ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರಲಿ…
ಹೊನ್ನಾಳಿ: ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕ ವಾಗಿರಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದರು.
ತಮ್ಮ ನಿವಾಸಕ್ಕೆ ಆಗಮಿಸಿದ ತಾಲೂಕಿನ ಮಲೆಕುಂಬಳೂರು ಗ್ರಾಪಂ ನೂತನ ಅಧ್ಯಕ್ಷ ಕೆ.ಎಂ. ಕುಮಾರ್ ಅವರನ್ನು ಗೌರವಿಸಿ ಅವರು ಮಾತನಾಡಿದರು.
ಸರಕಾರ ವಸತಿ ಯೋಜನೆ ಅನುಷ್ಠಾನಗೊಳಿಸಲು ಶ್ರಮಿಸುತ್ತಿದೆ. ಆದರೆ, ಗ್ರಾಪಂಗಳ ಸಹಕಾರದಿಂದ ಮಾತ್ರ ಯಶಸ್ವಿ ಅನುಷ್ಠಾನ ಸಾಧ್ಯ. ಹಾಗಾಗಿ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು-ಅಧಿಕಾರಿಗಳು ಸಾಮರಸ್ಯ ದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಈಶ್ವರಪ್ಪ ರಾಜೀನಾಮೆ:
ತಾಲೂಕಿನ ಮಲೆಕುಂಬಳೂರು ಗ್ರಾಪಂನ ಈ ಹಿಂದಿನ ಅಧ್ಯಕ್ಷ ಎಸ್.ಆರ್. ಈಶ್ವರಪ್ಪ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎ.ಎಸ್. ಅಣ್ಣಪ್ಪ ಮತ್ತು ಕೆ.ಎಂ. ಕುಮಾರ್ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಕೆ.ಎಂ. ಕುಮಾರ್ ಜಯಗಳಿಸಿದ ಮಾಹಿತಿಯನ್ನು ಚುನಾವಣಾಧಿಕಾರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಆರ್. ರುದ್ರಪ್ಪ ಪತ್ರಿಕೆಗೆ ನೀಡಿದರು.
ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಸ್.ಎಚ್. ವಿಕಾಸ್, ಮುಖಂಡರಾದ ಅರಕೆರೆ ಎ.ಎಂ. ನಾಗರಾಜ್ ಮತ್ತು ಮಲೆಕುಂಬಳೂರು, ನೆಲಹೊನ್ನೆ, ಕುಂದೂರು ಇತರ ಗ್ರಾಮಗಳ ಪ್ರಮುಖರು ಇದ್ದರು.