ಜಿಲ್ಲಾ ಸುದ್ದಿತಾಜಾ ಸುದ್ದಿ

ಮಾ.೨೫: ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಆದ ಅನ್ಯಾಯ ಸರಿಪಡಿಸಲು ಆಗ್ರಹಿಸಿ ಹಕ್ಕೊತ್ತಾಯ…

Share Below Link

ಶಿವಮೊಗ್ಗ : ಒಳ ಮೀಸಲಾತಿ ಹಂಚಿಕೆಯಲ್ಲಿ ಬಲಗೈ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ರಾಜ್ಯಸರ್ಕಾರಕ್ಕೆ ಆಗ್ರಹಿಸಿ ರಾಜ್ಯ ಬಲಗೈ ಸಮುದಾಯದ ಒಕ್ಕೂಟ ದಿಂದ ಮಾ.೨೫ರ ಬೆಳಿಗ್ಗೆ ೧೦ ರಿಂದ ಸಂಜೆ ೫ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಕ್ಕೊತ್ತಾಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾ ಗಿದೆ ಎಂದು ಜಿ ಛಲವಾದಿ ಮಹಾಸಭಾದ ಮುಖಂಡ ಬಿ.ಡಿ.ಸಾವಕ್ಕನವರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಹಂಚಿಕೆ ವಿಚಾರವಾಗಿ ಬಲಗೈ ಸಮುದಾಯಕ್ಕೆ ಅನ್ಯಾಯ ವಾಗುತ್ತಿದ್ದು ರೋಸ್ಟರ್ ಪದ್ಧತಿಯಲ್ಲಿ ಬದಲಾವಣೆ ಮಾಡಿ ಎಲ್ಲರಿಗೂ ಸಮಾನವಾಗಿ ಮೀಸಲಾತಿ ಹಂಚಿಕೆ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಒಳಮೀಸಲಾತಿ ನಿಲುವಿನಲ್ಲಿ ಶೇ.೧೭ ಮಾಡಿದ್ದು, ಆದರೆ ಕರ್ನಾಟಕ ಉಚ್ಛನ್ಯಾಯಾಲಯವು ಇದನ್ನು ಶೇ.೫೦ಕ್ಕಿಂತ ಮೀಸಲಾತಿ ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಆದೇಶಿಸಿದ್ದ ಪ್ರಕಾರ ಶೇ.೫೦ಕ್ಕೆ ಸೀಮಿತಗೊಳಿಸಿ ದ್ದಲ್ಲಿ ಪರಿಶಿಷ್ಟ ಜತಿಯವರಿಗೆ ಶೇ.೧೫ರಷ್ಟು ಮಾತ್ರ ದೊರೆಯು ತ್ತದೆ. ಈ ಸದರಿ ಶೇ.೧೫ರ ಕರ್ನಾಟಕ ಸರ್ಕಾರವು ೧೦೧ ಜತಿಯಲ್ಲಿನ ಒಳಮೀಸಲಾತಿಯಾಗಿ ಹಂಚಿಕೆ ಮಾಡಬೇಕಾಗಿದೆ. ಆದರೆ ಸರ್ಕಾರವು ವಿಳಂಬ ನೀತಿ ಅನುಸರಿಸಿ ಅಸ್ಪಶ್ಯರಲ್ಲಿ ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟಿದ ವಾತಾವರಣ ನಿರ್ಮಾಣವಾಗಿರು ವುದು ದುರಾದೃಷ್ಟಕರ ಎಂದರು.


ನಮ್ಮ ರಾಜ್ಯದಲ್ಲಿ ಅಸ್ಪಶ್ಯರಂದರೆ ಹೊಲೆಯ, ಮಾದಿಗರ ನಿಜವಾದ ಅಸ್ಪಶ್ಯರು ಫಲಾನುಭವಿಗಳಾಗಿ ರುತ್ತಾರೆ. ಇಲ್ಲಿಯವರೆಗೆ ಈ ಜತಿಗಳಿಗೆ ನ್ಯಾಯ ಸಿಕ್ಕಿಲ್ಲ. ಕಾರಣ ಅಸ್ಪಶ್ಯರು ಎಲ್ಲರೂ ಒಂದಾಗಿ ಹೋರಾಟ ನಡೆಸಿ ರಾಜ್ಯ ಸರ್ಕಾರ ದಿಂದ ನ್ಯಾಯ ಪಡೆಯುವ ದಿಸೆಯಲ್ಲಿ ನಮ್ಮ ಹೋರಾಟ ಈ ನಿಲುವನ್ನು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ನಮ್ಮ ಜಿ ಸಮಾಜದ ನಿಲುವನ್ನು ತಿಳಿಸಬೇಕಾಗಿದೆ ಎಂದರು.
ಹೊಲೆಯ-ಛಲವಾದಿ ತತ್ಸಮಾನಾಂತರ ಬಲಗೈ ಸಮಾಜಕ್ಕೆ ಒಳಮೀಸಲಾತಿಯಲ್ಲಿ ನ್ಯಾಯ ಸಮ್ಮತವಾದ ಹಂಚಿಕೆಯಾಗಬೇ ಕೆಂಬುದೇ ನಮ್ಮ ಹಕ್ಕೊತ್ತಾಯ. ಈ ಹಿಂದೆ ಸರ್ಕಾರಿ ಆದೇಶದ ಒಳಮೀಸಲಾತಿ ಅನ್ವಯ ಬಿಂದು ಗಳನ್ನು ನಿಗದಿಪಡಿಸಿದಲ್ಲಿ ೧,೯,೧೩ ಈ ರೀತಿಯಾಗಿ ಅವೈeನಿಕವಾಗಿ ಮಾಡಿದ್ದು, ಎ ೧೦೧ ಜತಿಗಳಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದರು.
ಮಾ.೨೫ರಂದು ಬೆಂಗಳೂರಿ ನಲ್ಲಿ ಹಮ್ಮಿಕೊಂಡಿರುವ ಹಕ್ಕೊತ್ತಾಯ ಕಾರ್ಯಕ್ರಮದಲ್ಲಿ ರಾಜ್ಯದಿಂದ ಸುಮಾರು ೫ ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಶಿವಮೊಗ್ಗ ಜಿಯಿಂದಲೂ ಸಹ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿzರೆ ಎಂದರು.
ಜಿ ಛಲವಾದಿ ಮಹಾ ಸಭಾದ ಅಧ್ಯಕ್ಷ ಕುಮಾರಸ್ವಾಮಿ, ಗೌರವಾಧ್ಯಕ್ಷ ಹೆಚ್.ಸಿದ್ದಪ್ಪ, ಉಪಾಧ್ಯಕ್ಷೆ ಲಲಿತಮ್ಮ, ಪ್ರಧಾನ ಕಾರ್ಯದರ್ಶಿ ಡಿ.ಕಾಂತರಾಜ್ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *