ಮೇ 18: ಎಟಿಎನ್‌ಸಿಸಿ ಕಾಲೇಜಿನಲ್ಲಿ ಆಚಾರ್ಯ ಅದ್ವಿತೀಯ
ಶಿವಮೊಗ್ಗ : ನಗರದ ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಮೇ ೧೮ರ ಶನಿವಾರ ಕಾಲೇಜಿನ ಆವರಣದಲ್ಲಿ ‘ಆಚಾರ್ಯ ಅದ್ವಿತೀಯ’ ರಾಜ್ಯ ಮಟ್ಟದ ಸಾಂಸ್ಕೃತಿಕ ಮತ್ತು ನಿರ್ವಹಣಾ ಉತ್ಸವ ಏರ್ಪಡಿಸಲಾಗಿದೆ ಎಂದು ಪ್ರಾಂಶುಪಾಲೆ ಪ್ರೊ.ಪಿ.ಆರ್. ಮಮತಾ ಅವರು ಸುದ್ದಿಗೋಷ್ಟಿಯಲ್ಲಿ ವಿವರಿಸಿದರು.
ಮೇ ೧೮ರಂದು ಬೆಳಗ್ಗೆ ೧೦ ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕುಲಸಚಿವ ಎ.ಎಲ್.ಮಂಜುನಾಥ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿzರೆ. ಎನ್‌ಇಎಸ್ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್, ಕಾರ್ಯದರ್ಶಿ ಎಸ್.ಎನ್. ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಅತಿಥಿಗಳಾಗಿ ಭಾಗವಹಿಸಲಿzರೆ ಎಂದರು.
ಸಮಾರೋಪ ಸಮಾರಂಭ ದಲ್ಲಿ ಉನ್ನತ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ.ವಿಷ್ಣುಮೂರ್ತಿ, ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎಸ್.ಎಂ. ಗೋಪಿನಾಥ, ಖ್ಯಾತ ಉದ್ಯಮಿ ನಿವೇದನ ನೆಂಪೆ, ಖ್ಯಾತ ವೈದ್ಯ ಡಾ| ರಾಹುಲ್ ದೇವರಾಜ, ಎನ್‌ಇಎಸ್ ಖಜಂಚಿ ಡಿ.ಜಿ.ರಮೇಶ್, ನಿರ್ದೇಶಕ ಅಶ್ವತ್ಥನಾರಾಯಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿzರೆ.
ಈ ಉತ್ಸವದಲ್ಲಿ ರಾಜ್ಯದ ವಿವಿಧ ಕಾಲೇಜುಗಳ ಸುಮಾರು ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಬೆಸ್ಟ್ ಮ್ಯಾನೇಜರ್, ಮಾರ್ಕೆಟಿಂಗ್, ಹೆಚ್‌ಆರ್, ಫೈನಾನ್ಸ್, ಹಾಡು, ನೃತ್ಯ, ರೀಲ್ಸ್, ಚಿತ್ರಕಲೆ, ಸ್ಟಾಂಡ್ ಅಪ್ ಕಾಮಿಡಿ ಸೇರಿದಂತೆ ೧೦ ವಿವಿಧ ಸಾಂಸ್ಕೃತಿಕ ಮತ್ತು ನಿರ್ವಹಣಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಎಸ್. ಜಗದೀಶ್, ಪ್ರೊ.ಕೆ.ಎಂ. ನಾಗರಾಜ, ಪ್ರೊ.ಎನ್. ಮಂಜುನಾಥ, ಪ್ರೊ.ಜಿ. ರವಿಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಫ್ಲಾಷ್ ಮಾಬ್…
ವಿದ್ಯಾರ್ಥಿಗಳು ಕಾಲೇಜಿನ ಮಹಡಿ ಮೇಲಿಂದ ಕಾರ್ಯಕ್ರಮದ ಲೋಗೊವನ್ನು ವಿಶೇಷವಾಗಿ ಅನಾವರಣಗೊಳಿಸಿ ಬಣ್ಣದ ಹೊಗೆಯ ಮಂಜು ಬೀರಿ ಸಂಭ್ರಮಿಸಿದರು. ನಂತರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿವಿಧ ಹಾಡುಗಳಿಗೆ ಹೆಜ್ಜೆ ಹಾಕಿದರು.