ಮೇ ೪: ಯೂನಿಟಿ ಮಕ್ಕಳ ಆಸ್ಪತ್ರೆಯಿಂದ ಬೃಹತ್ ಉಚಿತ ಆರೋಗ್ಯ ಶಿಬಿರ
ಶಿವಮೊಗ್ಗ : ನಗರದ ಕುವೆಂಪು ರಸ್ತೆಯಲ್ಲಿರುವ ಯೂನಿಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವತಿಯಿಂದ ಮೇ ೪ರಂದು ಆಸ್ಪತ್ರೆ ಆವರಣದಲ್ಲಿ ಬೃಹತ್ ಬೇಸಿಗೆ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದ್ದು, ಮುಖ್ಯವಾಗಿ ಈ ಶಿಬಿರದಲ್ಲಿ ಉಚಿತ ದಂತ ತಪಾಸಣೆಯನ್ನು ಮಾಡಲಾಗುವುದು ಎಂದು ಮಕ್ಕಳ ತಜ್ಞ ಡಾ.ಶಂಬುಲಿಂಗ ಬಂಕೊಳ್ಳಿ ಸುದ್ದಿಗೋಷ್ಟಿಯಲ್ಲಿ ವಿವರಿಸಿದರು.
ಯುನಿಟಿ ಆಸ್ಪತ್ರೆ ಮಕ್ಕಳ ಮತ್ತು ಹಿರಿಯರ ಆರೋಗ್ಯ ದೃಷ್ಟಿಯನ್ನಿಟ್ಟು ಕೊಂಡು ಉಚಿತ ಆರೋಗ್ಯ ಶಿಬಿರವನ್ನು ನಡೆಸುತ್ತಾ ಬಂದಿದೆ. ಈ ಬಾರಿಯೂ ಕೂಡ ಮೇ ೫ ರಂದು ಈ ಶಿಬಿರ ಬೆಳಗಿನಿಂದಲೇ ಆರಂಭವಾಗಲಿದ್ದು, ದಂತ ಚಿಕಿತ್ಸೆಗೆ ಸಂಬಂಧಪಟ್ಟಂತೆ ತಪಾಸಣೆ ಮತ್ತು ಹಲವು ರೀತಿಯ ಚಿಕಿತ್ಸೆಗಳನ್ನು ಮತ್ತು ಔಷಧಿಯನ್ನು ನೀಡಲಾಗುತ್ತದೆ. ದಂತ ಚಿಕಿತ್ಸೆಯಲ್ಲಿ ಶೇ.೨೫ರಷ್ಟು ರಿಯಾಯಿತಿ ಕೂಡ ನೀಡಲಾಗುವುದು ಎಂದರು.
ಇತ್ತೀಚಿಗೆ ಮಕ್ಕಳಲ್ಲಿ ಹಿಮೋಗ್ಲೋಬಿನ್ ಕೊರತೆ ಉಂಟಾಗಿದ್ದು, ರಕ್ತಹೀನತೆಯಿಂದ ಮಕ್ಕಳು ಬಳಲುತ್ತಿzರೆ. ಇದು ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಹಾಗಾಗಿ ಈ ಬಗ್ಗೆಯೂ ಕೂಡ ನಾವು ೧೮ ವರ್ಷದ ಒಳಗಿನ ಮಕ್ಕಳಿಗೆ ಉಚಿತವಾಗಿ ಹಿಮೋಗ್ಲೋಬಿನ್ ಪರೀಕ್ಷೆ ಮಾಡಿ ಸೂಕ್ತ ಚಿಕಿತ್ಸೆಯನ್ನು ನೀಡುತ್ತೇವೆ. ರಕ್ತಹೀನತೆಯಿಂದ ಮುಕ್ತಗೊಳಿಸು ವುದು ನಮ್ಮ ಉದ್ದೇಶವಾಗಿದೆ. ಹಾಗೆಯೇ ಮಕ್ಕಳಲ್ಲಿ ಇರುವ ದಂತದ ತೊಂದರೆಯನ್ನು ಕಂಡು ಹಿಡಿದು ಅದಕ್ಕೆ ಚಿಕಿತ್ಸೆ ನೀಡಲಾಗುವುದು ಎಂದರು.
ಭಾರತೀಯ ವೈದ್ಯ ಸಂಘದ ಅಧ್ಯಕ್ಷ ಶ್ರೀಧರ್ ಮಾತನಾಡಿ, ಈ ಶಿಬಿರಕ್ಕೆ ಐಎಂಎ ಕೂಡ ಸಹಕಾರ ನೀಡುತ್ತದೆ. ಮಕ್ಕಳ ತಜ್ಞರಿಂದ ಆರೋಗ್ಯ ತಪಾಸಣೆಯಲ್ಲದೆ ಸಮಾಲೋಚನೆಯನ್ನು ಕೂಡ ನಡೆಸಬಹುದಾಗಿದೆ. ಇದರ ಜೊತೆಗೆ ಟೈಫಾಯಿಡ್, ಜಂಡೀಸ್ ಮುಂತಾದ ಸೋಂಕು ರೋಗಗಳ ವಿರುದ್ಧವು ಲಸಿಕೆಗಳನ್ನು ನೀಡಲಾಗುತ್ತದೆ. ಇದರ ಪ್ರಯೋಜನವನ್ನು ಪಡೆಯಬೇಕು ಎಂದರು.
ಹೆಚ್ಚಿನ ವಿವರಗಳಿಗೆ ಮತ್ತು ನೊಂದಣಿಗಾಗಿ ೮೭೬೨೧೭೧೨೨೫, ೭೮೯೨೬೧೧೭೨೩೩ನ್ನು ಸಂಪರ್ಕಿಸಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಕ್ಕಳ ತಜ್ಞರಾದ ಡಾ.ರಾಜರಾಮ್ ಉಪ್ಪೂರ್, ಡಾ.ಅಜಯ್‌ಬಡ್ಡಿ, ಡಾ.ಸೌಮ್ಯ ಇದ್ದರು.