ಜಿಲ್ಲಾ ಸುದ್ದಿತಾಜಾ ಸುದ್ದಿ

ಮೋದಿ ವಿಶ್ವಮೆಚ್ಚಿದ ನಾಯಕ : ರೇಣುಕಾಚಾರ್ಯ

Share Below Link

ಹೊನ್ನಾಳಿ : ಕಾಂಗ್ರೇಸ್ ಸರ್ಕಾರ ರಚನೆಯಾಗಿ ಎರಡು ತಿಂಗಳಾಗಿದ್ದು, ಆಗಲೇ ಸಚಿವರ ವಿರುದ್ದ ಸ್ವಪಕ್ಷೀಯ ಶಾಸಕರೇ ಅಸಮಾಧಾನ ಹೊರ ಹಾಕಿದ್ದು, ಕಾಂಗ್ರೇಸ್‌ನಲ್ಲಿ ಎಲ್ಲವೂ ಸರಿ ಯ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಮಾಸಡಿ, ತರಗ ನಹಳ್ಳಿ, ಸಿಂಗಟಗೆರೆ, ಕುಂದೂರು, ಕೂಲಂಬಿ, ಕೆಂಗಲಹಳ್ಳಿ, ಮುಕ್ತೇನಹಳ್ಳಿ ಗ್ರಾಮದಲ್ಲಿ ಕೇಂದ್ರ ಸರ್ಕಾರ ೯ ವರ್ಷ ಪೂರೈಸಿದ ಹಿನ್ನೆ ಲೆಯಲ್ಲಿ ಜನಸಂಪರ್ಕ ಅಭಿಯಾ ನದ ಅಡಿಯಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರವನ್ನು ಮನೆ ಮನೆಗಳಿಗೆ ವಿತರಿಸಿ ಅವರು ಮಾತನಾಡಿದರು.
ಅನುದಾನ ಬಿಡುಗಡೆ ಮಾಡುವುದಕ್ಕೂ ಸಚಿವರು ಮೂರನೇ ವ್ಯಕಿ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿzರೆ, ಸಚಿವರು ತಮಗೆ ಬೇಕಾದ ಅಧಿಕಾರಿಗಳಿಗೆ ಮಣೆ ಹಾಕಿ ಸ್ವಜನಪಕ್ಷಪಾತ ಮಾಡುತ್ತಿzರೆ, ನಮ್ಮ ಯಾವುದೇ ವರ್ಗಾವಣೆ ಶಿಫಾರಸ್ಸು ಪತ್ರಗಳಿಗೆ ಮಾನ್ಯತೆ ಕೊಡುತ್ತಿ ಎಂದು ೩೦ ಹೆಚ್ಚು ಜನ ಶಾಸಕರು ಸಹಿ ಹಾಕಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಕಾಂಗ್ರೇಸ್‌ನಲ್ಲಿ ಎಲ್ಲವೂ ಸರಿಇ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ರೇಣು ಕಾಚಾರ್ಯ ಹೇಳಿದರು.
ಇನ್ನು ಪ್ರಧಾನಮಂತ್ರಿ ನರೇಂ ದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿಯಾಗಿ ೯ ವರ್ಷ ಪೂರೈಸಿದ್ದು, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿzರಲ್ಲದೇ, ಸಾಕಷ್ಟು ಜನಪರ ಸಾಧನೆಗಳನ್ನು ಮಾಡಿದ್ದು ಅವುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡ ಬೇಕೆಂದರು.
ನರೇಂದ್ರಮೋದಿ ಅವರು ಪ್ರಧಾನಮಂತ್ರಿಯಾದ ಮೇಲೆ ದೇಶ ಆರ್ಥಿಕವಾಗಿ ಮುಂದು ವರೆಯುತ್ತಿರುವ ದೇಶವಾಗಿದೆ ಎಂದ ರೇಣುಕಾಚಾರ್ಯ, ೩ನೇ ಬಾರಿಗೆ ಮೋದಿಜಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡ ಲು ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ನರೇಂದ್ರ ಮೋದಿ ಅವರು ವಿಶ್ವಮೆಚ್ಚಿದ ನಾಯಕರಾಗಿದ್ದು, ಬೇರೆ ಬೇರೆ ರಾಷ್ಟ್ರಗಳು ಅವರಿಗೆ ರೆಡ್ ಕಾರ್ಪಟ್ ಹಾಕಿ ಸ್ವಾಗತ ಮಾಡುತ್ತಿವೆ ಎಂದ ರೇಣುಕಾ ಚಾರ್ಯ, ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾದ ಮೇಲೆ ಭಾರತ ಆರ್ಥಿಕವಾಗಿ ಮುಂದುವರೆಯುತ್ತಿರುವ ದೇಶವಾಗುತ್ತಿದೆ ಎಂದರು.
ಈ ಸಂದರ್ಭ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಜಿಉಪಾಧ್ಯಕ್ಷ ನೆಲವೊನ್ನೆ ಮಂಜುನಾಥ್, ಗ್ರಾ.ಪಂ. ಸದಸ್ಯ ರಾದ ಧನಂಜಯ್ಯ, ರೆಹಮತಿ, ಮುಖಂಡರಾದ ಶಾಂತರಾಜ್, ಉದಯ್, ಕಾಂತರಾಜ್, ಹಾಲೇಶ್,ಶರತ್ ಇದ್ದರು.