಕೆ. ವೆಂಕಟೇಶ್, ಶಿವು, ಚಿದಾನಂದ ಮೂರ್ತಿ ಹಾಗೂ ಅವರ ಸ್ನೇಹಿತರುಗಳು ಚಿತ್ರವನ್ನು ನಿರ್ಮಿಸುತ್ತಿzರೆ.
ಈ ಚಿತ್ರದ ಐಟಂ ಸಾಂಗ್ ಬಹು ನಿರೀಕ್ಷೆಯಲ್ಲಿದ್ದು ರುದ್ರಾಭಿಷೇಕಂ ಚಿತ್ರದ ಚಿತ್ರೀಕರಣ ವನ್ನು ಆದಷ್ಟು ಬೇಗ ಮುಗಿಸಿ ತೆರೆಗೆ ತರುವ ಆಲೋಚನೆ ಚಿತ್ರ ತಂಡzಗಿದೆ.

This image has an empty alt attribute; its file name is Arya-coll.gif