ತಾಜಾ ಸುದ್ದಿ

ಶಾಸಕಿ ಶಾರದಾ ಪೂರ್ಯನಾಯ್ಕ ಜನ್ಮದಿನ ಸಡಗರ–ಸಂಭ್ರಮದಿಂದ ಆಚರಣೆ …

Share Below Link

ಬೆಂಗಳೂರು: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ  ಶಾಸಕಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕಿ ಶ್ರೀಮತಿ ಶಾರದಾ ಪೂರ್ಯನಾಯ್ಕ ಅವರ ಜನ್ಮದಿನವನ್ನು ಇಂದು ಬೆಂಗಳೂರಿನ ಅವರ ನಿವಾಸದಲ್ಲಿ  ಸಡಗರ–ಸಂಭ್ರಮದಿಂದ ಆಚರಿಸಲಾಯಿತು. 

ಮುಂಜಾನೆ ನಗರದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿ, ಕ್ಷೇತ್ರದ ಜನತೆಯ ಕುಶಲಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಅವರ ಸ್ವಗೃಹದಲ್ಲಿ ಪಕ್ಷದ ನಾಯಕರ ಸಮ್ಮುಖದಲ್ಲಿ ಕೇಕ್ ಕತ್ತರಿಸುತ್ತಿರಿಸಿ, ಹೂವಿನ ಗುಚ್ಛ ನೀಡಿ ಶುಭಾಶಯ  ಹಾರೈಸಿದರು. 

ನಂತರ ಮಾತನಾಡಿದ ಶಾಸಕಿ ಶಾರದಾ ಪೂರ್ಯನಾಯ್ಕ ಮಾತನಾಡಿ,“ಜನಸೇವೆ ನನ್ನ ಧರ್ಮ. ಜನರ ಪ್ರೀತಿ ಮತ್ತು ಆಶೀರ್ವಾದವೇ ನನಗೆ ದೊರಕಿರುವ ನಿಜವಾದ ಜನ್ಮದಿನ ಉಡುಗೊರೆ ಎಂದರು.

ಶಾಸಕಿ ಶ್ರೀಮತಿ ಶಾರದಾ ಪೂರ್ಯನಾಯ್ಕ ಅವರ ಮಾತೃಶ್ರೀ ಗಂಗೂಬಾಯಿ, ಸಹೋದರ ಶ್ರೀನಿವಾಸ್ ಮತ್ತು ಕುಟುಂಬದವರು, ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜ, ಶಿವಮೊಗ್ಗ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ದಾದಿಪೀರ್, ಜೆಡಿಎಸ್ ಮುಖಂಡ ಎಸ್. ಎಂ. ತಿಪ್ಪೇಸ್ವಾಮಿ, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಶಿವಮೊಗ್ಗ ಜಿಲ್ಲಾಧ್ಯಕ್ಷ ಮಹಮದ್ ಯೂಸೂಫ್ ಭಯ್ಯಾ, ಯುವ ಘಟಕದ ಜಿಲ್ಲಾ ಕಾರ್ಯಾಧ್ಯಕ್ಷ ಎಸ್. ಎಲ್. ನಿಖಿಲ್, ಶಿವಮೊಗ್ಗ ಗ್ರಾಮಾಂತರ ತಾಲ್ಲೂಕು ಅಧ್ಯಕ್ಷ ಸತೀಶ್ ಸೇರಿದಂತೆ ರಾಜ್ಯದ  ವಿವಿಧ ಭಾಗಗಳಿಂದ ಆಗಮಿಸಿದ್ದ ಕಾರ್ಯಕರ್ತರು, ಅಭಿಮಾನಿಗಳು  ಶಾಸಕಿ ಶ್ರೀಮತಿ ಶಾರದಾ ಪೂರ್ಯನಾಯ್ಕ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು.