ಜಿಲ್ಲಾ ಸುದ್ದಿತಾಜಾ ಸುದ್ದಿ

ಮಹಿವಾಳ ಸಂಘದಿಂದ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗಾಗಿ ಹೋರಾಟ…

Share Below Link

ಶಿವಮೊಗ್ಗ : ಮಡಿವಾಳ ಸಮಾಜ ವನ್ನು ಪರಿಶಿಷ್ಟ ಜತಿಗೆ ಸೇರ್ಪಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವ ಮತ್ತು ಹೋರಾಟಕ್ಕೆ ಅಣಿಗೊಳಿಸುವ ಮುಖ್ಯ ಉದ್ದೇಶ ವನ್ನಿಟ್ಟುಕೊಂಡು ಜಿಯಲ್ಲಿದ್ದ ಎರಡು ಸಂಘಗಳ ಮೈತ್ರಿಗೆ ಇತಿಶ್ರೀ ನೀಡಿ ಶಿವಮೊಗ್ಗ ಜಿ ಮಡಿವಾಳ ಸಂಘವನ್ನು ಉಳಿಸಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್ ಹೇಳಿದರು.


ಕಳೆದ ೧೨ ವರ್ಷಗಳಿಂದ ಜಿಯಲ್ಲಿ ಮಡಿವಾಳ ಸಂಘಗಳು ಎರಡು ಒಟ್ಟಿಗೆ ಕೆಲಸ ಮಾಡುತ್ತಿ ದ್ದವು. ಆದರೆ, ಅದರಲ್ಲಿನ ಒಂದು ಸಂಘ ಯಾವ ಹೋರಾಟವನ್ನು ಮಾಡದೆ, ಸಭೆಗಳನ್ನು ಕರೆಯದೆ ಅಸಹಕಾರ ನೀಡುತ್ತಿದ್ದರಿಂದ ಬೇಸತ್ತು ಎರಡು ಸಂಘದಿಂದ ಪ್ರತ್ಯೇಕಗೊಳಿಸಿ ಶಿವಮೊಗ್ಗ ಜಿ ಮಡಿವಾಳ ಸಂಘ (ರಿ.,)ನ್ನು ಉಳಿಸಿಕೊಂಡು ಆ ಮೂಲಕ ಸಮಾಜದ ಸಂಘಟನೆಗೆ ಆದ್ಯತೆ ನೀಡುತ್ತಿದ್ದೇವೆ. ಇದಕ್ಕಾಗಿ ನೂತನ ತಂಡವನ್ನು ರಚಿಸಲಾಗಿದೆ ಎಂದರು.
ಜಿ ಮಡಿವಾಳ ಸಮಾಜದ ಸರ್ವ ಸದಸ್ಯರ ಸಭೆ ೨೦೨೩ರಲ್ಲಿ ನಡೆದಾಗ ಅಲ್ಲಿ ಚುನಾವಣೆ ಹಣಕಾಸು, ಅವ್ಯವಹಾರ ಮತ್ತು ಸಂಘದ ಸದಸ್ಯರ ಹಣದ ದುರುಪಯೋಗ ಇವುಗಳ ವಿರುದ್ಧ ಧ್ವನಿಯೆತ್ತಿ ತನಿಖೆ ನಡೆಸುವಂತೆ ಪ್ರತಿಭಟನೆ ಕೂಡ ಮಾಡಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಮತ್ತು ಸಂಘ ನಿಷ್ಕ್ರೀ ಯವಾಗಿರುವುದನ್ನು ಗಮನಿಸಿ ಶಿವಮೊಗ್ಗ ಜಿ ಮಡಿವಾಳ ಸಂಘವನ್ನು ಪ್ರತ್ಯೇಕಗೊಳಿಸಲು ತೀರ್ಮಾನಿಸಲಾಗಿದೆ ಎಂದರು.
