ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ನಿವೃತ್ತ ನೌಕರರಿಗಾದ ನಷ್ಟ ಕುರಿತು ಚರ್ಚಿಸುವ ಭರವಸೆ ನೀಡಿದ ಮಧು..

Share Below Link

ಸೊರಬ: ಮೂಲಭೂತ ಸೌಕರ್ಯಗಳಜೊತೆ ಸರ್ಕಾರ ಜರಿಗೆ ತರುವ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರಿ ನೌಕರರ ಸಹಕಾರ ಬಹುಮುಖ್ಯ ವಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ತಾಲೂಕು ನಿವೃತ್ತ ನೌಕರರ ಪ್ರಥಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಹಾಗೂ ನೌಕರರ ನಡುವೆ ಸಮನ್ವಯತೆ ಇದ್ದಾಗ ಮಾತ್ರ ಒಂದು ಮಹತ್ವದ ಯೋಜನೆ ಸಂಪೂರ್ಣ ಯಶಸ್ವಿಯಾಗಲು ಸಾಧ್ಯ. ನಿವೃತ್ತ ನೌಕರರಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ನಿವೃತ್ತ ನೌಕರರು ಸಂಧ್ಯಾ ಕಾಲದಲ್ಲಿ ಪರಸ್ಪರ ತಮ್ಮ ಅನುಭವವನ್ನು, ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಭವನದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ೭ನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಆಗಿರುವ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದರು.
ನಿವೃತ್ತ ನೌಕರರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಹಾಗೂ ನಿವೇಶನ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ನಿವೃತ್ತ ನೌಕರ ಸಂಘದ ತಾಲ್ಲೂಕು ಉಪಾಧ್ಯಕ್ಷ ಬಸವಣ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕಿ ರತ್ನಮ್ಮ ಪ್ರಾರ್ಥಿಸಿ, ಬಿ.ವಿ. ಜವೂರ್ ಸ್ವಾಗತಿಸಿ, ಕೃಷ್ಣಾನಂದ ನಿರೂಪಿಸಿದರು.
ನಿವೃತ್ತ ನೌಕರರ ತಾಲ್ಲೂಕು ಸಂಘದ ಅಧ್ಯಕ್ಷ ಕಲ್ಲಪ್ಪ ಚಿತ್ರಟ್ಟೆಹಳ್ಳಿ, ಷಣ್ಮುಖಪ್ಪ, ಗೋಪಾಲಪ್ಪ, ಆರ್.ಹನುಮಂತಪ್ಪ, ಗಿರಿಯಪ್ಪ, ರಾಮಚಂದ್ರ ಜೋಯಿಸ್, ಜಯಪ್ಪ, ಕೃಷ್ಣಮೂರ್ತಿ, ಶಿವಪ್ಪ ಪುಟ್ಟನಹಳ್ಳಿ, ಕುಬೇರಪ್ಪ, ಶಿವಪ್ಪ, ಶಿವಲಿಂಗಪ್ಪ,ಶಶಿಕಲಾ, ಕಲೀಂ ಸಾಬ್, ಪರಶುರಾಮಪ್ಪ,ಮೋಹನದಾಸ್ ಇದ್ದರು.
ಸೊರಬದ ರಂಗ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ಪ್ರಥಮ ಸಮ್ಮೇಳನದಲ್ಲಿ ೭೫ ವಸಂತಗಳನ್ನು ಪೂರೈಸಿದ ಹಿರಿಯ ನಿವೃತ್ತ ನೌಕರರನ್ನು ಸಚಿವ ಮಧು ಬಂಗಾರಪ್ಪ ಸನ್ಮಾನಿಸಿದರು.