ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಜಿ ಕಾಂಗ್ರೆಸ್‌ನಿಂದ ಮನ ಸತ್ಯಾಗ್ರಹ …

Share Below Link

ಶಿವಮೊಗ್ಗ: ರಾಷ್ಟ್ರೀಯ ನಾಯಕ ಹಾಗೂ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಪ್ರಜಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ ಅವರ ಧ್ವನಿ ಹತ್ತಿಕ್ಕಲು ಸಂವಿಧಾನವನ್ನು ದುರ್ಬಳಕೆ ಮಾಡಿಕೊಂಡಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಜಿ ಕಾಂಗ್ರೆಸ್ ಸಮಿತಿಯ ನೇತ್ರತ್ವದಲ್ಲಿ ಕಾಂಗ್ರೆಸ್ ಮುಖಂಡರು ಇಂದು ಗಾಂಧಿ ಪಾರ್ಕ್‌ನಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗ ಜಿ ಕಾಂಗ್ರೆಸ್ ಸಮಿತಿಯಿಂದ ಮನ ಸತ್ಯಾ ಗ್ರಹ ನಡೆಸಿದರು.
ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಅದುಮಿ ಹಾಕಲು ಬಿಜೆಪಿ ಸಕಲ ಪ್ರಯತ್ನದ ಒಳಸಂಚು ಮಾಡುತ್ತಿದೆ. ಬಿಜೆಪಿ ಹಾಗೂ ಪ್ರಧಾನಿ ಮೋದಿ ರಾಹು ಲ್‌ಗಾಂಧಿ ಅವರನ್ನು ದೋಷಿ ಎಂದು ಸಾಬೀತುಪಡಿಸಲು ಹಾಗೂ ಅವರನ್ನು ಲೋಕಸಭೆ ಸದಸ್ಯತ್ವ ಸ್ಥಾನದಿಂದ ಅನರ್ಹ ಗೊಳಿಸಲು ಕಾರಣವಾಗುವ ಎ ಸೇಡಿನ ಕ್ರಮಗಳನ್ನು ಅನುಸರಿಸು ತ್ತಿದೆ ಎಂದು ಸಮಿತಿ ತಿಳಿಸಿದೆ.
ರಾಹುಲ್‌ಗಾಂಧಿ ಅವರಿಗೆ ನೀಡಿರುವ ಶಿಕ್ಷೆ ಮತ್ತು ಅನರ್ಹ ತೆಯನ್ನು ಕಾಂಗ್ರೆಸ್ ಮಾತ್ರವಲ್ಲ. ಇಡೀ ರಾಷ್ಟ್ರವೇ ಖಂಡಿಸುತ್ತಿದೆ. ಅವರ ಜನಪರ ಹೋರಾಟದ ಪರವಾಗಿ ಅಭಿಪ್ರಾಯ ವ್ಯಕ್ತಪಡಿ ಸಲಾಗುತ್ತಿದೆ. ಪ್ರಸ್ತುತ ಪರಿಸ್ಥಿತಿ ಯಲ್ಲಿ ನಾವು ಒಟ್ಟಾಗಿ ನಿಂತು ರಾಹುಲ್ ಗಾಂಧಿ ಅವರು ಏಕಾಂಗಿ ಯಲ್ಲ. ಅವರ ಪರ ಅಪಾರ ಕಾಂಗ್ರೆಸ್ಸಿಗರ ಬಳಗವಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದನ್ನು ಸಹಿಸದ ಬಿಜೆಪಿ ನಾಯಕರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿzರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ೨ ತಿಂಗಳಾದರೂ ಸಹ ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ನೇಮಿಸಿಲ್ಲ ಎಂದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಲಾಗುವುದು ಎಂದರು.
ಮನ ಪ್ರತಿಭಟನೆಯಲ್ಲಿ ಜಿಧ್ಯಕ್ಷ ಹೆಚ್.ಎಸ್. ಸುಂದ ರೇಶ್, ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್, ಪಾಲಿಕೆ ಸದಸ್ಯ ರಾದ ರೇಖಾ ರಂಗನಾಥ್, ಹೆಚ್.ಸಿ ಯೋಗೀಶ್, ಯಮುನಾ ರಂಗೇಗೌಡ, ಇಸ್ಮಾಯಿಲ್ ಖಾನ್, ಸಿ.ಎಸ್. ಚಂದ್ರ ಭೂಪಾಲ, ವಿನಾಯಕ ಮೂರ್ತಿ, ಹೆಚ್.ಎಂ. ಮಧು, ಚಂದನ್, ಚಂದ್ರಶೇಖರ್ ಕವಿತಾ, ಶಶಿಧರ್, ವೈ.ಬಿ. ಚಂದ್ರಕಾಂತ್, ಎಂ.ಎಸ್. ಸಿದ್ದಪ್ಪ, ಎಸ್.ಪಿ. ಶೇಷಾದ್ರಿ, ಮಧುಸೂದನ್, ಜಿ.ಡಿ. ಮಂಜು ನಾಥ್, ಹೆಚ್.ಪಿ. ಗಿರೀಶ್, ಸ್ಟೆ ಮಾರ್ಟಿನ್, ನಾಜೀಮಾ, ಪ್ರೇಮಾ, ಪಾರ್ವತಿ, ಕವಿತಾ ರುದ್ರೇಶ್, ತಬಸ್ಸುಮ್, ಯು. ಶಿವಾನಂದ್ ಉಪಸ್ಥಿತರಿದ್ದರು.