ಸಂಘದಲ್ಲಿ ಸುಮಾರು ೩ ಲಕ್ಷ ರೂ. ಠೇವಣಿ ಹಣ ಇತ್ತು. ಬೈಲದಂತೆ ಈ ಠೇವಣಿ ಹಣವನ್ನು ಖರ್ಚು ಮಾಡುವಂತಿರಲಿಲ್ಲ. ಅದರಿಂದ ಬರುವ ಬಡ್ಡಿ ಮಾತ್ರ ಖರ್ಚು ಮಾಡಬೇಕಿತ್ತು. ಆದರೆ ಸಂಘದ ಅಧ್ಯಕ್ಷರಾದ ಸದಾಶಿವಪ್ಪ ಮತ್ತು ಕಾರ್ಯದರ್ಶಿಯವರು ಈ ಹಣವನ್ನು ಖರ್ಚು ಮಾಡಿzರೆ. ಇದಕ್ಕೆ ಲೆಕ್ಕವನ್ನು ಕೊಟ್ಟಿಲ್ಲ. ಹಣ ಎಲ್ಲಿಹೋಯಿತು ಎಂಬುವುದು ಗೊತ್ತಿಲ್ಲ. ಇದು ಸಂಪೂರ್ಣ ತನಿಖೆಯಾಗಬೇಕು. ಮತ್ತು ಶಿಸ್ತು ಕ್ರಮ ಕೈಗೊಳ್ಳಬೇಕು. ಈಗಾಗಲೇ ಸಹಕಾರದ ಉಪನಿರ್ದೇಶಕರಿಗೆ ಈ ಬಗ್ಗೆ ದೂರು ಕೂಡ ನೀಡಲಾಗಿದೆ ಎಂದರು.
ಮಡಿವಾಳ ಸಮಾಜದ ಮಾಜಿ ಅಧ್ಯಕ್ಷ ಎಂ.ವಿ.ಮಹೇಂದ್ರಸ್ವಾಮಿ ಮಾತನಾಡಿ, ಪ್ರತ್ಯೇಕಗೊಂಡ ನಮ್ಮ ಸಂಘವನ್ನು ಮುನ್ನಡೆಲು ಮಡಿ ವಾಳ ಸಮಾಜದ ಮಹಾಸ್ವಾಮಿ ಗಳಾದ ಬಸವಮಾಚಿದೇವ ಸ್ವಾಮೀಜಿಯವರು ಆಶೀರ್ವಾದ ನೀಡಿzರೆ. ಈಗ ಆ ಸಂಘದಲ್ಲಿ ಇರುವವರು ಅತ್ಯಂತ ಕಡಿಮೆ ಸದಸ್ಯರು, ಅವರು ಕೂಡ ನಮ್ಮ ಜೊತೆ ಬರುತ್ತಾರೆ. ಮತ್ತು ಅವರು ಸಮಾಜದ ಅಭಿವದ್ಧಿಗೆ ಏನೇ ಕೆಲಸ ಮಾಡಿದರೂ ನಾವು ಅದಕ್ಕೆ ಅಡ್ಡಿಪಡಿಸುವುದಿಲ್ಲ. ಬದಲು ಸಹಕಾರ ನೀಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ ಮಡಿವಾಳ ಸಂಘದ ನೂತನ ಮಹಾಪ್ರಧಾನ ಕಾರ್ಯದರ್ಶಿ ಎಂ.ಕೆ.ಪ್ರಮೋದ್, ಪದಾಧಿಕಾರಿಗಳಾದ ಬಾಲಾಜಿರಾವ್, ಜೆ.ಹಿರಣ್ಣಯ್ಯ, ಎನ್. ಮಂಜು ನಾಥ್, ಹೆಚ್.ಎಂ. ಮಂಜುನಾಥ್, ಟಿ.ಎಸ್.ಗುರುಮೂರ್ತಿ, ರವಿಕುಮಾರ್, ಮೈಲಾರಪ್ಪ, ರಾಕೇಶ್, ಎಂ. ನಾಗರಾಜ್, ರುದ್ರೇಶ್, ಮೋಹನ್, ಸುಮೀತ್ ಆನಂದ್, ರಾಜು ಮುಂತಾದವರು ಇದ್ದರು.