ಜಿಲ್ಲಾ ಸುದ್ದಿತಾಜಾ ಸುದ್ದಿ

ವೀರಭದ್ರೇಶ್ವರಸ್ವಾಮಿ ದೇವಳದ ಅಭಿವೃದ್ಧಿಗೆ ಸಂಸದರ ಭರವಸೆ

Share Below Link

ಭದ್ರಾವತಿ: ಹಳೇ ನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನವನ್ನು ಉತ್ತಮ ರೀತಿಯಲ್ಲಿ ನಿರ್ಮಾಣ ಮಾಡಿದ್ದು ಅದರ ಮುಂದುವರೆದ ಭಾಗವಾಗಿ ೨ನೇ ಹಂತದ ಶ್ರೀ ಬನಶಂಕರಿ ಸಮುದಾಯ ಭವನದ ಕಾಮಗಾರಿಗೆ ಮುಂದಿನ ದಿನಗಳಲ್ಲಿ ೫೦ ಲಕ್ಷ ರೂ.ಗಳನ್ನು ಸಂಸದರ ಅನುದಾನದಿಂದ ನೀಡಲಾಗು ವುದು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ವೀರಶೈವ ಸೇವಾ ಸಮಿತಿವತಿಯಿಂದ ಶ್ರೀ ಬನಶಂಕರಿ ದೇವಾಲಯದ ಆವರಣದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ೧೦ನೇ ದಿನದಂದು ಹಮ್ಮಿಕೊಂಡಿದ್ದ ದುರ್ಗಾ ಸಪ್ತಶತಿ ಪಾರಾಯಣ ಹೋಮದ ಪೋರ್ಣಾಹುತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಧ್ಯಕ್ಷ ಆರ್.ಮಹೇಶ್ ಕುಮಾರ್, ಎಂ.ವಾಗೀಶ್ ಕುಮಾರ್ ಕೋಠಿ, ಮಲ್ಲಿಕಾರ್ಜುನ್, ನಂಜಪ್ಪ, ಷಣ್ಮುಖಪ್ಪ, ಉದಯ್ ಕುಮಾರ್, ನಾಗಾನಂದ, ಶೋಭಾ, ನಾಗರತ್ನ, ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.