ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಮಸೀದಿಗಳಲ್ಲಿ ಅಜಾನ್ ವಿರುದ್ಧ ಎಂಎಲ್‌ಸಿ ಅರುಣ್ ಹೋರಾಟದ ಎಚ್ಚರಿಕೆ…

Share Below Link

ಶಿವಮೊಗ್ಗ : ಮಸೀದಿ ಗಳಲ್ಲಿ ಅಜಾನ್ ಕೂಗುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಆಕ್ಷೇಪ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇದರ ವಿರುದ್ದ ಹೋರಾಟ ಶುರುವಾಗಲಿದೆ ಎಂದು ಸುದ್ದಿಗೋಷ್ಟಿಯಲ್ಲಿ ಎಚ್ಚರಿಸಿzರೆ.
ರಾಜ್ಯ ಸರ್ಕಾರವು ಸಂಘ- ಸಂಸ್ಥೆಗಳ ಪಥ ಸಂಚಲನಕ್ಕೆ ವಿಧಿಸಿರುವ ನಿರ್ಬಂಧ ಹೇರಿರುವ ಸಂಗತಿ ಪಸ್ತಾಪಿಸಿ ಮಾತನಾಡಿದ ಅವರು, ಅಜಾನ್ ವಿರುದ್ಧದ ಹೋರಾಟದ ಘೋಷಣೆ ಮಾಡಿದರು.


ಮಸೀದಿಗಳಲ್ಲಿ ಅಜಾನ್ ಕೂಗುವ ಬಗ್ಗೆ ಸುಪ್ರೀಂ ಕೊರ್ಟ್ ಸ್ಪಷ್ಟ ಸೂಚನೆ ನೀಡಿದೆ. ಆದರೂ ಕೂಡ ಮಸೀದಿಗಳಲ್ಲಿ ಸೌಂಡ್ ಲಿಮಿಟ್ ಕಡಿಮೆ ಆಗಿಲ್ಲ. ದಿನಕ್ಕೆ ಐದಾರು ಬಾರಿ ಅಜಾನ್ ಹಾಕಲಾಗುತ್ತದೆ. ಇದು ಮಸೀದಿ ಸುತ್ತ-ಮುತ್ತಲ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಓದುವ ಮಕ್ಕಳಂತೂ ತೀವ್ರ. ತೊಂದರೆ ಅನುಭವಿ ಸುತ್ತಿzರೆ. ಮುಂದಿನ ದಿನಗಳಲ್ಲಿ ಈಬಗ್ಗೆ ಮಾತನಾಡಲು ಶುರು ಮಾಡುತ್ತೇವೆ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರವು ಹಿಂದೂ ಗಳಿಗೆ ಒಂದು ನೀತಿ, ಮುಸಲ್ಮಾನರಿಗೇ ಒಂದು ನೀತಿ ಅನುಸರಿಸುತ್ತಿದೆ. ಆರ್‌ಎಸ್ ಎಸ್ ಸೇರಿ ಹಿಂದೂ ಸಂಘಟನೆಗಳ ಮೇಲೆ ನಿರ್ಬಂಧ ಹೇರುವುದಕ್ಕಾಗಿಯೇ ಪಥ ಸಂಚಲನಗಳಿಗೆ, ಪಾದಯಾತ್ರೆ ಗಳಿಗೆ ಅನುಮತಿ ಕಡ್ಡಾಯ ಮಾಡಿದೆ. ಆದರೆ ಸರ್ಕಾರ ನಿರ್ಬಂಧ ಹಾಕಬೇಕಿರುವುದು ನಮಗಲ್ಲ, ಅಜಾನ್ ಸೌಂಡ್ ಲಿಮಿಟ್‌ಗೆ ನಿರ್ಬಂಧ ಹಾಕಲಿ, ಕೋರ್ಟ್ ಕೊಟ್ಟ ಸೂಚನೆಗಳನ್ನು ಅನುಷ್ಠಾನಕ್ಕೆ ತರಲು ಶ್ರಮಿಸಲಿ ಎಂದು ಒತ್ತಾಯಿಸಿದರು.


ಇದೇ ವೇಳೆ ಕಾಂಗ್ರೆಸ್ ನಾಯಕತ್ವದ ಕುರಿತು ಮುಖ್ಯಮಂತ್ರಿಗಳ ಪುತ್ರರೂ ಆದ ವಿಧಾನ ಪರಿಷತ್ ಸದಸ್ಯ ಡಾ| ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಎಲ್ಲವೂ ನಾಟಕ. ಸರ್ಕಾರ ಹಳ್ಳ ಹಿಡಿದಿದೆ. ಎಲ್ಲೂ ಅಭಿವೃದ್ಧಿ ಕೆಲಸಗಳೇ ಇಲ್ಲ. ಜನರ ರೊಚ್ಚಿಗೆದಿ zರೆ. ಜನರ ಗಮನ ದಿಕ್ಕು ತಪ್ಪಿಸಲು ಇವರು ನಾಟಕ ಆಡುತ್ತಿzರೆ ಎಂದರಲ್ಲದೇ, ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್, ಮಧು ಬಂಗಾರಪ್ಪ ದಿನಕ್ಕೊಂದು ಹೇಳಿಕೆ ನೀಡಿ ಜನರನ್ನು ದಿಕ್ಕು ತಪ್ಪಿಸುತ್ತಿzರೆ. ಡಿ.ಕೆ.ಶಿವಕುಮಾರ್ ಸಿಎಂ ಆಗೋದಿಲ್ಲ. ಅವರನ್ನು ಸಿಎಂ ಸ್ಥಾನದಿಂದ ವಂಚಿಸುವುದ ಕ್ಕಾಗಿಯೇ ಈ ರೀತಿಯ ಹೇಳಿಕೆ ನೀಡಲಾಗುತ್ತಿದೆ. ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.
ಶಾಸಕರಿಗೆ ಕೊಡಬೇಕಾದ ಅನುದಾನಗಳು ಒಂದು ನಯಾಪೈಸೆ ಬಂದಿಲ್ಲ. ೨೫ ಕೋಟಿ ರೂ. ನೀಡುವುದಾಗಿ ಘೋಷಣೆ ಮಾತ್ರ ಮಾಡಿzರೆ. ಈ ವರ್ಷದ ಅನುದಾನ ೨ ಕೋಟಿ ರೂ. ಕೂಡ ಬಂದಿಲ್ಲ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಅನುದಾನವಿಲ್ಲದೆ ಹಿನ್ನಡೆಯಾಗಿದೆ. ಒಂದು ಪಂಚಾಯ್ತಿಗೆ ೪೦ ಸಾವಿರ ರೂ. ಗಳು ಮಾತ್ರ ಬರುತ್ತದೆ. ಅದನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ದೂರಿದರು.