ಶಾಸಕ ಈಶ್ವರಪ್ಪ ಶಿವಮೊಗ್ಗಕ್ಕೆ ವಲಸೆ ಬಂದವರು: ಮಾಜಿ ಶಾಸಕ ಕೆಬಿಪಿ…
ಶಿವಮೊಗ್ಗ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷದ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ಬದ್ದರಾಗಿದ್ದೇವೆ ಎಂದು ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್ ಮಾತನಾಡಿ, ಈಶ್ವರಪ್ಪ ಅವರು ಶಿವಮೊಗ್ಗಕ್ಕೆ ಮೂಲತಃ ವಲಸೆ ಬಂದವರೇ ಆಗಿದ್ದಾರೆ. ಇಂತವರಿಗೆ ಸಿದ್ದರಾಮಯ್ಯ ಅವರನ್ನು ಟೀಕಿಸುವ ನೈತಿಕ ಹಕ್ಕಿಲ್ಲ. ನಲವತ್ತು ಪರ್ಸೆಂಟ್ ಈಶ್ವರಪ್ಪನವರು ಮಂತ್ರಿಗಿರಿ ಕಳೆದುಕೊಂಡಿದ್ದು, ಮತ್ತೆ ಕೋರ್ಟು ವಿಚಾರಣೆ ದಿನ ನಿಗದಿ ಮಾಡಿದೆ. ಇದರಿಂದ ಈಗ ಮುನ್ನೆಲೆಗೆ ಬರಲು ಸಿದ್ದರಾಮಯ್ಯ ಅವರ ವಿಚಾರವನ್ನೆ ಮಾತನಾಡಬೇಕಾಗಿದೆ. ಅದಕ್ಕಾಗಿ ಪದೇ ಪದೇ ಸಿದ್ದರಾಮಯ್ಯವರ ಜಪ ಮಾಡುತ್ತಿದ್ದಾರೆ. ಈಶ್ವರಪ್ಪನವರ ಮಾತು ವಿಚಾರಗಳನ್ನು ಮಾನವೀಯ ಸಮಾಜದಲ್ಲಿ ಯಾರೂ ಒಪ್ಪುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಪ್ರಚಾರ ಸಮಿತಿ ರಾಜ್ಯ ಸಂಯೋಜಿಕ ಎಸ್.ಪಿ. ದಿನೇಶ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ರಮೇಶ್ , ಓಬಿಸಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಶಿವಿಶ್ವನಾಥ್, ಉತ್ತರಬ್ಲಾಕ್ ಅಧ್ಯಕ್ಷ ದೀಪಕ್ ಸಿಂಗ್, ಆಸೀಫ್ ಉಪಸ್ಥಿತರಿದ್ದರು.