ಜಿಲ್ಲಾ ಸುದ್ದಿತಾಜಾ ಸುದ್ದಿ

ಮಾ.25: ರಾಗಿಗುಡ್ಡ ಉಳಿವಿಗೆ ಆಗ್ರಹಿಸಿ ಕಾಲ್ನಡಿಗೆ ಹಾಗೂ ಸೈಕಲ್ ಜಥಾ…

Share Below Link

ಶಿವಮೊಗ್ಗ: ನಗರದ ಏಕೈಕ ದಟ್ಟ ಹಸಿರಿನ ತಾಣವಾದ ರಾಗಿಗುಡ್ಡ ಉಳಿಸಲು ಆಗ್ರಹಿಸಿ ಮಾ.೨೫ರಂದು ಬೆಳಿಗ್ಗೆ ೯-೩೦ಕ್ಕೆ ರಾಗಿಗುಡ್ಡದ ಉತ್ತರ ಭಾಗದಿಂದ ಜಿಧಿಕಾರಿಗಳ ಕಚೇರಿವರೆಗೆ ಕಾಲ್ನಡಿಗೆ ಹಾಗೂ ಸೈಕಲ್ ಜಥಾ ಹಮ್ಮಿಕೊಳ್ಳಲಾಗಿದೆ ಎಂದು ರಾಗಿಗುಡ್ಡ ಉಳಿಸಿ ಅಭಿಯಾನದ ಸಂಚಾಲಕ ಕೆ.ವಿ. ವಸಂತಕುಮಾರ್ ಹೇಳಿದರು.
ಅವರು ಇಂದು ನವ್ಯಶ್ರೀ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ನಗರಕ್ಕೆ ರಾಗಿಗುಡ್ಡ ಒಂದು ಕಳಸಪ್ರಾಯದಂತೆ ಇದೆ. ನೀರಿನ ಸೆಲೆಯಾಗಿದೆ. ಹಸಿರಿನ ತಾಣವಾಗಿದೆ. ಧಾರ್ಮಿಕ ಪವಿತ್ರ ಕ್ಷೇತ್ರವೂ ಆಗಿದೆ. ಆದರೆ ಈಗ ಅದರ ನಾಶ ಆರಂಭವಾಗಿದೆ. ಶಿವಮೊಗ್ಗದ ಪರಿಸರಕ್ಕೆ ರಾಗಿಗುಡ್ಡ ನಾಶ ಘೋರ ಶಾಶ್ವತ ಅನ್ಯಾಯ ಮಾಡುತ್ತಿದೆ. ಇದನ್ನು ಉಳಿಸಲು ಪರಿಸರಾಸಕ್ತರು ಒಂದು ಅಭಿ ಯಾನವನ್ನೇ ಆರಂಭ ಮಾಡಿ ದ್ದೇವೆ. ಅಭಿಯಾನದ ಮುಂದು ವರಿದ ಭಾಗವಾಗಿ ಈ ಜಥಾ ಹಮ್ಮಿಕೊಂಡಿದ್ದೇವೆ ಎಂದರು.
ರಾಗಿಗುಡ್ಡ ೧೦೮ ಎಕರೆ ವಿಸ್ತೀರ್ಣ ಪ್ರದೇಶವಾಗಿದೆ. ಆದರೆ ಈಗಾಗಲೇ ವಿವಿಧ ಯೋಜನೆ ಗಳಿಗಾಗಿ ಸುಮಾರು ೭೪ ಎಕರೆ ಜಗವನ್ನು ಪರಭಾರೆ ಮಾಡ ಲಾಗಿದೆ. ಇದರಲ್ಲಿ ೫ ಎಕರೆ ಇಎಸ್‌ಐ ಆಸ್ಪತ್ರೆಗೆ ಬಳಸಿಕೊ ಂಡಿದ್ದು, ೫೦ ಅಡಿಯವರೆಗೆ ಗುಡ್ಡ ಕಡಿಯಲಾಗಿದೆ. ಲಕ್ಷಾಂತರ ರೂ. ಮಲ್ಯದ ಫಲವತ್ತಾದ ಮಣ್ಣು, ಕಲ್ಲು ಲೂಟಿಯಾಗಿದೆ. ಉಳಿದ ೬೯ ಎಕರೆ ಗುಡ್ಡವೂ ಸಹ ನೆಲ ಸಮವಾಗಲಿದೆ. ಒಟ್ಟಾರೆ ಇಡೀ ರಾಗಿಗುಡ್ಡವೇ ನಾಶವಾಗಲಿದೆ. ಹಾಗಾಗಿ ಈಗಲೇ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ವಿವಿಧ ಯೋಜನೆಗಳಿಗೆ ನೀಡಿರುವ ಜಗದ ಮಂಜೂರಾತಿ ಪತ್ರ ಕೂಡಲೇ ರದ್ದುಮಾಡಬೇಕು. ರಾಗಿಗುಡ್ಡ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಸಂರಕ್ಷಿತ ಅರಣ್ಯವಾಗಿ ಘೋಷಿಸಬೇಕು. ರಾಗಿಗುಡ್ಡವನ್ನು ಗುಡ್ಡದ ಕಾಡಾ ಗಿಯೇ ಉಳಿಸಬೇಕು ಎಂಬುದು ನಮ್ಮ ಆಗ್ರಹ ಎಂದರು.
