ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಭದ್ರ ಮೇಲ್ದಂಡೆ ಯೋಜನೆ ವೀಕ್ಷಿಸಿದ ಸಚಿವ ಸುಧಾಕರ್

Share Below Link

ಶಿವಮೊಗ್ಗ: ನೆನಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಚಿತ್ರದುರ್ಗ ಜಿಉಸ್ತುವಾರಿ ಸಚಿವ ಹಾಗೂ ಯೋಜನೆ ಮತ್ತು ಸಾಂಖಿಕ ಸಚಿವ ಡಿ. ಸುಧಾಕರ್ ಹೇಳಿದರು.
ಅವರು ಇಂದು ಬಿ.ಆರ್. ಪಿಯಲ್ಲಿ ಭದ್ರಾ ಮೇಲ್ದಂಡೆ ಯೋ ಜನೆಯ ಕಾಲುವೆ ಮತ್ತುಇತರೆ ಕಾಮಗಾರಿಗಳ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆ ಪ್ರಮುಖವಾಗಿ ಕುಡಿಯುವ ನೀರಿನ ಯೋಜನೆಯಾಗಿದೆ. ಈ ಯೋಜನೆಯಿಂದ ಚಿತ್ರದುರ್ಗ, ಶಿರಾ,ದಾವಣಗೆರೆ ಮತ್ತು ತುಮ ಕೂರು ಜಿಗಳಿಗೆ ಅನುಕೂಲವಾ ಗುತ್ತದೆ. ಆದರೆ ಈ ಯೋಜನೆ ೨೦೧೮ರಿಂದಲೂ ಕುಂಠಿತಗೊಂ ಡಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿzಗ ಈ ಯೋಜನೆಗೆ ಮಹತ್ವ ನೀಡಿದ್ದ ರಾದೂ ಅದು ಕಾರ್ಯಗತ ಆಗಿರ ಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಮತ್ತಷ್ಟು ತೀವ್ರ ಗೊಳಿಸಲು ಉದ್ದೇಶಿಸಿದೆ ಎಂದರು
ಈ ಯೋಜನೆಗೆ ಅನೇಕ ಸ್ಥಳೀಯ ಸiಸ್ಯೆಗಳಿವೆ. ಈ ಬಗ್ಗೆ ಈಗಾಗಲೇ ಮಾಹಿತಿ ತೆಗೆದುಕೊ ಳ್ಳುತ್ತಿದ್ದೇನೆ ಕೆಲವು ಕಡೆ ಕೆಇಬಿಗೆ ಸಂಬಂಧಿಸಿದಂತೆ ೧೨ ಟವರ್‌ಗ ಳನ್ನು ನಿರ್ಮಿಸಬೇಕಾಗಿದೆ. ರಸ್ತೆಗಳ ನಿರ್ಮಾಣ ಆಗಬೇಕಾಗಿದೆ. ಟವರ್ ನಿರ್ಮಿಸಲು ಇನ್ನೂ ಅನುಮತಿ ಸಿಕ್ಕಿಲ್ಲ. ಅರಣ್ಯ ಇಲಾಖೆ ಅನುಮತಿಕೂಡ ಬೇಕಾಗಿದೆ. ಈ ಎ ವಿಚಾರಗಳನ್ನು ಗಮನ ದಲ್ಲಿಟ್ಟುಕೊಂಡು ಅಧಿಕಾರಿಗ ಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.
ಯೋಜನೆ ಜರಿಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ವರದಿ ಯನ್ನು ತರಿಸಿಕೊಳ್ಳುತ್ತೇನೆ. ಒಟ್ಟು ೧೭ಟಿಎಂಸಿ ನೀರನ್ನು ತುಂಗಾನದಿ ಯಿಂದ ಲಿಫ್ಟ್ ಮಾಡುವ ಉದ್ದೇಶ ಹೊಂದಲಾಗಿದೆ. ತುಂಗಾ ನದಿ ತುಂಬಿದಾಗ ಮಾತ್ರ ಲಿಫ್ಟ್ ಮಾಡ ಲಾಗುವುದು. ಹೆಚ್ಚುವರಿ ನೀರನ್ನು ಲಿಫ್ಟ್ ಮಾಡಲಾಗುತ್ತದೆಯಷ್ಟೆ. ಇದರಿಂದ ತುಂಗಾ ಅಣೆಕಟ್ಟಿನ ನೀರನ್ನು ಬಳಸುವಂತಾಗುವುದಿಲ್ಲ. ಮಳೆಗಾಲದಲ್ಲಿ ಮಾತ್ರ ನೀರನ್ನು ಲಿಫ್ಟ್ ಮಾಡಲಾಗುವುದು ಎಂದರು.
ಹಾಯ್‌ಹೊಳೆ, ಗೌಡನಕೆರೆ, ಮೊದಲಾದ ಕೆರೆಗಳು ಭರ್ತಿ ಯಾದ ಮೇಲೆ ಭದ್ರಾ ಮೇಲ್ದಂಡೆಗೆ ನೀರು ಹರಿಸಲಾಗಿದ್ದು, ಎರಡೂ ನದಿಯ ನೀರು ಸೇರಿ ಒಟ್ಟು ೩೨ ಟಿಎಂಸಿ ನೀರನ್ನು ಚಿತ್ರದುರ್ಗ ತುಮಕೂರು ಶಿರಾ ದಾವಣಗೆರೆ ಮೊದಲಾದ ಊರುಗಳಿಗೆ ನೀರು ಹರಿಸುವ ಯೋಜನೆ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಶಾಸಕ ಗೋಪಾಲಕೃಷ್ಣ, ಶಾಸಕ ವೀರೇಂದ್ರ ಪಪ್ಪಿ, ರಘುಮೂರ್ತಿ, ಮಾಜಿ ಸಚಿವ ಆಂಜನೇಯ, ರಾ ಜುಗೌಡ ಹಲವರಿದ್ದರು.