ಜಿಲ್ಲಾ ಸುದ್ದಿತಾಜಾ ಸುದ್ದಿ

ಕಾನೂನು ಗೌರವಿಸುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಿ: ನ್ಯಾ|ದೇವದಾಸ್

Share Below Link

ಹೊನ್ನಾಳಿ: ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಸಹ ಕಾನೂನಿಗೆ ಗೌರವಿಸುವ ಮೂಲಕ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬಹುದು ಎಂದು ಹೊನ್ನಾಳಿಯ ಜೆ ಎಂ ಎಪ್ ಸಿ ಪ್ರದಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ದೇವದಾಸ್ ಎಚ್ ಅವರು ಹೇಳಿದರು


ಹೊನ್ನಾಳಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಕುರಿತು ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆ ಸಂಸ್ಕೃತಿ ಯಿಂದ ವಂಚನೆಗೊಳಗಾಗುತ್ತಿ zರೆ ಆದುದರಿಂದಲೇ ಸಮಾಜ ದಲ್ಲಿ ತಪ್ಪು ಘಟನೆಗಳು ನಡೆಯು ತ್ತಿದ್ದು ಹೆಚ್ಚಾಗಿ ಯುವಕರು ಅಂತಹ ತಪ್ಪು ಘಟನೆಗಳಲ್ಲಿ ಭಾಗವಹಿಸು ತ್ತಿರುವುದು ವಿಷಾದಕರ ಸಂಗತಿ. ಆ ರೀತಿ ಆಗಲು ಆ ವಿದ್ಯಾರ್ಥಿಗಳಿಗೆ ಕಾನೂನಿನ ಕೊರತೆ ಇರುವುದೇ ಪ್ರಮುಖವಾಗಿರುತ್ತದೆ. ಆದು ದರಿಂದ ಯುವ ವಿದ್ಯಾರ್ಥಿ ಗಳಿಗೆ ಕಾನೂನು ಸೇವೆಗಳ ಬಗ್ಗೆ ಮಾಹಿತಿಯನ್ನು ತಿಳಿಸುವ ಈ ಕಾರ್ಯಗಾರವನ್ನು ಉದ್ಘಾಟಿಸಲು ನನಗೆ ತುಂಬಾ ಹೆಮ್ಮೆ ಎನಿಸುತ್ತದೆ ಎಂದರು.


ಕಾರ್ಯಗಾರ ಕುರಿತು ಮಾತನಾಡಿದ ವಕೀಲ ಕರುಣಾಕರ ಅವರು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿಯೇ ಕಾನೂನುಗಳ ಬಗ್ಗೆ ಮಾಹಿತಿಯನ್ನು ಪಡೆದು ಕೊಂಡಲ್ಲಿ ಮುಂದಿನ ಅವರ ಜೀವನದಲ್ಲಿ ಸಂತೋಷದಿಂದ ಬಾಳುತ್ತಾರೆ ಹಾಗೂ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿ ರೂಪು ಗೊಳ್ಳುವುದರಲ್ಲಿ ಯಾವುದೇ ಸಂದೇಹ ಇರುವುದಿಲ್ಲಎಂದರು.
ಉಪನ್ಯಾಸಕ ಮಂಜುನಾಥ್ ಮಾತನಾಡಿ, ವಿದ್ಯಾವಂತನೆ ಆಗಲಿ ಅವಿದ್ಯಾವಂತನೆ ಆಗಲಿ ಕಾನೂನು ಗಳ ಬಗ್ಗೆ ತಿಳಿದುಕೊಂಡು ಜೀವನ ದಲ್ಲಿ ಯಾವುದೇ ರೀತಿಯ ತಪ್ಪು ಗಳು ನಡೆಯದ ರೀತಿಯಲ್ಲಿ ನಡೆ ದುಕೊಂಡರೆ ತಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು ಈ ದೃಷ್ಟಿ ಯಿಂದಲೇ ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ತಾಲೂಕು ಶಾಲಾ- ಕಾಲೇಜು ಗಳಲ್ಲಿ ಕಾನೂನು ಅರಿವು ಕಾರ್ಯ ಕ್ರಮ ವನ್ನು ಏರ್ಪಡಿಸುವ ಮೂಲ ಕ ಮನುಷ್ಯ ತಪ್ಪು ನಿರ್ಣಯ ತೆಗೆ ದು ಕೊಳ್ಳುವುದರ ಬದಲು ಉತ್ತ ಮ ವ್ಯಕ್ತಿತ್ವವನ್ನು ಬೆಳೆಸಿ ಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ| ಪ್ರವೀಣ್ ದೊಡ್ಡಗೌಡ್ರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಭರತ್ ಭೀಮಯ್ಯ, ವಕೀಲರ ಸಂಘದ ಅಧ್ಯಕ್ಷ ಕೆಪಿಜಯಪ್ಪ, ಪ್ರಮುಖ ರಾದ ಬಿ.ಎಂ ಪುರುಷೋತ್ತಮ ಜಿಎಂ ತಿಮ್ಮಪ್ಪ ಪಟೇಲ್ ಭಾಗವ ಹಿಸಿದ್ದರು.
ಅಂತಿಮ ಬಿಎ ವಿದ್ಯಾರ್ಥಿನಿ ಕುಮಾರಿ ಸ್ವಾತಿ ಪ್ರಾರ್ಥಿಸಿದರು. ಉಪನ್ಯಾಸಕರಾದ ಕುಮಾರಿ ಸೌಮ್ಯ ಸ್ವಾಗತಿಸಿ, ಕುಮಾರಸ್ವಾಮಿ ವಂದಿಸಿ ದರು. ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.