ತಾಜಾ ಸುದ್ದಿರಾಜಕೀಯ

ಮಾ. 26: ಮೈಸೂರಿನಲ್ಲಿ ಪಂಚರತ್ನ ರಥಯಾತ್ರೆ ಸಮಾರೋಪ…

Share Below Link

ಮೈಸೂರು: ಬಹು ನಿರೀಕ್ಷಿತ ಪಂಚರತ್ನ ರಥ ಯಾತ್ರೆಯ ಸಮಾರೋಪ ಸಮಾರಂಭವನ್ನು ಮಾ. ೨೬ರಂದು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗುವುದು. ಸಮಾವೇಶದಲ್ಲಿ ಸುಮಾರು ಹತ್ತು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪಂಚರತ್ನ ರಥಯಾತ್ರೆಯಲ್ಲಿ ರಾಜ್ಯದಾದ್ಯಂತ ಅತ್ಯುತ್ತಮವಾದ ರೀತಿಯ ಜನಬೆಂಬಲವನ್ನು ನಾಡಿನ ಜನತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಆಶೀರ್ವದಿಸಿzರೆ. ಅದಕ್ಕೆ ಪೂರಕವಾಗಿ ಜನತೆಯ ಬೆಂಬಲವನ್ನು ನಾನು ಕಳೆದ ೩ ತಿಂಗಳ ರಥಯಾತ್ರೆಯಲ್ಲಿ ಕಂಡಿದ್ದೇನೆ. ಅದು ಅಂತಿಮವಾಗಿ ಮೈಸೂರು ನಗರದಲ್ಲಿ ಅಭಿಮಾನಿ ಗಳು, ಪಕ್ಷದ ಕಾರ್ಯಕರ್ತರ ಸಮಾವೇಶವಾಗಲಿದೆ ಎಂದರು.
ಚುನಾವಣೆಯ ವೇಳಾಪಟ್ಟಿ ಯನ್ನು ಮಾ. ೨೬ರ ಆಸುಪಾಸಿನಲ್ಲಿ, ಏಪ್ರಿಲ್ ಮೊದಲನೇ ವಾರದಲ್ಲಿ ಚುನಾವಣಾ ಆಯೋಗ ಘೋಷಣೆ ಮಾಡಬಹುದೆಂದು ಎಲ್ಲರೂ ನಿರೀಕ್ಷೆ ಇಟ್ಟುಕೊಂಡಿzರೆ. ಅದರ ಹಿನ್ನೆಲೆಯಲ್ಲಿ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ಎಂದು ಹೇಳಿದರು.
ನಾಡಿನ ಜನತೆಯ ಪ್ರತಿನಿತ್ಯದ ಸಮಸ್ಯೆಗಳನ್ನು ಗಮನಿಸಿ ಐದು ಕಾರ್ಯಕ್ರಮವನ್ನು ರಚನೆ ಮಾಡಿ ದ್ದೇನೆ. ಈ ಕಾರ್ಯಕ್ರಮಗಳು ಹೊಸ ಕಾರ್ಯಕ್ರಮಗಳೇನಲ್ಲ ಎಂದು ಹೇಳುತ್ತಾರೆ. ನಾನು ಕಾಂಗ್ರೆಸ್ ನೀಡುವ ಗ್ಯಾರಂಟಿ ಕಾರ್ಡ್‌ನ ಕಾರ್ಯಕ್ರಮಗಳಾಗಲಿ, ಬಿಜೆಪಿ ಸರ್ಕಾರದಲ್ಲಿ ಅವರು ಕೊಟ್ಟಂತಹ ಕಾರ್ಯಕ್ರಮಗಳ ಕುರಿತು ಮಾತನಾಡಲ್ಲ ಎಂದರು.
ಕಾಂಗ್ರೆಸ್, ಬಿಜೆಪಿಯವರು ಪರಸ್ಪರ ಟೀಕೆಗಳಿಗೆ ಸಮಯ ಮೀಸಲಿಟ್ಟಿzರೆ. ನಾನು ನನ್ನ ಕಾರ್ಯಕ್ರಮದಲ್ಲಿ ಜನತೆಯ ಮುಂದೆ ಈಗಾಗಲೇ ಸುಮಾರು ೮೬ ವಿಧಾನಸಭಾ ಕ್ಷೇತ್ರಗಳ ತಲಾ ೫೦-೬೦ ಹಳ್ಳಿಗಳಿಗೆ ಭೇಟಿ ಕೊಟ್ಟು ದಿನಕ್ಕೆ ೫೦ರಿಂದ ೧೦೦ ಕಿ.ಮೀ. ಹಳ್ಳಿಗೆ ಭೇಟಿ ಕೊಡಬೇಕಾದರೆ ಪ್ರವಾಸ ಮಾಡಿದ್ದೇನೆ. ನನ್ನ ಕಾರ್ಯಕ್ರಮಕ್ಕೆ ಒಂದು ಅವಕಾಶ ಕೊಡಿ ಎಂದು ಮನವಿ ಸಲ್ಲಿಸಿ ಹೊರಟಿದ್ದೇನೆ.
ಕಾಂಗ್ರೆಸ್ ಬಗ್ಗೆಯಾಗಲಿ, ಬಿಜೆಪಿ ಬಗ್ಗೆಯಾಗಲಿ ಟೀಕೆ ಮಾಡಿ ಸಮಯ ವ್ಯರ್ಥ ಮಾಡಲು ಹೋಗಿಲ್ಲ, ಟೀಕೆ ಮಾಡುವುದ ರಿಂದ ಜನರ ಸಮಸ್ಯೆಗೆ ಪರಿಹಾರ ದೊರಕಲ್ಲ. ನನಗೆ ಆದ ಅನುಭವದಲ್ಲಿ ನಾಡಿನ ಜನತೆ ಅನುಭವಿಸುತ್ತಿರುವ ಸಮಸ್ಯೆ ಬಗೆ ಹರಿಸುವುದು ಹೇಗೆ ಎಂಬ ದೂರದೃಷ್ಟಿಯಿಂದ ಕೆಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡಿ ಅದಕ್ಕೆ ಸಿದ್ಧತೆಯನ್ನೂ ಮಾಡಿದ್ದೇನೆ ಎಂದು ತಿಳಿಸಿದರು.
ಕಣ್ಣೀರು ವಿಚಾರಕ್ಕೆ ಹೆಚ್ ಡಿ ಕೆ ಸ್ಪಷ್ಟನೆ ನೀಡಿ, ಮನುಷ್ಯತ್ವ ಇರುವವರಿಗೆ ಕಣ್ಣೀರು ಬರುತ್ತದೆ. ಕಟುಕರಿಗೆ ಕಣ್ಣೀರು ಬರುವುದಿಲ್ಲ. ಕಣ್ಣೀರು ಯಾವುದೇ ಕಾರಣಕ್ಕೂ ದೌರ್ಬಲ್ಯವಲ್ಲ ಎಂದು ತಿಳಿಸಿದರು.