ಸಮಾಜದ ಸಮಾನತೆಯ ಶಿಲ್ಪಿ ಮಹಮ್ಮದ್ ಪೈಗಂಬರರು
ಸ್ವಾತಂತ್ರ್ಯ ಬಂದು ೭೬ ವರ್ಷಗಳ ನಂತರ ಮಹಿಳೆಯರಿಗೆ ರಾಜಕೀಯವಾಗಿ ಶೇ.೩೩ ರಿಸರ್ವೇಶನ್ ನೀಡಿದ್ದಕ್ಕೆ ಇಡೀ ದೇಶದಡೆ ಸಧ್ಯ ಮಹಿಳೆಯರು ಬಹಳ ಸಂತೋಷದಲ್ಲಿzರೆ. ಮುಂದಿನ ದಿನಗಳಲ್ಲಿ ಈ ಬಿಲ್ ಪಾಸ್ ಆಗುತ್ತೋ ಇಲ್ವೋ ಗೊತ್ತಿಲ್ಲ, ಆದರೂ ಸಹ ಸದ್ಯಕ್ಕಂತೂ ಸಂಭ್ರಮ ಮನೆ ಮಾಡಿದೆ.
ಆದರೆ ಪವಿತ್ರ ಖುರಾನ್ ಮತ್ತು ಅಹನ ಸಂದೇಶವಾಹಕರು ಆದ ಮೊಹಮ್ಮದ್ ಪೈಗಂಬರರು ಸುಮಾರು ೧೪೦೦ ವರ್ಷಗಳ ಹಿಂದೆಯೇ ಸ್ತ್ರೀ- ಪುರುಷರಿಬ್ಬರೂ ಸಹ ಸಮಾನರು, ಯಾರು ಮೇಲಲ್ಲ, ಯಾರೂ ಕೀಳಲ್ಲ , ಇಬ್ಬರಿಗೂ ಸಹ ಅವರ ಕರ್ಮಗಳಿಗನು ಸಾರ ಪ್ರತಿಫಲವನ್ನು ನೀಡಲಾಗುತ್ತದೆ ಎಂದು ಸಾರಿದೆ. ಅಲ್ಲದೆ ಹುಟ್ಟಿದ ಹೆಣ್ಣು ಮಗುವನ್ನು ಜೀವಂತವಾಗಿ ಹೂಳುತ್ತಿದ್ದ ಆ ಕಾಲದಲ್ಲಿ ಮೂರು ಹೆಣ್ಣು ಮಕ್ಕಳನ್ನು ಸಾಕಿ ಸಲಹಿ ಅವರಿಗೆ ಉತ್ತಮ ಶಿಕ್ಷಣ ನೀಡಿ ವಿವಾಹ ಮಾಡಿಕೊಟ್ಟರೆ ಸ್ವರ್ಗದ ವಾಗ್ದಾನವನ್ನು ನೀಡಿzರೆ.
ಇನ್ನೊಂದೆಡೆ ಭಾರತರತ್ನ ಡಾ|ಅಂಬೇಡ್ಕರ್ ಅವರನ್ನು ಸಂವಿಧಾನದ ಶಿಲ್ಪಿ ಎನ್ನುತ್ತೇವೆ. ಕಾರಣ ೧೪೧ನೇ ವಿಧಿಯಿಂದ ೧೪೪ನೇ ವಿಧಿಯವರೆಗೆ ಸಂವಿಧಾನದ ಮುಂದೆ ಕಾನೂನಿನ ಮುಂದೆ ದೇಶದ ಯಾವುದೇ ಮೂಲೆ ಯಲ್ಲಿರಲಿ, ಯಾವುದೇ ಆಚಾರ ವಿಚಾರ ಧರ್ಮ ಸಂಸ್ಕೃತಿ ಭಾಷೆಗೆ ಸೇರಿರಲಿ ಅವರೆಲ್ಲರೂ ಸಹ ಸಮಾನರು ಎಲ್ಲರೂ ಸಹ ಭಾರತೀಯರು ಎಂದಿzರೆ.
ಆದರೆ ಇಂದಿನ ಪರಿಸ್ಥಿತಿಯನ್ನು ನೋಡಿದರೆ ನಿಜಕ್ಕೂ ಇದನ್ನು ಪಾಲಿಸುತ್ತಿzರೆಯೇ? ಇಂದು ದೇಶದ ಹಲವಡೆದೆ ಕೆಲವು ದುಷ್ಟರು ದಲಿತರ ಮೇಲೆ ಹಿಂದುಳಿದವರ ಮೇಲೆ ಅತ್ಯಾಚಾರ ಕೊಲೆ ಹಿಂಸೆ ದೌರ್ಜನ್ಯ, ದಲಿತರ ಮೇಲೆ ಮೂತ್ರ ಮಾಡುವುದು, ಬಾವಿಯಲ್ಲಿ ನೀರು ಕುಡಿದದ್ದಕ್ಕೆ ಬಾಸುಂಡೆ ಬರುವ ಹಾಗೆ ಹೊಡೆಯುವುದು, ಮಲತಿನ್ನಿಸುವುದು, ಅವರ ಮೇಲೆ ಅತ್ಯಾಚಾರ ಮಾಡಿ ಸುಡುವುದು, ಒಂದೇ ಎರಡೇ ದೌರ್ಜನ್ಯಕ್ಕೆ ಕೊನೆಯೇ ಇಲ್ಲ . ಅಂದಮೇಲೆ ಈ ಕಾನೂನು ಇದ್ದು ಏನು ಪ್ರಯೋಜನ ಎಂಬಂತಾಗಿದೆ. ಇಂತಹ ದುಷ್ಟರಿಗೆ ಕಾನೂನಿನ ಭಯವೂ ಇಲ್ಲ ಶಿಕ್ಷೆಯ ಭಯವೂ ಇಲ್ಲ ಎಂಬಂತಾಗಿದೆ. ಯೋಚಿಸಿ ಹಣಬಲ, ಅಧಿಕಾರ ಹಾಗೂ ದುಷ್ಚಟಗಳಿಗೆ ಬಲಿಯಾದ ಕೆಲವರು ನಶೆಯ ಬಲದಿಂದ ಮನಸ್ಸಿಗೆ ಬಂದ ಹಾಗೆ ದುರ್ಬಲರ ಮೇಲೆ ದೌರ್ಜನ್ಯ ಎಸಗತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಇಂದು ಪವಿತ್ರ ಕುರಾನಿನ ಆದೇಶಗಳಾಗಲಿ, ಮೊಹಮ್ಮದ್ ಪೈಗಂಬರರ ಸಂದೇಶಗಳು ಯಾವುದೇ ದೇಶದ ಕಾನೂನಾಗಿಲ್ಲ, ಯಾವುದೇ ಕಲ್ಲು ಬಂಡೆಗಳ ಮೇಲೆ ಕೆತ್ತಿಸಿಲ್ಲ, ಆದರೂ ಸಹ ಇಂದು ಜಗತ್ತಿನ ಎಡೆಯಲ್ಲಿಯೂ ಸಹ ಬಹಳಷ್ಟು ಜನರು ಅದರಲ್ಲಿಯೂ ವಿಶೇಷವಾಗಿ ಬಹುತೇಕ ಮುಸಲ್ಮಾನ ಬಂಧುಗಳು ಅವರು ಕೊಟ್ಟಂತಹ ಒಂದೊಂದು ಆದೇಶಗಳನ್ನು ಸಹ ಚಾಚೂ ತಪ್ಪದೇ ಆಚರಿಸುತ್ತಿದ್ದಾರೆ. ಕಾರಣ ಪ್ರವಾದಿ ಮಹಮ್ಮದ್ ಪೈಗಂಬರರು ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜನ ಮೆಚ್ಚುತ್ತಿರುವ ಆದರ್ಶ ಧಾರ್ಮಿಕ ನಾಯಕರು. ಅತಿ ಹೆಚ್ಚು ಪ್ರೀತಿಸಲ್ಪಡುವ ವರು, ಗೌರವಿಸಲ್ಪಡುವವರು ಹಾಗೂ ನೆನಪಿಸಲ್ಪಡುತ್ತಿರುವಂತಹ ಹೆಸರಲ್ಲಿ ಮೊಹಮ್ಮದ್ ಪೈಗಂಬರರು ಮೊದಲಿಗರು ಎಂದರೆ ತಪ್ಪಾಗಲಾರದು.
ಕಾರಣ ಅವರು ಇಸ್ಲಾಂ ಧರ್ಮದ ಅಂತಿಮ ಪ್ರವಾದಿಗಳು. ಅಲ್ಲದೆ ಅವರು ಅಷ್ಟೊಂದು ಜಗತ್ಪ್ರಸಿದ್ಧಿಯಾಗಲು ಕಾರಣ ಅವರ ವ್ಯಕ್ತಿತ್ವ ಅಂದರೆ ಪರ್ಸನಾಲಿಟಿ ಹಾಗೂ ಅವರ ಚಾರಿತ್ರ್ಯ ಅಂದರೆ ಕ್ಯಾರೆಕ್ಟರ್. ಇನ್ನೊಂದು ಅವರ ಜೀವನ ನಡೆದಾಡುವ ಕುರಾನ್ ಆಗಿತ್ತು ಎಂದು ಅವರ ಪತ್ನಿ , ಆಯಿಷಾ ಅವರು ಹೇಳುತ್ತಾರೆ. ಅಂದರೆ ಖುರಾನ್‌ನಲ್ಲಿರು ವಂತಹ ಆದೇಶಗಳನ್ನ ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪರಿಶುದ್ಧ ಜೀವನವನ್ನು ನಡೆಸಿ ಅದರಂತೆ ತಮ್ಮ ಅನುಯಾಯಿಗಳು ಸಹ ನುಡಿದಂತೆ ನಡೆಯಬೇಕೆಂದು ಆದೇಶ ಮಾಡಿದ್ದರು. ಏಕೆಂದರೆ ಈ ಜಗತ್ತಿಗೆ ಮಹಮ್ಮದ್ ಪೈಗಂಬರರು ಒಂದು ಬೆಳಕು ತೋರಿಸುವ ದೀಪದ ಹಾಗೆ ಬಂದಿರುವವರು. ಅeನದಿಂದ eನದೆಡೆಗೆ ಕೆಡುಕನ್ನು ಅಳಿಸಿ ಒಳಿತನ್ನು ಸ್ಥಾಪಿಸಲು ಬಂದಿರುವಂತ ಹವರು. ಈ ಸಮಾಜದಲ್ಲಿ ಸಮಾನತೆ ಯನ್ನು ಸ್ಥಾಪಿಸಲು ಬಂದಿರುವವರು. ಇದಕ್ಕೆ ಸಾಕ್ಷಿಯಾಗಿ ಮೊಟ್ಟಮೊದಲ ಬಾರಿಗೆ ಕಪ್ಪು ವರ್ಣಿಯರಾದ ಹಜರತ್ ಬಿಲಾಲ್ ಅವರಿಗೆ ಅಹನ ಕರೆ ಅಂದರೆ ಅಜಾನ್ ಕೊಡಲು ಅವಕಾಶ ನೀಡಿದ್ದು, ಇನ್ನೊಂದು ಬಹುಶಃ ನೀವು ನೋಡಿರಬಹುದು ಹಜ್‌ನ ದೃಶ್ಯವನ್ನು ಅದರಲ್ಲಿ ಕರಿಯ, ಬಿಳಿಯ, ರಾಜಮಂತ್ರಿ , ಮಾಲೀಕ ಗುಲಾಮ , ಬಡವ-ಬಲ್ಲಿದ ಹೀಗೆ ಜಗತ್ತಿನ ಎ ಕಡೆಯಿಂದ ಬಂದಂತಹವರು ಭುಜಕ್ಕೆ ಭುಜ ತಾಗಿಸಿ ನಿಂತು ನಮಾಜ್ ಮಾಡುವಂತಹ ಕಾಬವನ್ನು ಪ್ರದರ್ಶನ ಮಾಡುವಂತಹ ದೃಶ್ಯಗಳನ್ನ ನೀವು ನೋಡಿರಬಹುದು. ಇದಕ್ಕಿಂತ ಸಮಾನತೆಗೆ ಬೇರೊಂದು ಉದಾಹರಣೆ ಜಗತ್ತಿ ನಲ್ಲಿ ಸಿಗುವುದಿಲ್ಲ ಎಂದರೆ ತಪ್ಪಾಗಲಾರದು.
ಇಸ್ಲಾಂನಲ್ಲಿ ಪ್ರತ್ಯೇಕತೆಗೆ ಅವಕಾಶವಿಲ್ಲ. ಅಂದರೆ ಅಹನ ಎದುರು ಎಲ್ಲರೂ ಸಹ ಸಮಾನರು, ಯಾವುದೇ ಧರ್ಮಕ್ಕೆ ಸೇರಿರಲಿ ಅವರೊಂದಿಗೆ ಪ್ರೀತಿ-ವಿಶ್ವಾಸ ಸ್ನೇಹದಿಂದ ಸಹಕಾರ ಹೊಂದಾಣಿಕೆ ಸಹಬಾಳ್ವೆಯಿಂದ ಇರಬೇಕೆಂದು ಇಸ್ಲಾಂ ಆದೇಶಿಸುತ್ತದೆ. ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ, ಸಹಬಾಳ್ವೆ ಸಾಧ್ಯ.
ಪ್ರವಾದಿ ಮೊಹಮ್ಮದ್ ಸಲ್ಲಮ್ಮರ ೬೩ ವರ್ಷಗಳ ಜೀವನದಲ್ಲಿ ೨೩ ವರ್ಷಗಳ ಕಾಲ ಸಮಾಜದಲ್ಲಿ ತೊಡಗಿದ್ದ ಕೆಡುಕುಗಳಾದ ವ್ಯಭಿಚಾರ , ಶರಾಬು, ಜೂಜು, ಬಡ್ಡಿ , ಜಗಳ ಕೊಲೆ , ಹಿಂಸೆ , ದಲಿತರ ಶೋಷಣೆ , ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಹೆಣ್ಣು ಮಕ್ಕಳ ಜೀವಂತ ದಹನ ಇವುಗಳ ವಿರುದ್ಧ ಹೋರಾಡಿ ಸಮಾಜದಲ್ಲಿ ಒಂದು ಹೊಸ ಕ್ರಾಂತಿಯನ್ನು ತಂದರು. ಶೋಷಿತರ, ಮರ್ದಿತರ, ನಿರ್ಗತಿಕರ ಅಸಹಾಯಕರ ಬಂಧು ಆಗಿ ಬಂದ ಮೊಹಮ್ಮದರು ಲೋಕ ಕಂಡ ಆದರ್ಶ ನಾಯಕರಾಗಿ zರೆ. ಕೊನೆಯಲ್ಲಿ ಅವರು ಇಹಲೋಕ ತ್ಯಜಿಸುವಾಗ ತಮ್ಮ ಅನುಯಾಯಿಗಳಿಗೆ ಹೇಳುವುದು ನಾನು ನಿಮಗಾಗಿ ಒಂದು ವಸ್ತುವನ್ನು ಬಿಟ್ಟು ಹೋಗುತ್ತಿದ್ದೇನೆ ಅದನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ ಅದನ್ನು ಅಹನ ರಸ್ಸಿ ಹಗ್ಗ ಅಂದರೆ ಅದು (ಪವಿತ್ರ ಖುರಾನ್ ಮತ್ತು ಮೊಹಮ್ಮದ್ ಪೈಗಂಬರರ ಹದೀಸ್‌ಗಳು) ಅಂದರೆ ಅವರ ಜೀವನಕ್ರಮ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಮತ್ತು ಇತರರಿಗೂ ಸಹ ಅದನ್ನು ತಿಳಿಸಿ ಎಂದು ಹೇಳಿzರೆ. ಇದರಿಂದ ನಿಮ್ಮ ಇಹಪರಗಳು ಯಶಸ್ವಿಯಾಗುತ್ತವೆ ಎಂದು ನುಡಿದಿದ್ದಾರೆ.
ನಿಜಕ್ಕೂ ಹೇಳಬೇಕೆಂದರೆ ಬಹುತೇಕ ನಮ್ಮ ಯುವ ಪೀಳಿಗೆ ಇದನ್ನು ಮರೆತು ತಪ್ಪು ದಾರಿ ಹಿಡಿಯುತ್ತಿzರೆ. ಮಹಮದ್ ಪೈಗಂಬರರು ಹೇಳಿದ್ದು ಅಮಲು ಕೊಡುವ ಪದಾರ್ಥಗಳಿಂದ ದೂರವಿರ ಬೇಕು. ನಿಮ್ಮ ನಾಲಿಗೆ, ನಿಮ್ಮ ದೃಷ್ಟಿಗಳನ್ನು ಮತ್ತು ನಿಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳಿ. ಅಂದರೆ ಯಾರು ಅಹನು ಕೊಟ್ಟಿರುವ ಕಣ್ಣು, ಕಿವಿ ನಾಲಿಗೆ ಹೃದಯಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವುದಿಲ್ಲವೋ ಅವನನ್ನು ಪ್ರಾಣಿಗಳಿಗೆ ಹೋಲಿಸಲಾಗಿದೆ.
