ಒಂದು ಕೋಮಿನಿಂದ ಅಪ್ರಾಪ್ತ ಹೆಸರಿನ ದುರ್ಬಳಕೆ: ಶಾಸಕ ಚನ್ನಿ
ಶಿವಮೊಗ್ಗ : ಸೂರುಗೊಂಡನಕೊಪ್ಪದಲ್ಲಿ ಫೆ.೧೪ ರಂದು ನಡೆದ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಸರ್ಕಾರದ ಒಳಮೀಸಲಾತಿ ನೀತಿ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದ ಸೇವಾಲಾಲ್ ಮಾಲಾಧಾರಿಗಳ ಮೇಲೆ ಕಾಂಗ್ರೆಸ್ ಸರ್ಕಾರ ದಾಖಲಿಸಿದ ಪ್ರಕರಣ ಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಜಿ ಬಂಜರ ಸಂಘದ ಅಧ್ಯಕ್ಷ ಕೆ.ಬಿ. ಅಶೋಕ್‌ನಾಯ್ಕ ಸರ್ಕಾರವನ್ನು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದವರು ನಮಗಾದ ಅನ್ಯಾಯವನ್ನು ಸರಿಪಡಿಸುವಂತೆ ಕೇಳಿದ್ದಕ್ಕೆ ಮಾಲಾಧಾರಿಗಳ ಮೇಲೆ ಪ್ರಕರಣ ದಾಖಲಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಸರ್ಕಾರ ಈ ಹಿಂದೆ ನಿಗಧಿಪಡಿಸಿದ್ದ ಶೇ.೫೬ರಷ್ಟು ಮಿಸಲಾತಿಗೆ ರಾಜ್ಯಪಾಲರ ಅಂಕಿತ ಪಡೆದು ಕೊಂಡಿದ್ದರು. ನ್ಯಾಯಾಲಯ ಅದಕ್ಕೆ ತಡೆ ನೀಡಿದೆ. ಆದರೆ ಸರ್ಕಾರ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಕುರಿತು ತೀರ್ಮಾನ ತೆಗೆದುಕೊಳ್ಳಲಿದ್ದು, ಒಂದೇ ವೇಳೆ ಈ ನಿರ್ಧಾರ ಬಂಜರ ಸಮುದಾಯದವರಿಗೆ ವಿರೋಧ ವಾಗಿದ್ದರೆ ಅದನ್ನು ನಾವು ತೀವ್ರ ವಾಗಿ ಖಂಡಿಸುತ್ತೇವೆ ಅಲ್ಲದೆ ರಾಜದ್ಯಂತ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಸಂಘದ ಪ್ರಮುಖ ಭೋಜನಾಯ್ಕ ಮಾತನಾಡಿ, ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ, ಸಮಾಜದ ಮುಖಂಡನೆಂದು ಹೇಳಿಕೆ ನೀಡಿದ ಶಶಿಕುಮಾರ್ ಎಂಬುವವರು ಕೆ.ಬಿ. ಅಶೋಕ್ ನಾಯ್ಕ ಅವರ ಮೇಲೆ ಮಾಡಿರುವ ಆಪಾದನೆಗಳು ಸತ್ಯಕ್ಕೆ ದೂರ ವಾದವು. ರಾಜಕೀಯ ಪ್ರೇರಿತ ಹೇಳಿಕೆಗಳಾಗಿವೆ. ಜಿ ಬಂಜರ ಸಂಘ ಇದನ್ನು ಉಗ್ರವಾಗಿ ಖಂಡಿಸುತ್ತದೆ ಎಂದರು.
ಪ್ರಮುಖರಾದ ಶೇಖರಾ ನಾಯ್ಕ, ಆನಂದ ಕೆ., ವಾಸುದೇವ ನಾಯ್ಕ, ಆಯನೂರು ಶಿವಾ ನಾಯ್ಕ ಮೊದಲಾದವರಿದ್ದರು.

