ಅನುದಾನ ಸಕಾಲದಲ್ಲಿ ಸದ್ಬಳಕೆ ಮಾಡಿಕೊಳ್ಳಿ : ಬಿ.ಬಿ.ಕಾವೇರಿ
ಶಿವಮೊಗ್ಗ (ಹೊಸನಾವಿಕ):ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಅಜೀಂ ಪ್ರೇಮ್ಜಿ ಫೌಂಡೇಶನ್ ವತಿಯಿಂದ ಮಕ್ಕಳ ಪೌಷ್ಟಿಕ ಆಹಾರ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಒದಗಿಸಲಾಗಿ ರುವ ೧೫೦೦ಕೋ. ಮೊತ್ತವನ್ನು ನಿಗಧಿಪಡಿಸಿದ ಉzಶಕ್ಕಾ ಗಿಯೇ ಬಳಸಿಕೊಳ್ಳುವಂತೆ ಮಾನ್ಯ ಮುಖ್ಯಮಂತ್ರಿಯವರ ಕಾರ್ಯದರ್ಶಿ, ಜಿ ಉಸ್ತು ವಾರಿ ಕಾರ್ಯದರ್ಶಿಗಳು ಹಾಗೂ ಜಿ.ಪಂ. ಆಡಳಿತಾಧಿಕಾರಿಗಳಾದ ಬಿ.ವಿ.ಕಾವೇರಿ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
ಅವರು ಇಂದು ಜಿ. ಪಂ. ಅಬ್ದುಲ್ ನಜೀರ್ ಸಾಭಾಂಗಣ ದಲ್ಲಿ ಏರ್ಪಡಿಸಲಾಗಿದ್ದ ಪ್ರಸಕ್ತ ಸಾಲಿನ ಪ್ರಗತಿ ಪರಿಶೀಲನಾ ಸಭೆ ಯ ಅಧ್ಯಕ್ಷತೆ ವಹಿಸಿ ಮಾತನಾಡು ತ್ತಿದ್ದರು. ಜಿಯ ಸರ್ಕಾರಿ ಶಾಲೆ ಗಳಲ್ಲಿ ಖಾಲಿ ಇರುವ ಶಿಕ್ಷಕರ ಕೊರತೆಯನ್ನು ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿರುವ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಪ್ರಸಕ್ತ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ೩೦ ಕೊಠಡಿ ಗಳ ನಿರ್ಮಾಣಕ್ಕೆ ೪೦೮ಕೋಟಿ., ವಿವೇಕ ಶಾಲಾ ಬಾಕಿ ಅನುದಾನ ದಲ್ಲಿ ೩೦ಕೊಠಡಿಗಳ ನಿರ್ಮಾಣಕ್ಕೆ ೪೪೦ಕೋ. ೩೪೭ಕೊಠಡಿಗಳ ದುರಸ್ತಿ ಗೆ ೪೭೪ಕೋ. ಹಾಗೂ ಪರಿಶಿಷ್ಟ ಜತಿ/ವರ್ಗಗಳ ಯೋಜನೆಯಡಿ ಯಲ್ಲಿ ಕೊಠಡಿಗಳ ದುರಸ್ತಿಗೆ ೧೦ಕೋ. ರೂ.ಮಂಜೂರಾಗಿದ್ದು, ಎ ಕಾಮಗಾರಿಗಳನ್ನು ಕಾಲಮಿತಿ ಯಲ್ಲಿ ಪೂರ್ಣಗೊಳಿಸಲಾಗಿದೆ ಎಂದರು.
ಜಿಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಈವರೆಗೆ ಆಗಿರುವ ಮಳೆ ಅಗತ್ಯಕ್ಕಿಂತ ಹೆಚ್ಚಾಗಿದೆ. ಆದರೆ, ಆಗಸ್ಟ್ಮಾಹೆಯಲ್ಲಿ -೨೦ ರಷ್ಟು ಮತ್ತು ಸೆಪ್ಟಂಬರ್ಮಾಹೆಯಲ್ಲಿ -೩೨ರಷ್ಟು ಮಳೆಯ ಕೊರತೆ ಇzಗಿಯೂ ಬಿತ್ತನೆ ಪ್ರಮಾಣ, ಬೀಜ-ರಸಗೊಬ್ಬ ರದ ದಾಸ್ತಾನುಗಳ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಜಿಯಲ್ಲಿ ಮಳೆಯಿಂದ ಹಾನಿಗೊಳಗಾಗಿ ರುವ ಹಾಗೂ ಕೊಳೆರೋಗಕ್ಕೆ ತುತ್ತಾಗಿರುವ ಅಡಿಕೆ ಬೆಳೆಯ ಮಾಹಿ ತಿ ಪಡೆದು, ಬೆಳೆ ನಷ್ಟದ ಪ್ರಮಾಣ ವನ್ನು ತ್ವರಿತವಾಗಿ ಸಂಗ್ರಹಿಸಿ, ಸರ್ಕಾರಕ್ಕೆ ಸಲ್ಲಿಸುವಂತೆ ಅವರು ಸೂಚಿಸಿದರು.
