ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ: ಒಂದು ಅವಲೋಕನ
ವಿಶೇಷ ಲೇಖನ : ರಾಘವೇಂದ್ರ ಪಾಲನಕರ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ದೇಶದ ನಾಗರೀಕರು ಹಸಿವಿನ ಯಾತನೆ ಮತ್ತು ನರಳುವಿಕೆಯಿಂದ ಮುಕ್ತರಾದಾಗ ಮಾತ್ರ ಭಾರತ ನಿಜವಾದ ಸ್ವಾತಂತ್ರ್ಯ ಹೊಂದುತ್ತದೆ ಎಂದು ರಾಷ್ರಪಿತ ಮಹಾತ್ಮಾ ಗಾಂಧೀಜಿಯವರು ಹೇಳಿದ ಮಾತಿನಂತೆ ಸಾದರಪಡಿಸಿದ ಕನಸಿನ ಯೋಜನೆಯಾಗಿದೆ.
ನಿರುದ್ಯೋಗದ ಪ್ರಮಾಣ ಕಡಿಮೆ ಮಾಡಬೇಕೆಂದರೆ ದುಡಿಯುವ ಶಕ್ತಿ ಇರುವ ಜನರಿಗೆ ದುಡಿದು ಸಂಪಾದಿಸುವ ಅವಕಾಶ ಕಲ್ಪಿಸಿಕೊಡಬೇಕು. ಭಾರತವು ಒಂದು ಹಳ್ಳಿಗಳ ದೇಶವಾಗಿದ್ದು. ಇಲ್ಲಿ ಸುಮಾರು ಐದು ಲಕ್ಷಕ್ಕಿಂತಲೂ ಅಧಿಕ ಹಳ್ಳಿಗಳಿವೆ. ೨೦೦೧ರ ಜನಗಣತಿಯ ಪ್ರಕಾರ ಸುಮಾರು ೭೪೨ ದಶಲಕ್ಷ ಜನರು ಅಂದರೆ, ಶೇ ೭೨.೨ಕ್ಕಿಂತಲೂ ಅಧಿಕ ಜನರು ಗ್ರಾಮಾಂತರ ಪ್ರದೇಶಗಳಲ್ಲಿ ವಾಸವಾಗಿzರೆ,
ಕಳೆದ ಐದು ದಶಕಗಳ ಅಭಿವೃದ್ಧಿಯ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಜನರ ಸಮಸ್ಯೆ ಗಳನ್ನು ನಿವಾರಿಸುವಲ್ಲಿ ವಿಫಲ ಗೊಂಡಿದ್ದು, ಗ್ರಾಮೀಣ ಭಾರತ ಹಲವು ಸಮಸ್ಯೆಗಳ ಆಗರವಾಗಿಯೇ ಉಳಿದು ಕೊಂಡಿದೆ. ಬಡತನ, ನಿರುದ್ಯೋಗ, ಮೂಲಭೂತ ಸೌಕರ್ಯಗಳ ಅeನ, ಮುಂತಾದ ಸಮಸ್ಯೆಗಳು ಗ್ರಾಮೀಣ ಭಾರತ ಎದುರಿಸುತ್ತಿ ರುವ ಗಂಭೀರ ಸಮಸ್ಯೆಗಳಾಗಿವೆ. ಗ್ರಾಮೀಣ ಜನರು ಎದುರಿಸುತ್ತಿ ರುವ ಸಮಸ್ಯೆಗಳಲ್ಲಿ ಬಡತನ ಬಹು ಮುಖ್ಯ ಪಾತ್ರ ವಹಿಸುತ್ತದೆ. ಬಡತನ ಎಂಬುದು ಜನರ ಭರವಸೆರಹಿತ ನಿಕೃಷ್ಠ ಜೀವನದ ಪರಿಸ್ಥಿತಿಯಾಗಿದೆ, ಸಮಾಜದ ಒಂದು ವರ್ಗದ ಜನರು ತಮ್ಮ ಮೂಲಾವಶ್ಯಕತೆಗಳನ್ನು ಈಡೇರಿಸಿ ಕೊಳ್ಳಲಾಗದಂತಹ ಪರಿಸ್ಥಿತಿಯನ್ನು ಬಡತನ ಎಂದು ಅರ್ಥೈಸಿಕೊಳ್ಳ ಬಹುದು ಹಾಗೂ ಇದೊಂದು ಸಾಪೇಕ್ಷ ವಿಷಯವಾಗಿದ್ದು ಅದನ್ನು ಭೌತಿಕ ಅಂಶಗಳ ಆಧಾರದ ಮೇಲೆ ವ್ಯಕ್ತಪಡಿಸಲಾಗುತ್ತದೆ.

ಭಾರತದಂತಹ ರಾಷ್ಟದಲ್ಲಿ ಹವಾಮಾನ ಪರಿಸ್ಥಿತಿಗನುಗುಣ ವಾಗಿ ಹಳ್ಳಿಗಳಲ್ಲಿ ವರ್ಷದ ಎ ಕಾಲಗಳಲ್ಲೂ ಎ ವರ್ಗಕ್ಕೆ ಕೆಲಸ ಸಿಗುವುದಿಲ್ಲ, ಕೆಲಸ ಸಿಕ್ಕರೂ ಗಂಡು – ಹೆಣ್ಣೆಂಬ ತಾರತಮ್ಯ ಮಾಡುವುದು ಕಟುವಾಸ್ತವ ಸಂಗತಿಯಾಗಿದೆ. ಸ್ಥಳೀಯವಾಗಿ ಕೆಲಸವಿಲ್ಲದೆ ಇzಗ ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿ ಸಾಮಾನ್ಯ ವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಜನರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ದುಡಿಯುವ ಸಾಮರ್ಥ್ಯ, ಅಗತ್ಯತೆ ಮತ್ತು ಗಂಡು-ಹೆಣ್ಣೆಂಬ ಲಿಂಗ ತಾರತಮ್ಯವಿಲ್ಲದೆ ದುಡಿಯುವ ಕೈಗಳಿಗೆ ಒಂದಿಷ್ಟು ಉದ್ಯೋಗ ಕಲ್ಪಿಸಿಕೊಡುವ ಸದುzಶವನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಹೊಂದಿದೆ.
ಗ್ರಾಮೀಣ ಜನತೆಯ ಬಡತನ ಮತ್ತು ನಿರುದ್ಯೋಗ ನಿವಾರಣೆ ಗಾಗಿ ಅನೇಕ ಯೋಜನೆಗಳನ್ನು ಸ್ವಾತಂತ್ರ್ಯಾನಂತರ ಜಾರಿಗೆ ತಂದರು. ಅವುಗಳಲ್ಲಿ ಪ್ರಮುಖವಾದ ಕಾರ್ಯಕ್ರಮ ಗಳೆಂದರೆ- ಗ್ರಾಮೀಣಾಭಿವೃದ್ದಿ ಕಾರ್ಯಕ್ರಮ, ಸ್ವರ್ಣಜಯಂತಿ ಗ್ರಾಮೋದ್ಯೋಗ ಯೋಜನೆ, ಗ್ರಾಮೀಣ ಉದ್ಯೋಗ ಸಮುಷ್ಟಿ ಯೋಜನೆ ಹೀಗೆ ಹತ್ತು ಹಲವು ಯೋಜನೆಗಳನ್ನು ಜರಿಗೆ ತಂದಿತ್ತು. ಆದರೆ ಯೋಜನೆಯ ಅನುಷ್ಠಾನಗೊಳಿಸಲು ಹಲವಾರು ತೊಡಕುಗಳು ಎದುರಾದವು- ಮಾಹಿತಿಯ ಕೊರತೆ, ಜನರ ಪಾಲ್ಗೊಳ್ಳುವಿಕೆ ಕೊರತೆ, ಮೇಲ್ವಿಚಾರಣೆ ಕೊರತೆ, ಪಾರದರ್ಶಕತೆ ಇಲ್ಲದಿರುವುದು, ಹೀಗೆ ಹಲವು ತೊಡಕುಗಳು ಹಾಗೂ ವೈಫಲ್ಯಗಳ ಆಗರವಾಗಿ ದ್ದವು. ಈ ಪಂಚ ವಾರ್ಷಿಕ ಯೋಜನೆಗಳ ಎ ಅಂಕಿ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷೆಯಂತೆಯೇ ಜನಪರವಾದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ – ೨೦೦೫ಯನ್ನು ಕಾಯ್ದೆ ರೂಪದಲ್ಲಿ ಜರಿಗೆ ತಂದಿತು. ಅಪಾರ ಪ್ರಮಾಣದಲ್ಲಿ ವ್ಯರ್ಥವಾಗುತ್ತಿ ರುವ ಶ್ರಮವನ್ನು ಬಳಸಿ ಇಡೀ ರಾಷ್ಟ್ರವೇ ಬಳಸಬಹುದಾದ ಆಸ್ತಿಯನ್ನು ಸೃಷ್ಟಿಸಬಹುದೆಂಬು ದನ್ನು ಹತ್ತಾರು ಜನರ ಉದ್ಯೋಗ ಬೇಡಿಕೆಯನ್ನು ಆರ್ಥಿಕ ಅಭಿವೃದ್ದಿ ಗಾಗಿ ಬಳಸಲು ಸಾಧ್ಯ ಎಂಬುದನ್ನು ಉದ್ಯೋಗ ಖಾತ್ರಿ ಯೋಜನೆ ಮನದಟ್ಟು ಮಾಡಿಕೊಡುತ್ತದೆ.
ಸ್ವಾತಂತ್ರ್ಯಾನಂತರ ದೇಶದಲ್ಲಿ ಈವರೆಗೆ ಒಳಗೊಂಡ ಗ್ರಾಮೀಣ ಉದ್ಯೋಗ ಭರವಸೆ ಕಾರ್ಯಕ್ರಮ ಗಳ ಸಾಧಕ ಬಾಧಕಗಳನ್ನು ಗಮನದಲ್ಲಿಟ್ಟು ಕೊಂಡು ಭಾರತ ಸರ್ಕಾರ ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ – ೨೦೦೫ನ್ನು ದಿನಾಂಕ ೦೭-೦೯-೨೦೦೫ರಂದು ಭಾರತದ ರಾಷ್ಟ್ರಪತ್ರದಲ್ಲಿ ಪ್ರಕಟಿಸಿದ ಆರಂಭ ದಲ್ಲಿ ದೇಶದ ೨೦೦ ಜಿಗಳಲ್ಲಿ, ಪ್ರಸಕ್ತ ಆರ್ಥಿಕ ವರ್ಷದಿಂದ ದೇಶದ ಎ ಜಿಗಳಿಗೆ ವಿಸ್ತರಿಸ ಲಾಗಿದ್ದು ಪ್ರಪ್ರಥಮವಾಗಿ ಆಂದ್ರ ಪ್ರದೇಶದ ಕುಗ್ರಾಮ ಬಂಗಾಲ ಪಲ್ಲಿಯಲ್ಲಿ ಪ್ರಾಯೋಗಿಕವಾಗಿ ಮನಮೋಹನ್ ಸಿಂಗ್ ಮತ್ತು ಸೋನಿಯಾಗಾಂಧಿ ಅಧಿಕೃತವಾಗಿ ಚಾಲನೆ ನೀಡಿದರು.
ಕರ್ನಾಟಕ ಸರ್ಕಾರ ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕರ್ನಾಟಕ ಎಂಬ ಹೆಸರಿನಲ್ಲಿ ದಿನಾಂಕ ೮-೦೨-೨೦೦೭ರಲ್ಲಿ ಕರ್ನಾಟಕ ರಾಜ್ಯ ಪತ್ರದಲ್ಲಿ ಸ್ಪಷ್ಟಪಡಿಸಿದೆ. ಅಂದಿನಿಂದ ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕರ್ನಾಟಕ ಜರಿಗೆ ಬಂದಿದೆ.
