ಕಾಂಗ್ರೆಸ್ ನಾಯಕರ ವರ್ತನೆಗೆ ಕಿಡಿಕಾರಿದ ಶಾಸಕ ವಿಜಯೇಂದ್ರ…
ಶಿಕಾರಿಪುರ : ಹೊಟ್ಟೆಪಾಡಿಗಾಗಿ ಕಾಂಗ್ರೆಸ್‌ನ ಕೆಲ ಪುಡಾರಿ ರಾಜಕಾರಣಿಗಳು ಸರ್ಕಾರಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ ದೌರ್ಜನ್ಯ ಎಸಗುತ್ತಿದ್ದು, ತಾವು ಪ್ರಥಮ ಬಾರಿಗೆ ಶಾಸಕನಾಗಿರುವ ಹಿನ್ನಲೆ ಯಲ್ಲಿ ಎಲ್ಲರಿಗೂ ಗೌರವ ನೀಡುತ್ತಿ zನೆ ಅದನ್ನು ನನ್ನ ದೌರ್ಬಲ್ಯ ಎಂದು ಭಾವಿಸದೆ ವರ್ತನೆ ತಿದ್ದಿಕೊಳ್ಳಿ ಎಂದು ಶಾಸಕ ಬಿ.ವೈ ವಿಜಯೇಂದ್ರ ಖಡಕ್ ಎಚ್ಚರಿಕೆ ನೀಡಿದರು.
ರೈತರ ಬೆಳೆಗೆ ಪರಿಹಾರ ನೀಡುವಂತೆ ಆಗ್ರಹಿಸಿ ತಾಲೂಕು ಬಿಜೆಪಿ ರೈತ ಮೋರ್ಚಾ ಹಾಗೂ ಮಂಡಲ ಬಿಜೆಪಿಯಿಂದ ತಾಲೂಕು ಕಚೇರಿ ಮುಂಭಾಗ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರೈತ ಹೋರಾಟದ ಮೂಲಕ ತಾಲೂಕಿ ನಿಂದ ಹಬ್ಬಿದ ಕಿಚ್ಚು ರಾಜದ್ಯಂತ ಹರಡಲಿದ್ದು, ಈ ಹಿಂದೆ ಯಡಿಯೂರಪ್ಪನವರ ರೈತ ಪರ ಹೋರಾಟದಿಂದ ಕಾಂಗ್ರೆಸ್ ಸರ್ಕಾರ ಕಿತ್ತುಹಾಕುವಲ್ಲಿ ಯಶಸ್ವಿ ಯಾಗಿದೆ. ಇದೀಗ ಪುನಃ ಹೋರಾಟವನ್ನು ತಾಲೂಕಿನ ಮೂಲಕ ಆರಂಭಿಸಲಾಗಿದ್ದು ಚಳಿಗಾಲದ ಅಧಿವೇಶನದಲ್ಲಿ ರೈತರ ಪರವಾಗಿ ದ್ವನಿ ಮೊಳಗಲು ಇದೀಗ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ನಾಂದಿ ಹಾಡಲಾಗಿದೆ ಎಂದ ಅವರು, ಅತಿವೃಷ್ಟಿಯಿಂದಾಗಿ ರೈತರು ಸಂಕಷ್ಟದಲ್ಲಿದ್ದು ಸ್ಪಂದಿಸ ಬೇಕಾದ ಮುಖ್ಯಮಂತ್ರಿ, ಸಚಿವರು ಕುರ್ಚಿಗಾಗಿ ಹಗ್ಗ ಜಗ್ಗಾಟದಲ್ಲಿ ತೊಡಗಿzರೆ ರಾಯಚೂರು, ಗುಲ್ಬರ್ಗ, ಬೆಳಗಾವಿ ಮತ್ತಿತರ ಕಡೆ ಪ್ರವಾಸದ ಸಂದರ್ಭದಲ್ಲಿ ರೈತರ ಸಂಕಷ್ಟ ಅರಿತಿದ್ದು ಉಸ್ತುವಾರಿ ಸಚಿವರು, ಕಂದಾಯ, ಕೃಷಿ ಸಹಿತ ಎಲ್ಲ ಸಚಿವರು ಬೆಂಗಳೂರಿನ ಲ್ಲಿzರೆ. ಕಲ್ಬುರ್ಗಿಗೆ ತೆರಳಿದಾಗ ಅತುರದಿಂದ ಪ್ರಿಯಾಂಕ ಖರ್ಗೆ ಹೆಲಿಕ್ಯಾಪ್ಟರ್‌ನಲ್ಲಿ ಧಾವಿಸಿ ಕಾಟಾಚಾರಕ್ಕೆ ಸಮೀಕ್ಷೆ ಕೈಗೊಂಡಿ zರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಯ ಉಸ್ತುವಾರಿ ಸಚಿವರು ಪುಕ್ಕಟೆ ಮಾತನಾಡುತ್ತಿದ್ದು, ಪಕ್ಕದ ಸೊರಬದಲ್ಲಿ ಬಸ್ ನಿಲ್ದಾಣ ಯಡಿಯೂರಪ್ಪ ಮುಖ್ಯಮಂತ್ರಿ ಯಾದ ಅವಧಿಯಲ್ಲಿ ನಿರ್ಮಾಣ ವಾಗಿದ್ದು ಆಸ್ಪತ್ರೆಗಾಗಿ ಶಿಕಾರಿಪುರಕ್ಕೆ ಬರುತ್ತಿzರೆ ಎಂದು ಹರಿಹಾಯ್ದ ಅವರು, ಮುಖ್ಯಮಂತ್ರಿ ಕುರ್ಚಿ ಗಾಗಿ ಹಗ್ಗಜಗ್ಗಾಟ ವಿಪರೀತ ವಾಗಿದ್ದು ಸರ್ಕಾರ ಯಾವಾಗ ಬೀಳುತ್ತೆ ಗೊತ್ತಿಲ್ಲ ಇಲ್ಲಿ ಕೆಲ ಪುಡಾರಿಗಳು ಹೊಟ್ಟೆಪಾಡಿಗಾಗಿ ಪೊಲೀಸ್ ಠಾಣೆ, ಆಸ್ಪತ್ರೆ, ತಾಲೂಕು ಕಚೇರಿಗೆ ಅಲೆದಾಡು ತ್ತಿದ್ದು ಅಧಿಕಾರಿಗಳಿಗೆ ಕಿರುಕುಳ ದೌರ್ಜನ್ಯ ಹೆಚ್ಚು ದಿನ ನಡೆಯೋಲ್ಲ ಪ್ರಥಮ ಬಾರಿಗೆ ಶಾಸಕನಾದ ಕಾರಣ ನೀಡುತ್ತಿರುವ ಗೌರವವನ್ನು ದೌರ್ಬಲ್ಯ ಎಂದು ಬಾವಿಸಬೇಡಿ ಎಂದು ಎಚ್ಚರಿಸಿದರು.
ಆರಂಭದಲ್ಲಿ ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆದ ಮೆರವಣಿಗೆಯಲ್ಲಿ ಶಾಸಕ ವಿಜಯೇಂದ್ರ ಎತ್ತಿನ ಗಾಡಿಯಲ್ಲಿ ಸಂಚರಿಸಿ ಗಮನ ಸೆಳೆದರು. ನಂತರದಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾ.ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಯೋಗೇಶಪ್ಪ, ಜಿಧ್ಯಕ್ಷ ಸಿದ್ದಲಿಂಗಪ್ಪ, ತಾ.ಅಧ್ಯಕ್ಷ ಹನುಮಂತಪ್ಪ, ರೇವಣಪ್ಪ, ಗುರುಮೂರ್ತಿ, ಮಹೇಶ್ ಹುಲ್ಮಾರ್, ಗಾಯತ್ರಿದೇವಿ, ನಿವೇದಿತಾರಾಜು, ರೂಪ, ರೇಖಾ, ಸುನಂದಾ ಮತ್ತಿತರರು ಹಾಜರಿದ್ದರು.
