ಯುವನಿಧಿ ಯೋಜನೆ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಿ …
ಶಿವಮೊಗ್ಗ : ಸರ್ಕಾರದ ಸೌಲಭ್ಯ ಪಡೆದುಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು ಮತ್ತು ಕರ್ತವ್ಯವಾಗಿದೆ, ಸರ್ಕಾರ ನೀಡಿರುವ ಯುವನಿಧಿ ಯೋಜನೆ ಯಂತಹ ಸೌಲಭ್ಯ ಪಡೆದು ಕೊಂಡು ಸದ್ಬಳಕೆಮಾಡಿಕೊಳ್ಳಿ ಎಂದು ಜಿ ಗ್ಯಾರಂಟಿ ಯೊಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಧ್ಯಕ್ಷ ಸಿ. ಎಸ್. ಚಂದ್ರಭೂಪಾಲ್ ಹೇಳಿದರು.
ಕೈಗಾರಿಕ ತರಬೇತಿ ಇಲಾಖೆ ಮತ್ತು ಉದ್ಯೋಗ ಇಲಾಖೆ ಜಿ ಉದ್ಯೋಗ ವಿನಿಮಯ ಕೇಂದ್ರ ಸಹ್ಯಾದ್ರಿ ಪ್ರಥಮ ದರ್ಜೆ ವಿeನ ಕಾಲೇಜು ಮತ್ತು ಜಿ ಗ್ಯಾರಂಟಿ ಪ್ರಾಧಿಕಾರದ ಆಶ್ರಯದಲ್ಲಿ ಸಹ್ಯಾದ್ರಿ ಪ್ರಥಮ ದರ್ಜೆ ವಿeನ ಕಾಲೇಜಿನಲ್ಲಿ ಏರ್ಪಡಿಸಿದ್ದ ಯುವನಿಧಿ ಯೋಜನೆಯ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಪೊಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.

ಇಚ್ಚಾಶಕ್ತಿಯಿಂದ ವಿದ್ಯಾರ್ಥಿ ಗಳು ವಿದ್ಯಾಭ್ಯಾಸ ಮತ್ತು ಉದ್ಯೋಗದ ಮೇಲೆ ಗಮನಹರಿಸಿ ಯೋಜನೆ ಸದುಪಯೋಗ ಪಡೆದು ಕೊಂಡು ಪೋಷಕರ ಆಸೆಗಳನ್ನು ಇಡೇರಿಸಬೇಕು. ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯುವಾಗ ವಿದ್ಯಾರ್ಥಿ ಗಳಿಗೆ ಬರುವ ಯುವನಿಧಿ ಹಣಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ವಾದ್ದರಿಂದ ಆತಂಕ ಪಡಬೇಕಾಗದ ಅವಶ್ಯಕತೆ ಇ ಎಂದರು.
ಸರ್ಕಾರವು ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗ ಹುಡುಕಲು ಸಹಕಾರಿಯಾಗಲಿ ಎಂಬ ಉzಶದಿಂದ ೨ ವರ್ಷ ಅವಧಿವರೆಗೆ ಯುವನಿಧಿ ಯೋಜನೆಯಡಿ ಎ ವಿದ್ಯಾರ್ಥಿಗಳು ಪದವಿ ಮುಗಿದ ತಕ್ಷಣ ಗ್ರಾಮ್ ಒನ್, ಕರ್ನಾಟಕ ಒನ್, ಮೂಲಕ ಅರ್ಜಿ ಸಲ್ಲಿಸಿದ ೬ ತಿಂಗಳ ನಂತರ ಪ್ರತಿ ತಿಂಗಳು ರೂ. ೩೦೦೦ ಹಣವನ್ನು ಯಾವುದೇ ಮಧ್ಯವರ್ತಿ ಇಲ್ಲದೇ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ ಎಂದರು.
ಜಿ ಕೌಶಲ್ಯಾಭಿವೃದ್ದಿ ಅಧಿಕಾರಿ ಸುರೇಶ ಮಾತನಾಡಿ, ವಿದ್ಯಾರ್ಥಿಗಳು ತಮ್ಮದೇ ಆದಂತ ಕೌಶಲ್ಯ ಬೆಳೆಸಿಕೊಂಡು ಉದ್ಯೋಗ ವನ್ನು ಪಡೆದುಕೊಳ್ಳಿ, ಕೌಶಲ್ಯಾಭಿವೃದ್ದಿಯಲ್ಲಿ ಯುವನಿಧಿಯ ಎ ಫಲಾನುಭವಿಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದ್ದು, ಅದರ ಸದ್ಬಳಕೆ ಪಡೆದುಕೊಳ್ಳಿ. ಕೌಶಲ್ಯವು ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಮುಖ್ಯ ವಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ವೆಬ್ ಡಿಸೈನಿಂಗ್, ಡಾಟಾ ಎಂಟ್ರಿ ಇವುಗಳಿಗೆ ತುಂಬಾ ಬೇಡಿಕೆಯಿದೆ. ಆದ್ದರಿಂದ ವಿದ್ಯಾರ್ಥಿಗಳು ಕಂಪ್ಯೂಟರ್ eನ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.
ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಧು ಹೆಚ್‌ಎಂ, ಉದ್ಯೋಗ ಇಲಾಖೆಯ ಉದ್ಯೋಗ ಅಧಿಕಾರಿ ಮಂಜುನಾಥ, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರಾಜೇಶ್ವರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