ಸ್ವ ಇಚ್ಛೆಯಿಂದ ಅರ್ಜಿ ಸಲ್ಲಿಸುವ ಕರಕುಶಲ ದೈಹಿಕ ಕೆಲಸ ಬಯಸುವ ಗ್ರಾಮೀಣ ಪ್ರದೇಶದ ಸದಸ್ಯರಿಗೆ ಪ್ರತಿ ಕುಟುಂಬದ ಒಂದು ಆರ್ಥಿಕ ವಷದಲ್ಲಿ ಕನಿಷ್ಠ ೧೦೦ ಮಾನವ ದಿನಗಳ ಉದ್ಯೋಗವನ್ನು ನೀಡಿ ಅವರ ಜೀವನಕ್ಕೆ ಭದ್ರತೆ ಒದಗಿಸುವುದು.
ಈ ಯೋಜನೆಯಡಿ ತೊಡಗಿಸಿಕೊಳ್ಳುವ ಕಾರ್ಮಿಕರಿಗೆ ಈ ಕೆಳಕಂಡ ಹಕ್ಕುಗಳು ಮತ್ತು ಅಧಿಕಾರಗಳನ್ನು ನೀಡಲಾಗಿದೆ. ಕುಟುಂಬ ಉದ್ಯೋಗ ಚೀಟಿಯಲ್ಲಿ ಹೆಸರಿರುವ ಕುಟುಂಬದ ಎ ವಯಸ್ಕರು, ಕರಕುಶಲ ದೈಹಿಕ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಹಕ್ಕು ಹೊಂದಿರುತ್ತಾರೆ.
ಉದ್ಯೋಗ ಕೋರಿಕೆ ೧೫ ದಿನಗಳಲ್ಲಿ ಉದ್ಯೋಗ ಒದಗಿಸ ದಿದ್ದಲ್ಲಿ ಅರ್ಜಿದಾರರು ಆರ್ಥಿಕ ವರ್ಷದ ಮೊದಲ ೩೦ ದಿನಗಳಿಗೆ ಕೂಲಿಯ ಶೇ.೨೫ರಷ್ಟು ಮಾತ್ರ ಉಳಿದ ಅವಧಿಗೆ ಶೇ೩೦ರಷ್ಟನ್ನು ನಿರುದ್ಯೋಗ ಭತ್ಯೆಯಾಗಿ ಪಡೆ ಯಲು ಹಕ್ಕುಳ್ಳವರಾಗಿರುತ್ತಾರೆ.
ಸಾಧ್ಯವಾದಷ್ಟರ ಮಟ್ಟಿಗೆ ಕೆಲಸವನ್ನು ಆ ಗ್ರಾಮದ ವ್ಯಾಪ್ತಿ ಯಲ್ಲಿ ಒದಗಿಸಬೇಕು. ಅವರು ವಾಸವಿರುವ ಗ್ರಾಮದಿಂದ ೫ಕಿ.ಮೀ ಗಿಂತ ಹೆಚ್ಚಿನ ದೂರದಲ್ಲಿ ಕೆಲಸವನ್ನು ಒದಗಿಸಿz ಆದರೆ ಕೂಲಿಯ ಶೇ.೧೦ರಷ್ಟನ್ನು ಹೆಚ್ಚುವರಿಯಾಗಿ ಮತ್ತು ಜೀವನ ವೆಚ್ಚಕ್ಕಾಗಿ ಪಡೆಯಲು ಹಕ್ಕುಳ್ಳವ ರಾಗಿರು ತ್ತಾರೆ. ಕೆಲಸ ಕೋರುವ ನೋಂದಾಯಿತ ಅರ್ಜಿದಾರರ ಪೈಕಿ ಕನಿಷ್ಠ ೧/೩ ರಷ್ಟಿರುವಂತೆ ಮಹಿಳೆಯರಿಗೆ ಆದ್ಯತೆ ಮೇರೆಗೆ ಉದ್ಯೋಗ ಒದಗಿಸಬೇಕು. ಪಾವತಿಗೆ ಉಳಿದ ೧೫ ದಿನಗೊಳ ಗಾಗಿ ಕೂಲಿಯನ್ನು ಪಾವತಿಸದಿ ದ್ದಲ್ಲಿ, ಉದ್ಯೋಗಿಯು ಕೂಲಿ ಪಾವತಿ ಅಧಿನಿಯಮ ೧೯೩೬(೪/೧೯೩೬)ರ ಅನ್ವಯ ಪರಿಹಾರ ಪಡೆಯಲು ಹಕ್ಕುಳ್ಳವರಾಗಿರು ತ್ತಾನೆ.