ಭಾವನೆಗಳನ್ನು ಅರ್ಥೈಸುವ ಶಕ್ತಿ ಮಾತೃಭಾಷೆಗಿದೆ…
ಶಿಕಾರಿಪುರ: ಮಾತೃ ಭಾಷೆಗೆ ಮಾತ್ರ ಭಾವನೆಗಳನ್ನು ಅರ್ಥೈಸಿ ಕೊಳ್ಳುವ ವಿಶೇಷ ಶಕ್ತಿ ಇದ್ದು, ವಿದ್ಯಾರ್ಥಿಗಳು ಮಾತೃ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವ ಜತೆಗೆ ಸಾಹಿತ್ಯ ಓದುವ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಇಲ್ಲಿನ ಸರ್ಕಾರಿ ಬಾಲಕಿಯರ ಪಪೂ ಕಾಲೇಜು ಪ್ರಾಚಾರ್ಯ ಕೆ.ಪಿ. ಮಲ್ಲಿಕಾರ್ಜುನ್ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪಪೂ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಬಾಲಕಿಯರ ಪಪೂ ಕಾಲೇಜು ಆಶ್ರಯದಲ್ಲಿ ನಡೆದ ಸಾಹಿತ್ಯ ಸಂಸ್ಕೃತಿ ವಿಷಯ ಕುರಿತು ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹಲವು ಸಾಹಿತಿಗಳು ಕೊಡುಗೆ ನೀಡಿದ್ದು, ಎಡಪಂಥೀಯ-ಬಲಪಂಥೀಯ ಸಾಹಿತ್ಯ ಎಂಬ ಭೇದವಿಲ್ಲದೇ ಎ ಲೇಖಕರು ಬರೆದ ಸಾಹಿತ್ಯ ಪುಸ್ತಕಗಳನ್ನು ಓದಬೇಕು. ಲೇಖಕರು ಕೆಲವೊಮ್ಮೆ ತಮ್ಮ ಜೀವನದ ಅನುಭವಗಳಿಗೆ ಸಾಹಿತ್ಯದ ರೂಪ ನೀಡಿರುತ್ತಾರೆ ಎಂz ಅವರು, ಮಾತೃಭಾಷೆಗೆ ಮಾತ್ರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ. ಭಾಷೆ ಒದಲು ಕಲಿಯಲು ಪೂರಕವಾಗುತ್ತದೆ. ಆದರೆ ಸಾಹಿತ್ಯ ಆನಂದಿಸಲು ಬೇಕು ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್. ರಘು ಅಧ್ಯಕ್ಷತೆ ವಹಿಸಿ ಮಾತನಾಡಿ, ೧೯೧೫ರಲ್ಲಿ ನಾಲ್ವಡಿ ಕೃಷ್ಣರಾಜ ಓಡೆಯರ್ ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಹೊರಹೊಮ್ಮಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದೆ. ವಿದ್ಯಾರ್ಥಿ ಜೀವನದಿಂದಲೇ ಸಾಹಿತ್ಯ ಪುಸತಿಕ ಹಾಗೂ ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ನೀವು ಬೆಳೆಸಿಕೊಳ್ಳಬೇಕು. ಲೇಖಕರಾಗಿ, ಕವಿಗಳಾಗಿ ಹೊರಹೊಮ್ಮುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಬೇಕು. ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಶಿಕಾರಿಪುರ ತಾಲೂಕಿನ ಕೊಡುಗೆ ವಿಷಯ ಕುರಿತು ಮಾತನಾಡಿದ ಸರ್ಕಾರಿ ಸ್ವತಂತ್ರ ಪಪೂ ಕಾಲೇಜು ಉಪನ್ಯಾಸಕ ಬಂಗಾರಪ್ಪ, ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದ ಅಲ್ಲಮಪ್ರಭು, ಅಕ್ಕಮಹಾದೇವಿ, ಸತ್ಯಕ್ಕ ಸೇರಿದಂತೆ ಹಲವು ಶರಣರು ಹಾಗೂ ಮೊದಲ ಕನ್ನಡ ಸಾಮ್ರಾಜ್ಯ ಸ್ಥಾಪಕ ಮಯೂ ರವರ್ಮ ಈ ತಾಲೂಕಿ ನಲ್ಲಿ ಜನ್ಮತಾಳಿರುವುದು ನಾವೆ ಹೆಮ್ಮೆ ಪಡುವ ವಿಷಯವಾಗಿದೆ. ಸಾಂಸ್ಕೃ ತಿಕ ಶ್ರೀಮಂತಿಕೆ ಶಿಕಾರಿಪುರ ತಾಲೂಕು ಹೊಂದಿದೆ. ಸಾಹಿತ್ಯಿಕ ವಾಗಿ, ಸಾಂಸ್ಕೃತಿಕವಾಗಿ ಹಾಗೂ ಐತಿಹಾಸಿಕವಾಗಿ ಶಿಕಾರಿಪುರ ಪ್ರಸಿದ್ದಿ ಹೊಂದಿದ್ದು, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಕವ ಯತ್ರಿ ನಂದಾಪ್ರೇಮ್ ಕುಮಾರ್ ಹಾಗೂ ವಿದ್ಯಾರ್ಥಿನಿ ರೇಣುಕಾ ಕವನ ವಾಚಿಸಿದರು.
ದತ್ತಿದಾನಿ ಸುರಭಿ ಬಳಗ ಅಧ್ಯಕ್ಷ ಮೃತ್ಯುಂಜಯಪ್ಪ,ಮಾಜಿ ಅಧ್ಯಕ್ಷ ಪಾಂಡುರಂಗ ರಾಯ್ಕರ್, ಉಪಾಧ್ಯಕ್ಷ ಯು.ಎಸ್. ರುದ್ರ ಯ್ಯ, ವ್ಯವಸ್ಥಾಪಕ ಉಮೇಶ್, ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ರಾಘವೇಂದ್ರ, ಬೇಗೂರು ಮಂಜ ಪ್ಪ, ಎಸ್.ಎಂ. ಪ್ರಕಾಶ್, ಉಪ ನ್ಯಾಸಕರಾದ ಹೋಬ್ಯಾನಾಯ್ಕ, ಕೆ.ಎಚ್. ಪುಟ್ಟಪ್ಪ, ಪ್ರಕಾಶ್ ಉಪಸ್ಥಿತರಿದ್ದರು.