ಮಹರ್ಷಿ ವಾಲ್ಮೀಕಿ ಶ್ರೇಷ್ಠ ಮಹಾಕವಿ: ಶಿಕ್ಷಕ ಕಬ್ಬೂರ
ಸವದತ್ತಿ: ರಾಮಾಯಣ ಎಂಬ ಮಹಾಕಾವ್ಯವನ್ನು ಸೃಷ್ಠಿಸಿದ ಶ್ರೇಷ್ಠಕವಿ ಮಹರ್ಷಿ ವಾಲ್ಮೀಕಿ, ಜೀವನದ ಅನೇಕ ಮಲ್ಯಗಳನ್ನು ಅದರಲ್ಲಿ ತಿಳಿಸಿzರೆ. ವಾಲ್ಮೀಕಿ ಎಂದರೆ ಅದೊಂದು ಹೆಸರಾಗಿ ರದೇ ನಮ್ಮ ಸಂಸ್ಕೃತಿಯ ಭವ್ಯ ಪರಂಪರೆ ಎಂದರೆ ತಪ್ಪಾಗಲಾ ರದು. ಮಹಾಕಾವ್ಯದ ಮೂಲಕ ಸದಾ ಕಾಲ ನಮ್ಮ ನೆಲದ ಸಂಸ್ಕೃತಿ ಯಲ್ಲಿ ನೆಲೆಸಿzರೆ ಎಂದು ಶಿಕ್ಷಕ ಎನ್.ಎನ್.ಕಬ್ಬೂರ ಅಭಿಪ್ರಾಯ ಹಂಚಿಕೊಂಡರು.
ಸ್ಥಳೀಯ ಸರಕಾರಿ ಪ್ರಾಥಮಿಕ ಕನ್ನಡ ಶಾಲೆ ನಂ-೬ ರಲ್ಲಿ ವಾಲ್ಮೀಕಿ ಜಯಂತಿಯ ಅಂಗವಾಗಿ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಾಲ್ಮೀಕಿ ಯ ಸಂಕ್ಷೀಪ್ತ ಜೀವನ ಪರಿಚಯ ಮಾಡಿದರು. ಬಾಲ್ಯದಲ್ಲಿ ಡಕಾಯಿ ತನಾಗಿದ್ದು, ಶ್ರೀನಾರದರ ಮಾತಿ ನಿಂದ eನೋದಯವಾಗಿದ್ದು, ಹುತ್ತವನ್ನು ಒಡೆದು ಬಂದು ವಾಲ್ಮೀಕಿಯಾದ ಪ್ರಸಂಗ, ಬ್ರಹ್ಮ ದೇವನ ಅನತಿಯಂತೆ ೨೪ ಸಾವಿರ ಶ್ಲೋಕಗಳು ಹಾಗೂ ಏಳು ಕಾಂಡ ಗಳಲ್ಲಿ ರಾಮಾಯಣ ರಚಿಸಿದ ಪ್ರಸಂಗ ಮಕ್ಕಳಿಗೆ ತಿಳಿಸಿದರು.
ನಂತರ ಶಿಕ್ಷಕಿ ಎಮ್.ಆರ್. ಫಂಡಿ, ವಾಲ್ಮೀಕಿ ಬಗೆಗಿನ ತಮ್ಮ ಅಭಿಪ್ರಾಯಗಳನ್ನು ಹಂಚಿ ಕೊಂಡರು. ಕಾರ್‍ಯಕ್ರಮದಲ್ಲಿ ಅಂಗ ನವಾಡಿ ಕಾರ್‍ಯಕರ್ತೆಯರು, ಶಾಲಾ ಅಡುಗೆ ಸಿಬ್ಬಂದಿ ಯವರು ಮತ್ತು ಪಾಲಕರು ಉಪಸ್ಥಿತರಿದ್ದರು.