ಏಕೆಂದರೆ ಅಂತಿಮ ದಿನದಂದು ಇವೆಲ್ಲವುಗಳು ಸಹ ನಿಮ್ಮ ವಿರುದ್ಧ ಸಾಕ್ಷಿ ಹೇಳುತ್ತವೆ ಎಂಬುದನ್ನು ನಾವು ನೀವು ಮರೆಯಬಾರದು. ಸಮಾಜದಲ್ಲಿ ಸಾಮಾಜಿಕವಾಗಿ, ನೈತಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ವೈeನಿಕವಾಗಿ, ಒಬ್ಬ ವ್ಯಕ್ತಿ ಯಾವ ರೀತಿ ಜೀವನವನ್ನು ನಡೆಸಿದರೆ ಉತ್ತಮ ನಾಗರಿಕನಾಗಬಲ್ಲನು ಎಂಬುದಕ್ಕೆ ಒಂದು ಮಾರ್ಗದರ್ಶಿ ಗ್ರಂಥ ಅಂದರೆ ಅದು ಪವಿತ್ರ ಕುರಾನ್. ನಿಮ್ಮ ಎ ಪ್ರಶ್ನೆಗಳಿಗೂ ಸಹ ಕುರಾನ್ ಉತ್ತರವನ್ನು ನೀಡಬಲ್ಲದು. ನಿಮ್ಮ ಸಂದೇಶಗಳನ್ನು ದೂರ ಮಾಡಬಲ್ಲದು. ನಿಮ್ಮನ್ನು ನೈತಿಕತೆಯಡೆಗೆ ಕರೆತರುತ್ತದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಒಮ್ಮೆ ಪವಿತ್ರ ಖುರಾನ್ ಅನ್ನು ಓದಲು ಪ್ರಯತ್ನಿಸಿ ನಿಜಕ್ಕೂ ನಿಮ್ಮ ಪ್ರತಿಯೊಂದು ಪ್ರಶ್ನೆಗೂ ಸಹ ಉತ್ತರ ಸಿಗುತ್ತದೆ.
ಸ್ನೇಹಿತರೆ ಈ ನಿಟ್ಟಿನಲ್ಲಿ ಜಮಾತೆ ಇಸ್ಲಾಮಿ ಹಿಂದ್ ಸೆಪ್ಟೆಂಬರ್ ೨೮ರಿಂದ ಅಕ್ಟೋಬರ್ ೬ರವರೆಗೆ ಸಮಾಜದ ಸಮಾನತೆಯ ಶಿಲ್ಪಿ ಮೊಹಮ್ಮದ್ ಪೈಗಂಬರರು ಎಂಬ ಅಭಿಯಾನದ ಮೂಲಕ ಪೈಗಂಬರರ ಸಂದೇಶ ಸಮಾನತೆಯನ್ನು ಸಾರುವ ಆದೇಶಗಳನ್ನ ಸಮಾಜದ ಸರ್ವರಿಗೂ ತಲುಪಿಸುವ ಒಂದು ಪ್ರಯತ್ನವನ್ನು ಮಾಡುತ್ತಿzರೆ. ಏಕೆಂದರೆ ಒಂದು ಸಮಾಜ ಆರೋಗ್ಯದ ಸಮಾಜ, ಸಮೃದ್ಧ ಸಮಾಜವಾಗಲು ಸಮಾಜದಲ್ಲಿರುವಂತಹ ಎ ಧರ್ಮದ ಜನರು ಸಹ ಹೊಂದಾಣಿಕೆಯಿಂದ, ಸಹಕಾರದಿಂದ ಸಮಾನತೆ, ಸಹಬಾಳ್ವೆಯಿಂದ ಇನ್ನೊಂದು ಧರ್ಮವನ್ನು ಗೌರವಿಸುವುದರಿಂದ ಮಾತ್ರ ಸಾಧ್ಯ. ಸಹಧರ್ಮಗಳನ್ನು ಸಹಿಷ್ಣುತ ಭಾವದಿಂದ ನೋಡಬೇಕು. ಇತರ ಧರ್ಮಗಳನ್ನು ಗೌರವಿಸಬೇಕು. ಇಲ್ಲದಿದ್ದರೆ ಈಗ ನಾವು ನೋಡುತ್ತಿರುವ ಒಡೆದು ಹೋಗುತ್ತಿರುವ ಸಮಾಜವನ್ನು ಮುಂದಿನ ದಿನಗಳಲ್ಲಿ ಚೂರುಚೂರು ಆಗುವುದನ್ನು ಕಾಣುತ್ತೇವೆ. ಆದ್ದರಿಂದ ಎಲ್ಲರೂ ಸಹ ಈ ಅಭಿಯಾನಕ್ಕೆ ಸಹಕರಿಸಿ ಅಭಿಯಾನವನ್ನು ಯಶಸ್ವಿಪಡಿಸಬೇಕಾಗಿ ವಿನಯದಿಂದ ಕೋರಿಕೊಳ್ಳುತ್ತೇನೆ.
ಲೇಖನ : ಆಯಿಷಾ, ಶಿವಮೊಗ್ಗ