ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಇತಿಹಾಸವನ್ನು ಕಣ್ಣಾರೆ ನೋಡಿ, ಕೈಯಲ್ಲಿ ಹಿಡಿದು ಅನುಭವಿಸುವ ಅವಕಾಶ ಒದಗಿಸಿದ ಮಲೆನಾಡು ನಾಣ್ಯ ಸಂಗ್ರಹಕಾರರು…

Share Below Link

ವಿಶೇಷ ಲೇಖನ: ಅ. ರಾಕೇಶ್ ಡಿಸೋಜ – 9448343211
ಶಿವಮೊಗ್ಗ, (ಹೊಸನಾವಿಕ): ಇತಿಹಾಸವನ್ನು ಕೇವಲ ಓದಿ ತಿಳಿಯು ವುದಕ್ಕಿಂತ, ಕಣ್ಣಾರೆ ನೋಡಿ, ಕೈಯಲ್ಲಿ ಹಿಡಿದು ಅನುಭವಿಸುವ ಅವಕಾಶ ಸಿಕ್ಕಾಗ ಅದರ ಮಲ್ಯ ಅನೇಕ ಪಟ್ಟು ಹೆಚ್ಚಾಗುತ್ತದೆ. ಪುಸ್ತಕಗಳ ಪುಟಗಳಲ್ಲಿ ಸೀಮಿತವಾಗಿರುವ ಇತಿಹಾಸ, ನಾಣ್ಯ, ನೋಟುಗಳು ಮತ್ತು ಅಂಚೆ ಚೀಟಿಗಳ ರೂಪದಲ್ಲಿ ಜೀವಂತ ಸಾಕ್ಷಿಯಾಗಿ ನಮ್ಮ ಮುಂದೆ ನಿಲ್ಲುತ್ತದೆ. ನಾಣ್ಯಗಳು ಮಾತಾಡುವುದಿಲ್ಲ; ಆದರೆ ಅವು ಮನವಾಗಿಯೇ ನಮ್ಮ ಗತಕಾಲದ ಇತಿಹಾಸ ಮತ್ತು ಸಂಸ್ಕೃತಿಯನ್ನು ಹಾಗೂ ಆರ್ಥಿಕ ವೈಭವವನ್ನು ಸ್ಪಷ್ಟವಾಗಿ ತಿಳಿಸುತ್ತವೆ .
ಈ ಹಿನ್ನೆಲೆಯ ಶಿವಮೊಗ್ಗದ ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಾಹಕರ ಟ್ರಸ್ಟ್ ವತಿಯಿಂದ ಜ.೧೬ರಿಂದ ೧೮ರವರೆಗೆ ಮೂರು ದಿನಗಳ ಕಾಲ ಶಿವಮೊಗ್ಗದ ವಿನೋಬ ನಗರ ೬೦ ಅಡಿ ರಸ್ತೆಯ ಶುಭ ಮಂಗಳ ಸಮುದಾಯ ಭವನದಲ್ಲಿ ಆಯೋಜಿಸಿ ರುವ ರಾಷ್ಟ್ರಮಟ್ಟದ ನಾಣ್ಯ- ನೋಟು ಗಳು, ಅಂಚೆ ಚೀಟಿಗಳು ಹಾಗೂ ಅಪರೂಪದ ವಸ್ತುಗಳ ಪ್ರದರ್ಶನ ಒಂದು ಮಹತ್ವದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರಯತ್ನವೆಂದೇ ಹೇಳಬಹುದು.
