ಜಿಲ್ಲಾ ಸುದ್ದಿರಾಜಕೀಯ

ರಾಗಿಗುಡ್ಡದ ವಿಜಯಗಣಪತಿ ನೂತನ ಕಟ್ಟಡ ಶಾಸಕ ಚನ್ನಬಸಪ್ಪರಿಂದ ಪರಿಶೀಲನೆ…

Share Below Link

ಶಿವಮೊಗ್ಗ : ಮತಾಂಧರ ಆಕ್ರಮಣದಿಂದ ಹಾನಿಗೊಳಗಾಗಿದ್ದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿರುವ ವಿಜಯಗಣಪತಿ ಮತ್ತು ವಾಸುಕಿ ದೇವಸ್ಥಾನದ ಪುನರ್ನಿರ್ಮಾಣ ಕಾರ್ಯವು ಸಂಪೂರ್ಣಗೊಂಡಿದೆ.
ಈ ಹಿನ್ನೆಲೆಯಲ್ಲಿ, ನ. ೩ ರಂದು ನಡೆಯಲಿರುವ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ನೂತನ ಕಟ್ಟಡದ ಲೋಕಾರ್ಪಣ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಲು ಇಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ದೇವಸ್ಥಾನಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಲವು ಹಿಂದೂ ವಿರೋಧಿ ಮನಸ್ಥಿತಿ ಯವರು ಗಣಪತಿ ಮತ್ತು ನಾಗ ದೇವರ ವಿಗ್ರಹಗಳನ್ನು ಧ್ವಂಸ ಮಾಡಿದಾಗ ಈ ಭಾಗದ ಜನರಿಗೆ ಅತ್ಯಂತ ನೋವು ಉಂಟಾಗಿತ್ತು. ದೊಡ್ಡ ಮಟ್ಟದ ಪ್ರತಿಭಟನೆಗೂ ಜನ ಸಜಗಿದ್ದರು. ಯಾರೂ ವಿಗ್ರಹ ಧ್ವಂಸ ಮಾಡಿದ್ದರೋ ಅವರ ವಿರುದ್ಧ ಜಿಡಳಿತದಿಂದ ಕಠಿಣ ಕ್ರಮ ಕೈಗೊಂಡ ಬಳಿಕ ಸ್ಥಳೀಯರು ಮತ್ತು ಜನಪ್ರತಿನಿಧಿಗಳು ಹಾಗೂ ಗಣಪತಿ ಸಂಘದ ಯುವಕರೆಲ್ಲರೂ ಸೇರಿ ಸುಂದರ ಹಾಗೂ ಶಾಶ್ವತವಾದ ದೇವಾಲಯ ನಿರ್ಮಾಣ ಮಾಡಿzರೆ. ಹಿಂದೂ ಸಮಾಜ ತನ್ನ ಕೈಲಾದ ಶಕ್ತಿಯನ್ನು ಧಾರೆ ಎರೆದಿದೆ. ದೇವರ ಅನುಗ್ರಹ ಮತ್ತು ಹಿಂದೂ ಸಮಾಜದ ಅಪೇಕ್ಷೆಯಂತೆ ದೇವಾಲಯದ ಪುನರ್ ನಿರ್ಮಾಣ ಕಾರ್ಯ ಆಗಿದೆ. ನ.೩ರಂದು ಗುರುಗಳ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಈ ದೇವಾಲಯದ ಉದ್ಘಾಟನೆಯಾಗಲಿದ್ದು, ಈ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲರಿಗೂ ಹಿಂದೂ ಸಮಾಜದ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಿಜೆಪಿ ಜಿಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಮೋಹನ್ ರೆಡ್ಡಿ, ನಾಗರಾಜ್, eನೇಶ್ವರ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.