ಕಾಮಗಾರಿಯ ಸ್ಥಳದಲ್ಲಿ ಕಾಮಗಾರಿಗೆ ಸಂಬಂಧಿಸಿದಂತೆ ಕಾರ್ಮಿಕರಿಗೆ ಗಾಯಗಳಾದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಕಾಮಗಾರಿ ಸಂಬಂಧ ಯಾವುದೇ ಕಾರ್ಮಿಕರಿಗೆ ಗಾಯ ಗಳಾಗಿ ಆಸ್ಪತ್ರೆಗೆ ದಾಖಲಾಗ ಬೇಕಾದ ಅಗತ್ಯ ಕಂಡುಬಂದಲ್ಲಿ ಅವರು ಔಷಧಿ, ವೈದ್ಯಕೀಯ ಚಿಕಿತ್ಸೆ, ವಸತಿ, ಇತ್ಯಾದಿ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಪ ಡೆಯಲು ಹಕ್ಕುಳ್ಳವರಾಗಿರುತ್ತಾರೆ.
ಕಾಮಗಾರಿಯ ಕಾರಣ ದಿಂದಾಗಿ ಕಾರ್ಮಿಕರು ಶಾಶ್ವತವಾಗಿ ಅಂಗವಿಕಲರಾದರೆ ಅಥವಾ ಮೃತಪಟ್ಟರೆ ಸಂದರ್ಭಕ್ಕೆ ತಕ್ಕಂತೆ ಅವರು ಮತ್ತು ಅವರ ವಾರಸು ದಾರರು ೨೫,೦೦೦ ಅಥವಾ ಕೇಂದ್ರ ಸರ್ಕಾರ ನಿಗದಿಪಡಿಸಬಹುದಾದ ಪರಿಹಾರ ಪಡೆಯಲು ಹಕ್ಕುಳ್ಳವರಾಗಿರುತ್ತಾರೆ.
ಹೀಗಾಗಿ ಯೋಜನೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಗ್ರಾಮೀಣ ಬಡತನ ನಿವಾರಿಸಿ ಗ್ರಾಮೀಣಾಭಿವೃದ್ಧಿ ಯನ್ನು ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ, ರಾಜ್ಯ ಸರ್ಕಾರದ ಜೊತೆ-ಜೊತೆಗೆ ವಿವಿಧ ಸರ್ಕಾರೇತರ ಸಂಸ್ಥೆ, ಸ್ಥಳೀಯ ಸಂಸ್ಥೆಗಳಾದ – ಗ್ರಾಮ ಪಂಚಾ ಯ್ತಿಗಳು, ಗ್ರಾಮ ಸಭೆಗಳು, ಸ್ವ-ಸಹಾಯ ಗುಂಪುಗಳು, ಸ್ಥಳೀಯ ಮೇಲ್ವಿಚಾರಣಾ ಸಂಸ್ಥೆಗಳು, ಸಮಿತಿಗಳು, ಎನ್.ಜಿ.ಓಗಳು ಸಮಾಜ ಕಾರ್ಯಕರ್ತರು ಈ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಬಹು ಮುಖ್ಯ ಪಾತ್ರ ನಿರ್ವಹಿಸುವರು.