ಈ ಪ್ರದರ್ಶನ ಕೇವಲ ಸಂಗ್ರಾಹಕರರು ಅಥವಾ ಹವ್ಯಾಸಿಗಳಿಗೆ ಸೀಮಿತವಾಗದೇ, ಸಾಮಾನ್ಯ ಜನರು, ವಿದ್ಯಾರ್ಥಿಗಳು ಹಾಗೂ ಯುವ ಸಮೂಹಕ್ಕೆ ಇತಿಹಾಸವನ್ನು ನೇರವಾಗಿ ಅನುಭವಿಸುವ ಅಪೂರ್ವ ವೇದಿಕೆ ಯಾಗಿರುವುದು ಇದರ ಅತ್ಯಂತ ದೊಡ್ಡ ವೈಶಿಷ್ಟ್ಯ. ಪಠ್ಯ ಪುಸ್ತಕಗಳಲ್ಲಿ ಓದುವ ರಾಜವಂಶಗಳು, ಸಾಮ್ರಾಜ್ಯಗಳು, ಆಳ್ವಿಕೆ ಪದ್ಧತಿಗಳು ಇಲ್ಲಿ ನಾಣ್ಯಗಳ ಮೂಲಕ ಸ್ಪಷ್ಟವಾಗಿ ನಮ್ಮ ಮುಂದೆ ತೆರೆದುಕೊಳ್ಳುತ್ತವೆ.
ನಾಣ್ಯಗಳು ಮತ್ತು ನೋಟುಗಳು ಕೇವಲ ಹಣದ ವ್ಯವಹಾರದ ಸಾಧನ ಗಳಲ್ಲ. ಅವು ಆ ಕಾಲಘಟ್ಟದ ರಾಜಕೀಯ ವ್ಯವಸ್ಥೆ, ಆರ್ಥಿಕ ಸ್ಥಿತಿ, ಧಾರ್ಮಿಕ ನಂಬಿಕೆಗಳು, ಸಾಂಸ್ಕೃತಿಕ ಮಲ್ಯಗಳು ಮತ್ತು ಸಾಮಾಜಿಕ ರಚನೆಗಳನ್ನು ಪ್ರತಿಬಿಂಬಿಸುವ ಜೀವಂತ ದಾಖಲೆಗಳು. ರಾಜ ಮಹಾರಾಜರ ಆಳ್ವಿಕೆ ಕಾಲದ ಚಿನ್ನ, ಬೆಳ್ಳಿ, ತಾಮ್ರ ಮತ್ತು ಸೀಸದ ನಾಣ್ಯಗಳು ಅಂದಿನ ರಾಜ್ಯದ ಸಂಪತ್ತು, ವಾಣಿಜ್ಯ ಬಲ, ಧರ್ಮಕ್ಕೆ ನೀಡಿದ ಆದ್ಯತೆ ಹಾಗೂ ಕಲಾತ್ಮಕ ಸಂವೇದನೆಗಳನ್ನು ಒತ್ತಿ ಹೇಳುತ್ತವೆ. ನಾಣ್ಯದ ಮೇಲೆ ಮುದ್ರಿತ ಚಿಹ್ನೆಗಳು, ದೇವತೆಗಳ ರೂಪಗಳು, ರಾಜರ ಮುಖಚಿತ್ರಗಳು ಮತ್ತು ಶಾಸನಗಳು ಇತಿಹಾಸದ ಮನ ಭಾಷೆಯಂತೆ ನಮ್ಮೊಡನೆ ಮಾತನಾಡುತ್ತವೆ.
ಅಂಚೆ ಚೀಟಿಗಳ ಜಗತ್ತು ಮತ್ತೊಂದು ವಿಶಾಲ ಅಧ್ಯಯನ ಕ್ಷೇತ್ರವೇ ಆಗಿದೆ. ಒಂದು ಸಣ್ಣ ಅಂಚೆ ಚೀಟಿ ದೇಶದ ರಾಜಕೀಯ ಬದಲಾವಣೆ, ಸ್ವಾತಂತ್ರ್ಯ ಹೋರಾಟದ ಹಂತಗಳು, ಮಹನೀಯರ ಜೀವನ ಸಾಧನೆ, ಪ್ರಕೃತಿ ಸೌಂದರ್ಯ, ವಿeನ- ತಂತ್ರeನ ಪ್ರಗತಿ ಮತ್ತು ಸಾಮಾಜಿಕ ಜಗೃತಿಯ ಕಥೆಯನ್ನು ತನ್ನೊಳಗೆ ಹೊತ್ತಿ ರುತ್ತದೆ. ಪತ್ರವಹನದ ಯುಗದಿಂದ ಡಿಜಿಟಲ್ ಸಂವಹನದ ಯುಗದ ವರೆಗಿನ ದೀರ್ಘ ಪಯಣವನ್ನು ಅಂಚೆ ಚೀಟಿಗಳು ಶಿಸ್ತಿನಿಂದ ದಾಖಲಿಸಿರು ವುದು ಗಮನಾರ್ಹ.
ನಗರದಲ್ಲಿ ಏರ್ಪಡಿಸಿರುವ ಈ ಪ್ರದರ್ಶನದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿರುವ ಖ್ಯಾತ ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಾಹಕರು ತಮ್ಮ ಅಪರೂಪದ, ಅಮೂಲ್ಯ ಸಂಗ್ರಹ ಗಳನ್ನು ಪ್ರದರ್ಶಿಸುತ್ತಿರುವುದು ವಿಶೇಷ ಆಕರ್ಷಣೆಯಾಗಿದೆ. ಬ್ರಿಟಿಷ್ ಹಾಗೂ ಪೋರ್ಚುಗೀಸರ ಆಳ್ವಿಕೆಯ ಕಾಲದ ನಾಣ್ಯ- ನೋಟುಗಳು, ದೇಶ ವಿದೇಶಗಳ ಹಳೆಯ ಹಾಗೂ ನವೀನ ನಾಣ್ಯಗಳು, ಪಾಲಿಮರ್ ಪ್ಲಾಸ್ಟಿಕ್ ನೋಟುಗಳು, ಸ್ವತಂತ್ರ ಭಾರತದ ವಿಶೇಷ ಸ್ಮಾರಕ ನಾಣ್ಯಗಳು ಮತ್ತು ನೋಟುಗಳು ಎಲ್ಲವೂ ಒಂದೇ ಸೂರಿನಡಿ ಕಾಣಸಿಗಲಿರುವುದು ನಾಣ್ಯ ಶಾಸ್ತ್ರ ಮತ್ತು ಅಂಚೆ ಚೀಟಿ ಶಾಸ್ತ್ರ ಎರಡಕ್ಕೂ ಜೀವಂತ ಪಾಠಶಾಲೆಯಂತಿದೆ.
ಇಂತಹ ಪ್ರದರ್ಶನಗಳು ಮಕ್ಕಳಲ್ಲಿ ಮತ್ತು ಯುವಕರಲ್ಲಿ ಸಂಶೋಧನಾ ಮನೋಭಾವವನ್ನು ಬೆಳೆಸಲು ಸಹಕಾರಿ ಯಾಗುತ್ತವೆ. ಈ ನಾಣ್ಯ ಯಾವ ಕಾಲದ್ದು?, ಈ ಚೀಟಿಯ ಹಿಂದಿನ ಕಥೆ ಏನು? ಎಂಬ ಪ್ರಶ್ನೆಗಳು ಅವರ ಕುತೂಹಲವನ್ನು ಕೆರಳಿಸುತ್ತವೆ. ಇಂದಿನ ದಿನಗಳಲ್ಲಿ ಯುವ ಸಮೂಹ ಅತಿಯಾದ ಸ್ಪರ್ಧೆ, ಒತ್ತಡದ ಜೀವನಶೈಲಿಯಿಂದಾಗಿ ಖಿನ್ನತೆ ಮತ್ತು ಆತಂಕಕ್ಕೆ ಒಳಗಾಗುತ್ತಿರುವ ಸಂದರ್ಭ ದಲ್ಲಿ, ನಾಣ್ಯ, ನೋಟು ಅಥವಾ ಅಂಚೆ ಚೀಟಿ ಸಂಗ್ರಹದಂತಹ ಹವ್ಯಾಸಗಳು ಮಾನಸಿಕ ನೆಮ್ಮದಿ ನೀಡುವ ಶಕ್ತಿಯನ್ನೂ ಹೊಂದಿವೆ.
ಮೊಬೈಲ್, ರೀಲ್ಸ್ ಮತ್ತು ವೇಗದ ಡಿಜಿಟಲ್ ಜಗತ್ತಿನಲ್ಲಿ ಮುಳುಗಿರುವ ಇಂದಿನ ಪೀಳಿಗೆಗೆ ಇತಿಹಾಸದ ಅರಿವು ನಿಧಾನವಾಗಿ ಕುಂಠಿತವಾಗುತ್ತಿರುವುದು ಕಟು ಸತ್ಯ. ಆದರೆ ನಾಣ್ಯ, ನೋಟುಗಳು ಮತ್ತು ಅಂಚೆ ಚೀಟಿಗಳನ್ನು ನೇರವಾಗಿ ನೋಡಿದಾಗ, ಸ್ಪರ್ಶಿಸಿದಾಗ, ಅವುಗಳ ಹಿಂದಿನ ಕಥೆಗಳನ್ನು ಕೇಳಿದಾಗ ಇತಿಹಾಸ ಜೀವಂತವಾಗುತ್ತದೆ. ಈ ಪ್ರದರ್ಶನವು ಯುವ ಸಮೂಹಕ್ಕೆ ನಾವು ಎಲ್ಲಿಂದ ಬಂದೆವು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಕುತೂಹಲವನ್ನು ಮೂಡಿಸುವ ಪ್ರೇರಣೆಯಾಗಬಲ್ಲದು.
ಟ್ರಸ್ಟ್‌ನ ಅಧ್ಯಕ್ಷ ದೇವದಾಸ್ ಎನ್. ನಾಯಕ್, ಪ್ರಧಾನ ಕಾರ್ಯದರ್ಶಿ ಎಸ್. ಚಂದ್ರಕಾಂತ್ ಹಾಗೂ ವಿನೋದ್ ಕುಮಾರ್ ಜೈನ್, ಸುಬ್ರಾಯ್ ಶೇಟ್ ಮತ್ತು ಅವರ ತಂಡ ಕೈಗೊಂಡಿರುವ ಈ ಪ್ರಯತ್ನ ನಾಣ್ಯ ಮತ್ತು ಅಂಚೆ ಚೀಟಿ ಪರಂಪರೆ ಯನ್ನು ಸಂರಕ್ಷಿಸಿ, ಮುಂದಿನ ತಲೆ ಮಾರಿಗೆ ವರ್ಗಾಯಿಸುವ ಮಹತ್ವದ ಹೆಜ್ಜೆಯಾಗಿದೆ. ಇಂತಹ ಪ್ರದರ್ಶನಗಳು ಹೆಚ್ಚಾದಷ್ಟು, ಇತಿಹಾಸ ಕೇವಲ ಪಠ್ಯ ಪುಸ್ತಕಗಳಲ್ಲದೇ ಜನಸಾಮಾನ್ಯರ ಬದುಕಿನ ಭಾಗವಾಗುತ್ತದೆ.
ಒಟ್ಟಿನಲ್ಲಿ ನಾಣ್ಯ ಮತ್ತು ಅಂಚೆ ಚೀಟಿ ಪ್ರದರ್ಶನವು ಕೇವಲ ಹವ್ಯಾಸ ವಲ್ಲ ಅದು ಒಂದು ಸಂಸ್ಕೃತಿ, ಒಂದು ಸಂಶೋಧನೆ, ಒಂದು ಇತಿಹಾಸದ ಮೆಲುಕು. ಯುವಕರು, ವಿದ್ಯಾರ್ಥಿ ಗಳು, ಶಿಕ್ಷಕರು, ಸಂಶೋಧಕರು ಹಾಗೂ ಇತಿಹಾಸಾಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡರೆ, ಇತಿಹಾಸವನ್ನು ಅರಿಯುವ ಹೊಸ ದೃಷ್ಟಿಕೋನವೇ ರೂಪುಗೊಳ್ಳುತ್ತದೆ.