ರೈತ ದಸರಾಕ್ಕೆ ಮೆಹಖ್ ಶರೀಫ್ ಚಾಲನೆ …
ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ನಡೆಯು ತ್ತಿರುವ ಶಿವಮೊಗ್ಗ ದಸರಾ ಯಶ ಸ್ವಿಯಾಗಿ ಮುಂದುವರಿಯು ತ್ತಿದ್ದು, ಇಂದು ರೈತ ದಸರಾ ಅಂಗ ವಾಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಸೈನ್ಸ್ ಮೈದಾನದಲ್ಲಿ ರೈತ ಜಥಾಕ್ಕೆ ರೈತ ದಸರಾ ಸಮಿತಿ ಅಧ್ಯಕ್ಷೆ ಮೆಹಖ್ ಶರೀಫ್ ಚಾಲನೆ ನೀಡಿದರು.
ಅತ್ಯಂತ ಸಡಗರ, ಸಂಭ್ರಮ ದಿಂದ ರೈತ ಮುಖಂಡರು ಈ ಜಥಾದಲ್ಲಿ ಪಾಲ್ಗೊಂಡಿದ್ದರು. ಶೃಂಗಾರಗೊಂಡ ಟ್ರ್ಯಾಕ್ಟರ್, ಎತ್ತಿನಗಾಡಿಗಳು ಮೆರವಣಿಗೆಯ ಕೇಂದ್ರಬಿಂದುವಾಗಿದ್ದು, ಆಕ ರ್ಷಣೀಯವಾಗಿತ್ತು. ಅದರಲ್ಲೂ ಎತ್ತಿನ ಗಾಡಿಗಳು ನೋಡುಗರ ಗಮನಸೆಳೆದವು. ಜೊತೆಗೆ ಡೊಳ್ಳು ಕುಣಿತ ಸೇರಿದಂತೆ ಹಲವು ಕಲಾ ಪ್ರಕಾರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಎತ್ತಿನಗಾಡಿಗಳಲ್ಲಿ ರೈತ ನಾಯಕರಾದ ಹೆಚ್.ಆರ್. ಬಸವಾರಜಪ್ಪ, ಕೆ.ಟಿ. ಗಂಗಾಧರ್ ಸ್ವತಃ ಗಾಡಿಯನ್ನು ಚಲಾಯಿಸಿ ದರು. ಜೊತೆಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಕೂಡ ಎತ್ತಿನಗಾಡಿ ಯಲ್ಲಿ ಇದ್ದರು.
ಈ ಸಂದರ್ಭದಲ್ಲಿ ಮಾತನಾ ಡಿದ ರೈತ ದಸರಾ ಸಮಿತಿಯ ಮೇಹಖ್ ಶರೀಫ್, ರೈತರು ಮಳೆ ಇಲ್ಲದೆ ಸಂಕಟದಲ್ಲಿzರೆ. ಅದರೂ ಕೂಡ ದಸರಾ ಹಬ್ಬದಲ್ಲಿ ಪಾಲ್ಗೊಂಡಿzರೆ. ಅವರ ಸಂಕಷ್ಟ ಗಳು ಬೇಗನೆ ದೂರವಾಗಬೇಕು. ರೈತರು ಸಂತೋಷವಾಗಿzಗ ಮಾತ್ರ ದೇಶ ಸುಭಿಕ್ಷವಾಗಿರುತ್ತದೆ ಎಂದರು.
ಪಾಲಿಕೆಯ ಅಧಿಕಾರಿ ನಾಗೇಂದ್ರ ಡಿ. ಮಾತನಾಡಿ, ರೈತರು ಈ ದೇಶದ ಬೆನ್ನೆಲುಬು. ಇಂದು ರೈತ ದಸರಾಕ್ಕೆ ಚಾಲನೆ ನೀಡುತ್ತಿದ್ದೇವೆ. ಕುವೆಂಪು ರಂU ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಗುವುದು. ರೈತ ಜಥಾದಲ್ಲಿ ಎತ್ತಿನ ಗಾಡಿಗಳು ಭಾಗವಹಿಸಿರುವುದು ಆಕರ್ಷ ಣೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮೇಯರ್ ಎಸ್. ಶಿವಕುಮಾರ್, ಉಪಮೇ ಯರ್ ಲಕ್ಷ್ಮಿ ಶಂಕರ್ ನಾಯಕ್, ಸದಸ್ಯರಾದ ಅನಿತಾ ರವಿಶಂಕರ್, ಇ. ವಿಶ್ವಾಸ್, ಧೀರರಾಜ್ ಹೊನ್ನವಿಲೆ, ಆರ್.ಸಿ. ನಾಯ್ಕ, ಎನ್. ಗೋವಿಂದಪ್ಪ ಸೇರಿದಂತೆ ಪಾಲಿಕೆ ಅಧಿಕಾರಿಗಳು, ರೈತ ಮುಖಂಡರು ಇದ್ದರು.