ಜಿಯ ಸೊರಬ, ಸಾಗರ, ಶಿಕಾರಿಪುರ ತಾಲೂಕಿನಲ್ಲಿ ಜೇನು ಕೃಷಿಗೆ ವಿಫುಲ ಅವಕಾಶಗಳಿದ್ದು, ಜೇನುಕೃಷಿಯ ಉತ್ತೇಜನಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊ ಳ್ಳುವಂತೆ ತೋಟಗಾರಿಕೆ ಇಲಾಖೆ ಯ ಉಪನಿರ್ದೇಶಕರಿಗೆ ಸೂಚಿಸಿ ದರು. ಈ ಸಂದರ್ಭದಲ್ಲಿ ತೋಟ ಗಾರಿಕೆ ಇಲಾಖೆಯ ಅಧಿಕಾರಿಗಳು ಮಾತನಾಡಿ, ಜೇನುಪೆಟ್ಟಿಗೆಗೆ ಭಾರೀ ಪ್ರಮಾಣದ ಬೇಡಿಕೆ ಇದ್ದು, ಅಧ್ಯತೆಯ ಮೇಲೆ ಒಂದೊಂದು ಜೇನುಪೆಟ್ಟಿಗೆಯನ್ನು ವಿತರಿಸಲಾ ಗುತ್ತಿದೆ. ಹೆಚ್ಚುವರಿ ಜೇನುಪೆಟ್ಟಿಗೆ ಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕ್ರಿಯಾ ಯೋಜನೆ ಅನುಮೋದನೆಯ ನಂತರ ಅವುಗಳನ್ನು ಪೂರೈಸಲು ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಡಿಸಿ ಗುರುದತ್ತ ಹೆಗಡೆ ಅವರು ಮಾತ ನಾಡಿ, ಶಿವಮೊಗ್ಗದಲ್ಲಿ ಜಿ ಮಟ್ಟದ ಪ್ರತ್ಯೇಕ ಆಸ್ಪತ್ರೆ ಇರುವು ದಿಲ್ಲ. ಇರುವ ಮೆಗ್ಗಾನ್ಆಸ್ಪತ್ರೆಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಿ, ಮೇಲ್ದರ್ಜೆಗೇರಿಸಿ, ಸೌಲಭ್ಯಗಳನ್ನು ಒದಗಿಸಲು ಉzಶಿಸುವ ಸಂಬಂಧ ಬೆಂಗಳೂರಿನಲ್ಲಿ ಈಗಾ ಗಲೇ ಜಿ ಉಸ್ತುವಾರಿ ಸಚಿವರು ಮತ್ತು ಆರೋಗ್ಯ ಇಲಾಖಾ ಸಚಿ ವರ ಉಪಸ್ಥಿತಿಯಲ್ಲಿ ಸಭೆಯನ್ನು ನಡೆಸಿ, ಚರ್ಚಿಸಲಾಗಿದೆ ಎಂದರು.
ಇತರೆ ಹಿಂದುಳಿದ ವರ್ಗಗಳ ಇಲಾಖೆಯ ವ್ಯಾಪ್ತಿಯಲ್ಲಿ ನಿರ್ವಹಿ ಸಲಾಗುತ್ತಿರುವ ವಸತಿ ನಿಲಯ ಗಳಲ್ಲಿ ದಾಖಲಾತಿ ಬಯಸಿ ಭಾರೀ ಪ್ರಮಾಣದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದು, ದಾಖಲಾತಿಗೆ ಒತ್ತಾ ಯಿಸುತ್ತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳು ವಂತೆ ಬಿ.ಸಿ.ಎಂ. ಇಲಾಖೆಯ ಜಿ ಅಧಿಕಾರಿ ಶೋಭಾ ಅವರು ಉಸ್ತು ವಾರಿ ಕಾರ್ಯದರ್ಶಿಗಳಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಜಿ .ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಪ್ರೊಬೇಷರಿ ಜಿಧಿಕಾರಿ ರಾಜೇಂದ್ರಬಾಬು ಸೇರಿದಂತೆ ವಿವಿಧ ಇಲಾಖೆಗಳ ಜಿ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

