ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ ಖಂಡನೀಯ : ಎಂ.ಬಿ.ಮಂಜಪ್ಪ

Share Below Link

ಸಾಗರ : ಅರಣ್ಯಭೂಮಿ ಒತ್ತುವರಿ ಮಾಡಿರುವ ರೈತರ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸಿ ಎಂದು ಹೇಳಿರುವ ಶಾಸಕ ಗೋಪಾ ಲಕೃಷ್ಣ ಬೇಳೂರು ಹೇಳಿಕೆ ಖಂಡ ನೀಯ ಎಂದು ರೈತ ಸಂಘದ ತಾ.ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು ತಿಳಿಸಿzರೆ.
ಸುದ್ದಿಗೋಷ್ಟಿಯಲ್ಲಿ ಮಾತನಾ ಡಿದ ಅವರು, ಕ್ಷೇತ್ರದ ಶಾಸಕರಾಗಿ ಅತಿಕ್ರಮಣವಾಗುತ್ತಿದ್ದರೆ ರೈತರ ಮನವೊಲಿಸುವ ಪ್ರಯತ್ನ ನಡೆಸ ಬೇಕಿತ್ತೆ ವಿನಃ, ಕಠಿಣ ಕಾನೂನು ಕ್ರಮ ಜರುಗಿಸಿ ಜೈಲಿಗೆ ತಳ್ಳಿ ಎಂದು ಅರಣ್ಯ ಇಲಾಖೆ ಕಾರ್ಯಕ್ರಮ ದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿರುವ ಕ್ರಮ ಶಾಸಕರಿಗೆ ಶೋಭೆ ತರುವುದಿಲ್ಲ ಎಂದರು.


ಜಿಯಲ್ಲಿ ಶೇ. ೬೦ರಷ್ಟು ರೈತ ಕುಟುಂಬಗಳು ಮುಳುಗಡೆ ಸಂದ ರ್ಭದಲ್ಲಿ ಅರಣ್ಯ ಪ್ರದೇಶಕ್ಕೆ ವಲಸೆ ಬಂದಿzರೆ. ಸಣ್ಣಪುಟ್ಟ ಜಮೀನು ಮಾಡಿಕೊಂಡು ಅಲ್ಲಿಯೆ ವಾಸ ಮಾಡುತ್ತಿzರೆ. ಮುಳುಗಡೆ ಹಿನ್ನೆಲೆಯಿಂದ ಬಂದ ರೈತರ್‍ಯಾರೂ ಕಾಡು ಕಡಿಯುವುದು, ಅರಣ್ಯ ಭೂಮಿ ಒತ್ತುವರಿ ಮಾಡುವುದು, ಕಾಡುಪ್ರಾಣಿಗಳನ್ನು ಬೇಟೆಯಾಡು ವಂತಹ ಕೃತ್ಯ ನಡೆಸುತ್ತಿಲ್ಲ. ಹೊಸ ದಾಗಿ ಕಾಡು ಕಡಿಯುವವರಿಗೆ, ವನ್ಯಜೀವಿ ಬೇಟೆಯಾಡುವವರ ವಿರುದ್ದ ಕ್ರಮ ತೆಗೆದುಕೊಳ್ಳಲು ನಮ್ಮ ವಿರೋಧವಿಲ್ಲ. ಆದರೆ ಶಾಸ ಕರು ತಾವೊಬ್ಬ ಕ್ಷೇತ್ರದ ಪ್ರತಿನಿಧಿ ಎನ್ನುವುದನ್ನು ಮರೆತು ಸಾರಾ ಸಗಟಾಗಿ ರೈತರನ್ನೆ ಸೇರಿಸಿಕೊ ಂಡಂತೆ ನೀಡಿರುವ ಹೇಳಿಕೆ ಸರಿ ಯಲ್ಲ. ಶಾಸಕರು ಮುಂದೆ ಇಂತಹ ಹೇಳಿಕೆಯನ್ನು ನೀಡಿದರೆ ಜಿ ದ್ಯಂತ ರೈತರು ಪ್ರತಿಭಟನೆ ನಡೆ ಸುವ ಜೊತೆಗೆ ಅವರ ಮನೆ ಎದು ರು ಸಹ ರೈತ ಸಂಘ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗು ತ್ತದೆ ಎಂದು ಎಚ್ಚರಿಕೆ ನೀಡಿದರು.
ಈಗಾಗಲೆ ತಾಲ್ಲೂಕಿನಲ್ಲಿ ಸಾವಿರಾರು ರೈತರು ಅರಣ್ಯ ಒತ್ತು ವರಿ ಕೇಸ್ ಹಾಕಿಸಿಕೊಂಡು ಬೆಂಗಳೂರಿನ ನ್ಯಾಯಾಲಯಕ್ಕೆ ಅಲೆಯುತ್ತಿzರೆ. ಇಂತಹ ಹೊತ್ತಿ ನಲ್ಲಿ ಶಾಸಕರು ನೀಡುವ ಹೇಳಿಕೆ ಗಳು ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆ ಇಲ್ಲದಿಲ್ಲ. ಹಾಗೆ ನೋಡಿದರೆ ಅರಣ್ಯ ನಾಶವಾ ಗುತ್ತಿದೆ ಎಂದರೆ ಅದಕ್ಕೆ ನೇರ ಹೊಣೆ ಅರಣ್ಯಾಧಿಕಾರಿಗಳೇ ಆಗಿ ರುತ್ತಾರೆ. ಅರಣ್ಯನಾಶ ಮಾಡುವ ಸಂದರ್ಭದಲ್ಲಿ ಅರಣ್ಯಾಧಿಕಾರಿ ಗಳು ಏನು ಮಾಡುತ್ತಿರುತ್ತಾರೆ. ಅರಣ್ಯಾಧಿಕಾರಿಗಳ ಹತ್ತಿರ ಕಾನೂನು ಇದೆ. ಅದನ್ನು ಬಳಸಿ ಅರಣ್ಯ ನಾಶವಾಗುವುದನ್ನು ತಡೆಯಬೇಕಿತ್ತು. ಅದರ ಬದಲು ರೈತರು ಒತ್ತುವರಿ ಮಾಡುತ್ತಿzರೆ ಎಂದು ಹೇಳುತ್ತಿರುವುದು ಹಾಸ್ಯಾ ಸ್ಪದ. ಶಾಸಕ ಗೋಪಾಲಕೃಷ್ಣ ಬೇಳೂರು ಅರಣ್ಯ ರಕ್ಷಣೆ ಮಾಡ ಲು ವಿಫಲವಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳನ್ನು ಮೊದ ಲು ಜೈಲಿಗೆ ಕಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಷ್ಟಿಯಲ್ಲಿ ಕೆ.ಟಿ.ರಮೇಶ್ ಐಗಿನಬೈಲು, ಕಾನಗೋಡು ದಿನೇಶ್, ದೇವು ಆಲಳ್ಳಿ, ವೀರ ಭದ್ರ ಶಿರವಾಳ ಹಾಜರಿದ್ದರು.