ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಕೆಸರು ಗzಯಂತಾದ ಶಾಲಾ ಆವರಣ

Share Below Link

ಹುಣಸಗಿ: ಕಳೆದ ಕೆಲ ವರ್ಷ ಗಳಿಂದಲೂ ಶಾಲಾ ಆವರಣದಲ್ಲಿ ನೀರು ಹರಿಯುತ್ತಿದ್ದು ಇದರ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿಗಳು ನಿರ್ಲಕ್ಷ್ಯ ತೋರುತ್ತಿದ್ದು, ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.
ಅಲ್ಲದೇ ಬೆಳಿಗ್ಗೆ ಎದ್ದು ತಕ್ಷಣ ಮನೆಯಿಂದ ಶಾಲೆ ಬರುವ ಸಣ್ಣ ಪುಟ್ಟ ಮಕ್ಕಳು ಮನೆಯಲ್ಲಿ ಸ್ವಚ್ಚ ಬಟ್ಟೆ ಧರಿಸಿಕೊಂಡು ಬಂದು ಕೆಸರು ಗದ್ದೆಯಂತಿರುವ ಶಾಲೆಯ ಆವರಣದಲ್ಲಿ ಆಟವಾಡಿ ಮೈಯ ಕೆಸರು ಮಾಡಿಕೊಂಡು ಮನೆಗೆ ತೆರಳುವ ಪರಿಸ್ಥಿತಿ ಉಂಟಾಗಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಶಾಲಾ ಅವ್ಯವಸ್ಥೆಯನ್ನು ಡಿದ ಪಾಲಕರು ಸರಕಾರಿ ಶಾಲೆಗೆ ಸಾಕಷ್ಟು ಅನುದಾನ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದು ಗೊಣಗುತ್ತಿದ್ದು, ಇದನ್ನು ಸರಿಪಡಿಸುವ ಗೊಜಿಗೆ ಸದರಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಇತ್ತ ಕಡೆ ಗಮನ ಹರಿಸದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ.