ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಏರ್‌ಪೋರ್ಟ್ ನಿರ್ವಹಣೆ ರಾಜ್ಯ ಸರ್ಕಾರಕ್ಕೆ ವಹಿಸಿ ದೊಡ್ಡ ತಪ್ಪು ಮಾಡಿದೆ: ಸಂಸದ ಬಿವೈಆರ್

Share Below Link

ಶಿವಮೊಗ್ಗ : ಕಾಂಗ್ರೆಸ್ ಸರ್ಕಾರದಿಂದ ಒಳ ಮೀಸಲಾತಿ ವರ್ಗೀಕರಣದ ವಿಚಾರದಲ್ಲಿ ದುರ್ಬಲ ವರ್ಗ ಗಗಳಿಗೆ ಅನ್ಯಾಯವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು. ಅವರು ಇಂದು ಡಿಸಿ ಕಚೇರಿ ಆವರಣದಲ್ಲಿ ಶಿವಮೊಗ್ಗ ಜಿ ಬಂಜರ ಸಂಘ, ಕರ್ನಾಟಕ ಬಂಜರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಒಳ ಮೀಸಲಾತಿ ವರ್ಗೀಕರಣ ವಿರೋಧಿಸಿ ನಿನ್ನೆ ಯಿಂದ ಆರಂಭವಾದ ಅನಿರ್ದಿಷ್ಟಾ ವಧಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ವಾಂತಂತ್ರ್ಯ ಬಂದ ಮೇಲೆ ಹಾವನೂರು ವರದಿ, ಸದಾಶಿವ ವರದಿ, ಮಾಧುಸ್ವಾಮಿ ಸಮಿತಿಯ ಶಿಫಾರಸು, ಕಾಂತರಾಜ್ ವರದಿ, ನಾಗಮೋಹನ್ ದಾಸ್ ವರದಿ ಎಲ್ಲವನ್ನೂ ಸರ್ಕಾರಗಳು ಇನ್ನೂ ಅನುಷ್ಠಾನಕ್ಕೆ ತಂದಿಲ್ಲ. ೧೫೦ ಕೋಟಿ ರೂ. ತೆರಿಗೆ ಹಣವನ್ನು ಖರ್ಚು ಮಾಡಿ ಕಾಂತರಾಜ್ ವರದಿ ನೀಡಿ ದರೂ ಅದನ್ನು ಕೂಡ ಜರಿಗೊಳಿ ಸಿಲ್ಲ. ಈಗ ನಾಗಮೋಹನ್ ದಾಸ್ ವರದಿಯನ್ನು ಕೂಡ ಯಥಾವತ್ ಜರಿಗೊಳಿಸದೇ ಒಳಮೀಸಲಾತಿ ಯನ್ನು ೪ ಭಾಗಗಳಾಗಿ ವಿಂಗಡಿಸಿ ನೀಡಿದ ವರದಿಯನ್ನು ೩ಕ್ಕೆ ಸೀಮಿತ ಗೊಳಿಸಿ ಬಂಜರರಿಗೆ ಬಿಜೆಪಿ ಸರ್ಕಾರ ನೀಡಿದ ಶೇ. ೪.೫ರಷ್ಟು ಮೀಸಲಾತಿಯನ್ನು ೫.೫ರಷ್ಟು ಹೆಚ್ಚಿಸಿ ಅವರೊಂದಿಗೆ ಈಗ ೬೩ ಜತಿಗಳನ್ನು ಸೇರಿಸಿ ಅಲೆಮಾರಿ ಜತಿಗೆ ಮೀಸಲಿಟ್ಟ ಶೇ. ೧ ರಷ್ಟು ರದ್ದು ಮಾಡಿ ಅದನ್ನೂ ಇವ ರೊಂದಿಗೆ ಸೇರಿಸಿ ಎಲ್ಲ ಹಿಂದುಳಿದ ಮತ್ತು ದಲಿತರಿಗೆ ಈ ಸರ್ಕಾರ ಅನ್ಯಾಯ ಮಾಡಿದೆ ಎಂದು ದೂರಿದರು.


ವ್ಯಾಪಕ ಪ್ರತಿಭಟನೆ ಬಳಿಕ ಈಗ ಮತ್ತೆ ೪೫೦ ಕೋಟಿ ರೂ. ವೆಚ್ಚದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಜಾತಿಗಣತಿಗೆ ಹೊರಟಿzರೆ. ಕೇಂದ್ರ ಸರ್ಕಾರ ಕೂಡ ಮುಂದಿನ ತಿಂಗಳಿಂದ ಜನಗಣತಿಗೆ ಆದೇಶ ನೀಡಿದೆ. ವಿಪರ್ಯಾಸ ಎಂದರೆ ಎ ಒಂದು ಕಡೆ ಕಾಣದ ಕೈಗಳು ಲಂಬಾಣಿ ಜನಾಂಗವನ್ನು ಒಡೆಯುವ ಷಡ್ಯಂತ್ರ ಮಾಡುತ್ತಿವೆ. ಲಂಬಾಣಿ ಕ್ರಿಶ್ಚಿಯನ್, ಭೋವಿ ಕ್ರಿಶ್ಚಿಯನ್ ಎಂದು ಹಲವಾರು ಉಪಪಂಗಡಗಳಿಗೆ ಕ್ರಿಶ್ಚಿಯನ್ ಜತಿಯನ್ನು ಲಗತ್ತಿಸಿ ಹಿಂದು ಗಳನ್ನು ಒಡೆಯುವ ಕುತಂತ್ರ ಮಾಡುತ್ತಿದೆ. ಇದರಿಂದ ಒಟ್ಟಾರೆ ಯಾಗಿ ಆ ಜತಿಯ ಜನಸಂಖ್ಯೆ ಕಡಿಮೆ ನಮೂದು ಆಗುವುದರಿಂದ ಅವರಿಗೆ ಸಿಗಬೇಕಾದ ಶೇಕಡವಾರು ಮೀಸಲಾತಿಯಲ್ಲಿ ಕಡಿಮೆಯಾಗಿ ವಂಚಿತರಾಗುತ್ತಾರೆ ಎಂದರು.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿzಗ ಲಂಬಾಣಿ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪಿಸಿ ನೂರಾರು ಕೋಟಿ ರೂ. ಅನುದಾನ ನೀಡಿ ಸರ್ಕಾರದ ಹಲವು ಪ್ರಮುಖ ಹುzಗಳನ್ನು ಕೂಡ ಈ ಸಮಾಜಕ್ಕೆ ನೀಡಿದ್ದರು. ಸೇವಾಲಾಲ್ ಜನ್ಮಸ್ಥಳ ಅಭಿವೃದ್ಧಿ ಪಡಿಸಿದ್ದರು. ಈಗ ಆ ಜಗಕ್ಕೆ ರೈಲು ಕೂಡ ನಿಲುಗಡೆಯಾಗಿ ದೊಡ್ಡ ಪ್ರವಾಸಿತಾಣವಾಗಲಿದೆ. ಮಹಾರಾಷ್ಟ್ರದ ಸೇವಾಲಾಲ್‌ಗೆ ಸಂಬಂಧಿಸಿದ ಬಾಯಗಢ ಅಭಿವೃದ್ಧಿಗೆ ೪೫೦ ಕೋಟಿ ರೂ. ಗಳನ್ನು ಮೋದಿ ಸರ್ಕಾರ ನೀಡಿದೆ. ಸದಾಕಾಲ ಬಿ.ಎಸ್.ವೈ. ಕುಟುಂಬ ನಿಮ್ಮ ಜೊತೆಗಿದೆ. ನಿಮಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತೇವೆ ಎಂದರು.


ರಾಜ್ಯದ ನ್ಯಾಯಯುತ ಪಾಲನ್ನು ಕೇಂದ್ರ ಸರ್ಕಾರ ನೀಡು ತ್ತಿಲ್ಲ, ಸಂಸದರು ಬಾಯಿ ಬಿಡುತ್ತಿಲ್ಲ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ರಾಘವೇಂದ್ರ, ಕೇಂದ್ರದಿಂದ ನೀಡಿದ ಹಲವು ಅನುದಾನಗಳು ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡದೇ ಇರುವುದ ರಿಂದ ವಾಪಸ್ ಹೋಗಿದೆ. ಸರಿಯಾದ ತಾಂತ್ರಿಕ ಯೋಜನೆ ರೂಪುರೇಷೆಗಳನ್ನು ರಾಜ್ಯ ಸರ್ಕಾರ ಸಮಯಕ್ಕೆ ಸರಿಯಾಗಿ ಕೇಂದ್ರಕ್ಕೆ ಒದಗಿಸದೇ ಇರುವುದರಿಂದ ಹಣ ಬಿಡುಗಡೆಯಲ್ಲಿ ವ್ಯತ್ಯಯವಾಗಿದೆ. ಇದಕ್ಕೆ ಪೂರಕ ದಾಖಲೆಗಳನ್ನು ನಾನು ಬಿಡುಗಡೆ ಮಾಡಲು ಸಿದ್ಧ. ಮತ್ತು ಈ ಬಗ್ಗೆ ಇದೇ ಡಿಸಿಎಂ ಜೊತೆಗೆ ದೆಹಲಿ ಕರ್ನಾಟಕ ಭವನದಲ್ಲಿ ಹಲವು ಸಭೆಗಳನ್ನು ನಡೆಸಲಾಗಿದೆ. ರಾಜ್ಯ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣ ದಲ್ಲಿ ಇತ್ತೀಚೆಗೆ ನಿರಂತರವಾಗಿ ವಿಮಾನಗಳು ರzಗುತ್ತಿರುವುದರಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ಇದಕ್ಕೂ ಕೂಡ ವಿಮಾನ ನಿಲ್ದಾಣದ ಮಾಲೀಕತ್ವ ರಾಜ್ಯ ಸರ್ಕಾರದ ವಶದಲ್ಲಿರುವುದೇ ಕಾರಣವಾಗಿ ನೈಟ್ ಲ್ಯಾಂಡಿಂಗ್ ಸಲಕರಣೆಗಳು ಬಂದು ಎರಡು ತಿಂಗಳಾಗಿದ್ದರೂ ಕೇವಲ ೨ ಕೋಟಿ ರೂ. ಖರ್ಚು ಮಾಡಲು ರಾಜ್ಯ ಸರ್ಕಾರ ಮುಂದಾಗದೇ ಇರುವುದು ಇದಕ್ಕೆ ಕಾರಣ. ನಾವು ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯದ ಸುಪರ್ದಿಗೆ ತೆಗೆದುಕೊಂಡಿz ತಪ್ಪು ಹೆಜ್ಜೆ ಇಟ್ಟ ಹಾಗೆ ಆಗಿದೆ ಎಂದರಲ್ಲದೇ, ಮದ್ದೂರು ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ತುಷ್ಠೀಕರಣ ನೀತಿ ಮತ್ತೊಮ್ಮೆ ಜಗಜಹೀರಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ. ಅಶೋಕ್ ನಾಯ್ಕ್, ಬಂಜರ ಸಮುದಾಯದ ಗುರು ಗಳಾದ ಸೈನಾ ಭಗತ್ ಮಹಾ ರಾಜ್, ಕೆಜೆ. ನಾಗೇಶ್ ನಾಯ್ಕ್, ಬಸವರಾಜ್ ನಾಯ್ಕ್, ನಾನ್ಯಾ ನಾಯ್ಕ್, ಜಗದೀಶ್ ನಾಯ್ಕ್, ನಾಗರಾಜ್ ನಾಯ್ಕ್, ಗಂಗಾ ನಾಯ್ಕ್, ರಮೇಶ್ ನಾಯ್ಕ್, ಶಿವಾನಾಯ್ಕ್, ಗಿರೀಶ್ ನಾಯ್ಕ್, ಆನಂದ್ ನಾಯ್ಕ್, ಭದ್ರಾವತಿ ಹಾಗೂ ಶಿವಮೊಗ್ಗ ತಾಲೂಕಿನ ೧೦ಕ್ಕೂ ಅಧಿಕ ತಾಂಡಾಗಳ ಪ್ರಮುಖರು ಇಂದಿನ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.