ಚೌಡೇಶ್ವರಿ ದೇವಿಗೆ ಮಹಾಕಾಳಿ ಅಲಂಕಾರ…
ಶಿವಮೊಗ್ಗ: ನಗರದ ಚಾಲುಕ್ಯ ನಗರದ ಶ್ರೀ ಚೌಡೇಶ್ವರಿ ಅಮ್ಮ ನವರ ದೇವಸ್ಥಾನದಲ್ಲಿ ಅ . ೨೧ ರಂದು ಮೇಘ ರೋಹಿತ್ ಕುಮಾರ ಕುಟುಂಬದ ವತಿಯಿಂದ ದೇವಿಗೆ ಮಹಾಕಾಳಿ ಮಾಡಲಾ ಗಿತ್ತು .
ಅದೇ ದಿನ ಬೆಳಿಗ್ಗೆ ೧೦.೩೦ ರಿಂದ ಸೌಮ್ಯ ಸಿದ್ದೇಶ್ ಕುಟುಂಬದ ವತಿಯಿಂದ ದುರ್ಗಾ ಹೋಮ ಹೋಮ ನೆರವೇರಿಸಲಾಯಿತು.
ಅ.೨೧ರ ಸಂಜೆ ೬.೩೦ ರಿಂದ ಸುಷ್ಮಾ ಶ್ರೀಧರ್ ತಂಡದಿಂದ ನೃತ್ಯ ಏರ್ಪಡಿಸಲಾಗಿದೆ.
ಅ. ೨೨ರಂದು ದೇವಿಗೆ ಮಹಿ ಷಾಸುರ ಮರ್ಧಿನಿ ಅಲಂಕಾರ ಹಾಗೂ ಸಾಮೂಹಿಕ ಚಂಡಿಕಾ ಹೋಮ ೧೨.೩೦ಕ್ಕೇ ಮಹಾ ಮಂಗಳಾರತಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಸಂಜೆ . ೭.೩೦ರಿಂದ ಚೌಡೇಶ್ವರಿ ಮಹಿಳಾ ಸಂಘದಿಂದ ಭಜನೆ ನೃತ್ಯ ಏರ್ಪಡಿಸಲಾಗಿದೆ.
ಅ ೨೩ರಂದು ದೇವಿಗೆ ರೇಣುಕಾದೇವಿ ಅಲಂಕಾರ, ಬೆಳಿಗ್ಗೆ ೧೦.೩೦ರಿಂದ ದುರ್ಗಾ ಹೋಮ, ಸಂಜೆ೭.೩೦ರಿಂದ ಭಕ್ತ ಪ್ರಹ್ಲಾದ ಸಿನಿಮಾ ಪ್ರದರ್ಶನ.
ಅ.೨೪ರಂದು ಬೆಳಿಗ್ಗೆ ೯ರಿಂದ ಚಂಡಿಕಾಹೋಮ ೧೨ಗಂಟೆಗೆ ಹೋಮದ ಪೂರ್ಣಾಹುತಿ, ಪ್ರಸಾದ ವಿನಿಯೋಗ. ಸಂಜೆ ೬.೩೦ರಿಂದ ಬನ್ನಿ ಮರಕ್ಕೆ ಪೂಜೆ, ಬನ್ನಿ ಉತ್ಸವ, ದೇವಿಗೆ ಮಹಾ ಮಂಗಳಾರತಿ ನಂತರ ಅನ್ನಸಂತ ರ್ಪಣೆ ಏರ್ಪಡಿಸಲಾಗಿದೆ .
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಸುವಂತೆ ಆಡಳಿತ ಮಂಡಲಿ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ೯೯೮೦ ೨೪೭೦೮೧, ೯೪೪೮೮೮೮೧೨೯ ಸಂಪರ್ಕಿಸಬಹುದು