ಈ ಬೃಹತ್ ಜಥಾಕ್ಕೆ ಈಗಾ ಗಲೇ ಸುಮಾರು ೧೦ಸಾವಿರಕ್ಕೂ ಹೆಚ್ಚು ಪರಿಸರಾಸಕ್ತರು ಸಹಿ ಮಾಡಿzರೆ. ಶಿವಮೊಗ್ಗದ ಹಲ ವಾರು ಸಂಘ ಸಂಸ್ಥೆಗಳು ಯೋಗ ಕೇಂದ್ರಗಳು, ಜಿ ಮತ್ತು ವಾಣಿಜ್ಯ ಕೈಗಾರಿಕಾ ಸಂಘ ಮುಂತಾದ ಹಲವು ಸಂಸ್ಥೆಗಳು ಬೆಂಬಲ ನೀಡಿವೆ. ಸುಮಾರು ೧೦ಸಾವಿರ ಜನರು ಇದನ್ನು ವಿರೋಧಿಸಿ ಸಹಿ ಹಾಕಿzರೆ. ಸಂಘಸಂಸ್ಥೆಗಳು ಬೆಂಬಲ ನೀಡಿ ರುವ ಮನವಿ ಪತ್ರವನ್ನು ಜಥಾದ ನಂತರ ಜಿಧಿಕಾರಿಗಳಿಗೆ ಸಲ್ಲಿಸುತ್ತೇವೆ ಎಂದರು.
ಜಥಾಕ್ಕೆ ಬರುವವರಿಗೆ ಸೂಚನೆ: ಜಥಾಕ್ಕೆ ಬರುವವರಿಗೆ ಅನುಕೂಲವಾಗುವಂತೆ ನೆಹರೂ ಸ್ಟೇಡಿಯಂನಿಂದ ಬೆಳಿಗ್ಗೆ ೯ಗಂಟೆಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಒಂದುಪಕ್ಷ ರಾಗಿಗುಡ್ಡದಲ್ಲಿಯೇ ತಮ್ಮ ವಾಹನ ನಿಲ್ಲಿಸಿ ಜಥಾದಲ್ಲಿ ಭಾಗವಹಿಸುವವರಿಗೆ ಜಥಾದ ನಂತರ ವಾಪಾಸು ಹೋಗಲು ಸಹ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಜಥಾವು ಸುಮಾರು ೪.೫ಕಿಮೀ. ಉದ್ದದ ನಡಿಗೆಯಾಗಿದೆ. ಬಿಸಿಲೂ ಇರುತ್ತದೆ ಹಾಗಾಗಿ ತಲೆಗೆ ಕ್ಯಾಪ್ ಮತ್ತು ವಾಕಿಂಗ್ ಶೂ ಧರಿಸಬೇಕು. ಸೈಕಲ್‌ನಲ್ಲಿ ಕೂಡ ಭಾಗವಹಿಸಬ ಹುದು. ಅಕಸ್ಮಾತ್ ನಡೆಯಲು ಸಾಧ್ಯವಾಗದವರು ಬೆಳಿಗ್ಗೆ ೧೦-೩೦ಕ್ಕೆ ಉಷಾ ನರ್ಸಿಂಗ್ ಹೋಂ ಸರ್ಕಲ್‌ನಿಂದ ಜಥಾಕ್ಕೆ ಸೇರಿಕೊಳ್ಳಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಭಿಯಾನದ ಪ್ರಮುಖರಾದ ನಾಗೇಶ್ ನವ್ಯಶ್ರೀ, ಶ್ರೀಪತಿ, ಪರಿಸರ ನಾಗರಾಜ್, ಶೇಖರಗೌಳೇರ್, ಜೋಯ್ಸ್., ಚನ್ನವೀರ ಗಾಮನಕಟ್ಟೆ ಇದ್ದರು.