೧೯೪೬ರಷ್ಟು ಹಿಂದೆಯೇ ರಾಷ್ಟ್ರಪಿತ ಗಾಂಧೀಜಿಯವರು ಕಂಡಿದ್ದ ರಾಮರಾಜ್ಯದ ಕನಸು ಅಂದರೆ ಗ್ರಾಮೀಣ ಪಂಚಾಯತಿ ಗಳಿಗೆ ಪೂರ್ಣ ಅಧಿಕಾರಿ ನಿಯಮದ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಒಂದು ಮಹತ್ವದ ಮೈಲುಗಲ್ಲು. ಈ ಮಧ್ಯೆ ವಿರೋಧಪಕ್ಷದ ಆಡಳಿತವಿರುವ ಹಲವು ರಾಜ್ಯಗಳುಯುಪಿಎ’ ಸರ್ಕಾರ ಜರಿಗೊಳಿಸಿದ ಈ ಕ್ರಾಂತಿಕಾರಿ ಯೋಜನೆಯ ಹೆಸರಿನ ಲಾಭ ಪಡೆಯುತ್ತವೆ ಎಂಬ ವರದಿಯ ಹಿನ್ನೆಲೆಯಲ್ಲಿ ಸದರಿ ಯೋಜನೆಗೆ ಕೇಂದ್ರ ಸರ್ಕಾರ `ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಎಂದು ರಾಷ್ಟ್ರ ಪಿತನ ೧೪೦ನೇ ಜನ್ಮ ದಿನಾಚರ ಣೆಯ ದಿನದಂದು ಅಕ್ಟೋಬರ್ – ೨,೨೦೦೯ನೇ ಶುಕ್ರವಾರದಂದು ನಾಮಕರಣ ಮಾಡಿದೆ.
ರಾಮ ರಾಜ್ಯದ ಕನಸು ಕಂಡಿದ್ದ ಪೂಜ್ಯ ಬಾಪೂಜಿಯವರ ಹೆಸರಿನೊಂದಿಗೆ ಗ್ರಾಮೀಣಾ ಭಿವೃದ್ಧಿ ಯೊಂದಿಗೆ ಗ್ರಾಮೀಣ ಜನಸಾಮಾನ್ಯರ ಆರ್ಥಿಕಾಭಿವೃ ದ್ಧಿಗೆ ನೆರವುದಾಯಕವಾಗಿದ್ದ ಈ ಯೋಜನೆಯು ಇಂದು ಭಾರತದ ಗ್ರಾಮೀಣ ಉದ್ಯೋಗ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು ೨೦೦೫ರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ರದ್ದುಗೊಳಿಸಿ, ಅದರ ಬದಲಿಗೆ ‘ವಿಕಸಿತ ಭಾರತ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)’- ಉದ್ಯೋಗ ಮತ್ತು ಜೀವನೋಪಾಯ ಮಿಷನ್ ಅಥವಾ ‘ವಿಬಿ-ಜಿ ರಾಮ್ ಜಿ’ ಕಾಯ್ದೆ, ೨೦೨೫ ಅನ್ನು ಜಾರಿಗೆ ತಂದಿದೆ. ಅಂದರೆ, ಈ ಹಿಂದೆ ಇದ ಎಂಜಿನರೇಗಾ ಯೋಜನೆಯ ಬದಲು ವಿಬಿ-ಜಿ ರಾಮ್ ಜಿ ಯೋಜನೆ ಜರಿಗೆ ಬಂದಿದೆ. ಆದರೆ ಪೂಜ್ಯ ಮಹಾತ್ಮಾ ಗಾಂಧೀಜಿ ಯವರ ಹೆಸರನ್ನು ಮರೆ ಮಾಚಿ ರುವದು ವಿಷಾದನೀಯವಾಗಿದೆ.
