ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸಂಸದ ಕಾಗೇರಿ ಅವರಿಂದ ರಾಷ್ಟ್ರಗೀತೆಗೆ ಅಪಮಾನ: ಎನ್‌ಎಸ್‌ಯುಐ ಬೃಹತ್ ಪ್ರತಿಭಟನೆ…

Share Below Link

ಶಿವಮೊಗ್ಗ : ಭಾರತ ದೇಶದ ರಾಷ್ಟ್ರಗೀತೆ ಜನಗಣ ಮನ ವನ್ನು ಬ್ರಿಟೀಷರ ಸ್ವಾಗತಕ್ಕೆ ರಚಿಸಿದ್ದು, ಅದನ್ನು ರಾಷ್ಟ್ರಗೀತೆಯನ್ನಾಗಿ ಮಾಡಿದ್ದು ಸರಿಯಲ್ಲ ಎಂದು ಹೇಳುವ ಮೂಲಕ ೧೪೦ ಕೋಟಿ ಭಾರತೀಯರ ಅಸ್ಮಿತೆಯಾಗಿರುವ ರಾಷ್ಟ್ರಗೀತೆಗೆ ಅಪಮಾನವೆಸಗಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸಂಸದ ಸ್ಥಾನದಿಂದ ವಜಗೊಳಿಸಬೇಕೆಂದು ಶಿವಮೊಗ್ಗ ಜಿ ಎನ್‌ಎಸ್‌ಯುಐ ಒತ್ತಾಯಿಸುತ್ತಿದೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ನ.೫ರಂದು ಹೊನ್ನಾವರದಲ್ಲಿ ಆಯೋಜಿಸಿದ್ದ ಏಕತೆಗಾಗಿ ನಡಿಗೆ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯು ರಾಷ್ಟ್ರಗೀತೆ ಯಾಗಬೇಕೆಂದು ಪ್ರತಿಪಾದಿಸುತ್ತಾ ಭಾರತೀಯರೆಲ್ಲರೂ ಒಪ್ಪಿಕೊಂಡಿರುವ ಜನಗಣಮನ ರಾಷ್ಟ್ರಗೀತೆಯಾಗಿರುವುದು ಸರಿಯಲ್ಲ, ಅದನ್ನು ಬ್ರಿಟೀಷರ ಸ್ವಾಗತಕ್ಕೆ ರಚಿಸಿದ್ದು ಎಂದು ಹೇಳುವ ಮೂಲಕ ರಾಷ್ಟ್ರಗೀತೆಗೆ ಅಪಮಾನ ಮಾಡುವ ಮೂಲಕ ದೇಶದ್ರೋಹದ ಕೃತ್ಯವೆಸಗಿದ್ದಾರೆ. ಇದನ್ನು ಶಿವಮೊಗ್ಗ ಜಿ ಎನ್‌ಎಸ್‌ಯುಐ ತೀವ್ರವಾಗಿ ಖಂಡಿಸುತ್ತದೆ ಎಂದರು.
ವಿಶ್ವೇಶ್ವರ ಹೆಗಡೆ ಕಾಗೇರಿ ಯವರು ರಾಜ್ಯದ ಶಿಕ್ಷಣ ಸಚಿವರಾಗಿದ್ದವರು, ವಿಧಾನ ಸಭೆಯ ಸ್ಪೀಕರ್ ಹುzಯಂತಹ ಸಾಂವಿಧಾನಿಕ ಹುzಯನ್ನು ನಿಭಾಯಿಸಿದ್ದವರು. ಆದರೆ, ಸಂಸದರಾಗಿ ಜನರಲ್ಲಿ ರಾಷ್ಟ್ರಗೀತೆ, ಸಂವಿಧಾನಗಳ ಬಗ್ಗೆ ಗೌರವ ಭಾವನೆ ಮೂಡಿಸುವಂತಹ ಮಾತುಗಳನ್ನಾ ಡುವ ಬದಲು, ಮನುವಾದಿ ಗಳಿಂದ ಪ್ರೇರಿತವಾದ ಪೂರ್ವಾಗ್ರಹ ಪೀಡಿತರಾಗಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ರಾಷ್ಟ್ರಗೀತೆಗೆ ಅಪಮಾನ ಮಾಡಿzರೆ ಎಂದು ಆಕ್ರೋಶ ಹೊರಹಾಕಿದರು.


ಮನುವಾದಿ ಮನೋಭಾವ ದವರು ದೇಶದ ಸಂವಿಧಾನವನ್ನೂ ಒಪ್ಪುತ್ತಿಲ್ಲ, ರಾಷ್ಟ್ರ ಧ್ವಜ, ರಾಷ್ಟ್ರಗೀತೆ ಯನ್ನು ಒಪ್ಪುತ್ತಿಲ್ಲ. ದೇಶದಲ್ಲಿ ಆಂತರಿಕವಾಗಿರುವ ನಿಜವಾದ ದೇಶದ್ರೋಹಿಗಳೆಂದರೆ ಇವರೆ ಆಗಿದ್ದಾರೆ ಎಂದರು.
ಗೌರವಾನ್ವಿತ ರಾಷ್ಟ್ರಪತಿಗಳು ಕೂಡಲೇ ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಸಂಸದ ಸ್ಥಾನದಿಂದ ವಜಗೊಳಿಸಬೇಕು. ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ದೇಶದ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಈ ಮೂಲಕ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಲಯದ ಅಧ್ಯಕ್ಷ ಚೇತನ್ ಕೆ, ಯುವ ಮುಖಂಡ ಮಧುಸೂದನ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಡ್ಡು, ಎನ್‌ಎಸ್‌ಯುಐ ಜಿ ಅಧ್ಯಕ್ಷ ವಿಜಯ್, ಕಾರ್ಯಾಧ್ಯಕ್ಷ ರವಿ ಕಾಟಿಕೆರೆ, ನಗರ ಅಧ್ಯಕ್ಷ ರವಿ ಕುಮಾರ್ ಪ್ರಮುಖರಾದ ಚಂದ್ರೋಜಿ ರಾವ್, ವರುಣ್ , ಅಭಿ , ಆದಿತ್ಯ,ಸುಭಾನ್. ಫರಾಜ್ ಲೋಹಿತ್, ಯೂಸುಫ್ ರಿಹಾನ್, ಅಲ್ಹಾನ್, ಉಮ್ಮಾರ್ ಫಾರೂಕ್, ಸಮೀರ್, ಅಭಿಷೇಕ್, ಶ್ರೀಕಾಂತ್, ಅಂಜನ್, ಸೃಜನ್ ಪ್ರಸನ್ನ, ಆಕಾಶ್, ನಂದನ್, ನವೀನ್ ಇನ್ನಿತರರಿದ್ದರು.