ಲವ್ ಕಮ್ ಅರೇಂಜ್ ಸದಾ ಪ್ರಸ್ತುತ…
ಪ್ರೀತಿ ಎಂಬುದು ದೇಹದ ಸೆಳೆತವಲ್ಲ, ಎರಡು ಮನಸ್ಸುಗಳ ನಡುವಿನ ಮಿಲನ. ಆಕರ್ಷಣೆಗೆ ಒಳಗಾಗಿ ದಾಹ ತೀರಿಸಿಕೊಳ್ಳುವುದಲ್ಲ. ದೇಹಗಳು ದಣಿದು ಕೊನೆಯ ಉಸಿರೆಳೆಯುವವರೆಗೂ ಬದುಕಿನಲ್ಲಿ ಸಂಸಾರದ ಕೊಂಡಿಯಾಗಿ ಇರುವಂತz ಪ್ರೀತಿ.
ಕಣ್ಣಿನ ನೋಟಕ್ಕೆ ಮಾತ್ರ ಮನಸೋಲದೆ, ತುಟಿ ಬಣ್ಣದ ಸೆಳೆತಕ್ಕೆ ಮೋಹಿತರಾಗದೆ, ತುಂಬು ಕೆನ್ನೆಗೆ ಮುತ್ತಿಡೊ ಮುಂಚೆ ಅದನ್ನು ರಕ್ಷಿಸುವವರಾಗಿ, ಸೌಂದರ್ಯನ ಸವಿಯೋ ಮುಂಚೆ ಪ್ರೀತಿ ಮಾಡೋ ಮನಸ್ಸುಗಳ ಭಾವನೆಗಳನ್ನು ಅರಿಯುವಂತಿರ ಬೇಕು. ಕಷ್ಟದಲ್ಲಿ ಕೈ ಬಿಡದೆ, ನೋವಲ್ಲಿಯೂ ಒಂದಾಗಿ, ಪರಸ್ಪರ ಭಾವನೆಗೆ ಸ್ಪಂದಿಸಿ, ಬರುವ ಸಮಸ್ಯೆಗೆ ಮನನೊಂದದೆ ಯಾವುದೇ ತೊಂದರೆ ಬಂದರೂ ಜಗ್ಗದೇ ಕೊನೆಯವರೆಗೂ ಹಿಡಿದ ಕೈ ಬಿಡದೆ ಮನೆಯವರ ಇಚ್ಛೆಯ ಮೇರೆಗೆ, ಬೆರೆತು ಬಾಳುವ ಹೃದಯಗಳ ಸಂಗಮವೇ ಪ್ರೀತಿ.
ಪ್ರೀತಿ ಹೆಸರಲ್ಲಿ ಇತ್ತೀಚೆಗೆ ಸಮಾಜದಲ್ಲಿ ನಡಿಯಬಾರದಂತಹ ಘಟನೆಗಳು ನಡೆಯುತ್ತಲೆ ಇವೆ. ಮನೆಯಲ್ಲಿ ಪ್ರೀತಿಗೆ ವಿರೋಧ ವಾಗಿರುವುದು, ಬಲವಂತವಾಗಿ ಮದುವೆ ಮಾಡಿಸುವಂತಹದು, ಪ್ರೀತಿಸಿದವರು ಸಿಗಲಿಲ್ಲ ಅಂತ ಅದೆಷ್ಟೋ ಜನ ಹುಚ್ಚರಾಗಿzರೆ, ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿzರೆ. ಹುಡುಗಿಯಿಂದಲೂ ಅಥವಾ ಹುಡುಗನಿಂದಲೂ ಪ್ರೀತಿಯಲ್ಲಿ ಆದ ಮೋಸದಿಂದ ಆತ್ಮಹತ್ಯೆಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಾಯಿದೆ.
ಕಾಮಕ್ಕಿಂತ ತೀವ್ರವಾದ ರೋಗವಿಲ್ಲ, ವ್ಯಾಮೋಹಕ್ಕಿಂತ ಬಲವಾದ ಶತ್ರುವಿಲ್ಲ. ಮದುವೆಯಾದ ಎಷ್ಟೋ ಜೋಡಿಗಳು ಸಂಸಾರ ನಡೆಸದೇ ವಿಚ್ಛೇದನೆ ಪಡೆಯುತ್ತಿರುವುದು, ಮದುವೆಯಾದರು ಕೂಡ ಸಂಗಾತಿ ಜೊತೆ ಓಡಿ ಹೋಗುವುದು, ತಮ್ಮ ಸ್ವಾರ್ಥಕ್ಕಾಗಿ ಹೆತ್ತ ಮಕ್ಕಳನ್ನು ಅನಾಥರನ್ನಾಗಿ ಮಾಡುತ್ತಿರುವುದು, ದೇಹದ ಚಟ ತೀರಿಸಿಕೊಂಡು ಮಕ್ಕಳನ್ನೇ ಹತ್ಯೆ ಮಾಡುವ ಪ್ರವೃತ್ತಿ ಹೆಚ್ಚಾಗಿದ್ದು, ಪ್ರೀತಿ ಮಾಡಿರೋರು ಓಡಿ ಹೋಗಿದ್ದಕ್ಕೆ ಮನನೊಂದು ತಂದೆ ತಾಯಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು, ಪ್ರೀತಿ ಹೆಸರಲ್ಲಿ ಲೈಂಗಿಕ ಅತ್ಯಾಚಾರಗಳು ಹೆಚ್ಚೆಚ್ಚು ನಡೆಯುತ್ತಲೇ ಇವೆ. ಸಾಮಾಜಿಕ ಜಲತಾಣಗಳಲ್ಲಿ ಇಂತಹ ಘಟನೆಗಳ ಸುದ್ದಿಯೇ ತುಂಬಿ ಹೋಗಿವೆ. ಈ ಘಟನೆಗಳು ಸಮಾಜದಲ್ಲಿ ಕಳಂಕವನ್ನುಂಟು ಮಾಡುತ್ತಿವೆ.

ಪ್ರತಿ ಜೀವಿಯ ಅನ್ವೇಷಣೆ ಪ್ರೇಮಕ್ಕಾಗಿಯೇ, ಕಾರಣವಿಲ್ಲದೆಯೇ ಹುಟ್ಟುವುದು ಪ್ರೀತಿ. ಅನಂತ ದೂರದ ಸುದೀರ್ಘ ಪ್ರಯಾಣ ಈ ಪ್ರೇಮ. ಹೃದಯಗಳ ಭಾಷೆ ಎಲ್ಲವನ್ನು ಮೀರುವಂತಹದು. ಪ್ರೀತಿ ಅನ್ನೋದು ಮೋಜು ಮಸ್ತಿ ದೇಹದ ತೃಪ್ತಿಗೆ ಸೀಮಿತವಲ್ಲ.
ಪ್ರೀತಿಲಿ ಹೆಣ್ಣು ಮತ್ತು ಗಂಡಿಂದ, ಇಬ್ಬರಿಂದಲೂ ತಪ್ಪಾಗುವುದು ಸಹಜ. ಹೆಣ್ಣು ಸೌಂದರ್ಯದ ಗಣಿ, ಸೌಂದರ್ಯ ಅನ್ನೋದು ಹೆಣ್ಣಿಗೆ ಬಂದ ಉಡುಗೊರೆ. ಆದರೆ ಪುರುಷ ಯಾವತ್ತೂ ಕೂಡ ಹೆಣ್ಣಿನ ಸೌಂದರ್ಯಕ್ಕೆ ಆಸೆ ಪಡುವುದಿಲ್ಲ, ಒಂದು ವೇಳೆ ಸೌಂದರ್ಯಕ್ಕೆ ಆಸೆ ಪಟ್ಟಿದ್ದರೆ ಅವರಿಗೆ ಯಾವತ್ತೂ ಒಂದೇ ಹೆಣ್ಣು ಸಾಲುತಿರಲಿಲ್ಲ, ಅವರಿಗೂ ಗೊತ್ತಿದೇ ೩೦೦, ೫೦೦ ರೂಪಾಯಿಯಿಂದ ರಸ್ತೆ ಮೇಲೆ ಹೆಣ್ಣಿನ ದೇಹ ಸಿಗುತ್ತೆ ಅಂತ. ಆದರೂ ಕೂಡ ಅವರು ಪ್ರೀತಿಯಲ್ಲಿ ಬಿದ್ದು ಹಾಳಾಗಿz ಹೆಚ್ಚು, ಯಾಕೆಂದರೆ ಪುರುಷರು ಒಂದು ಹೆಣ್ಣಿನ ನಿಯತ್ತಿಗೆ ಸಾಯುತ್ತಾರೆ, ಒಂದು ಹೆಣ್ಣಿನ ಒಳ್ಳೆತನಕ್ಕೆ ಇಷ್ಟಪಡುತ್ತಾರೆ, ತನ್ನ ಯೋಗ್ಯತೆಗೆ ತಕ್ಕಂತೆ, ತನ್ನ ಮನೆತನಕ್ಕೆ ತಕ್ಕಂತೆ, ಹೊಂದಿಕೊಂಡು ಹೋಗುವ ಹುಡುಗಿ ಸಿಕ್ಕರೆ ಅಷ್ಟೇ ಸಾಕು ಎಂದು, ಇಷ್ಟೇ ಆಸೆ ಪಡುತ್ತಾರೆ. ಆದರೆ ನಾನಾಂತರ ಕಾರಣಗಳಿಂದ, ಹೆಚ್ಚು ಪ್ರೀತಿಗೆ ಬಲಿಯಾಗುತ್ತಿರುವವರು ಪುರುಷರು.
ಎಷ್ಟೋ ಪ್ರೇಮಿಗಳು ಪ್ರೀತಿಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿzರೆ. ಪ್ರೀತಿ ಮಾಡಿದ ನಂತರ ಸಾಯೋದಲ್ಲ, ಸಾವೇ ಪರಿಹಾರ ಅಲ್ಲ. ಪ್ರೀತಿಲಿ ಗೆಲ್ಲಬೇಕು, ಪ್ರೀತಿ ಉಳಿಯಬೇಕೆಂದರೆ ಪ್ರೀತಿಗಾಗಿ ಹೋರಾಟ ಮಾಡಬೇಕು. ಕುಟುಂಬದಲ್ಲಿ ಒಪ್ಪಿಸುವ ಕೆಲಸ ಮಾಡಬೇಕು, ಆದರೆ ಪ್ರೀತಿಯ ಹೆಸರಲ್ಲಿ ಪ್ರಾಣ ಕಳೆದುಕೊಳ್ಳುವುದು ಪ್ರೀತಿಗೆ ಮಾಡುವ ದೊಡ್ಡ ಮೋಸ.
ಕುಟುಂಬಸ್ಥರು ಕೂಡ ಪ್ರೀತಿಗೆ ವಿರೋಧಿಸಬಾರದು, ಬಲವಂತವಾಗಿ ಮದುವೆ ಮಾಡಬಾರದು, ಪ್ರೀತಿ ಮಾಡಿದವರನ್ನು ದೂರ ಮಾಡಿದಾಗ ಎಷ್ಟೋ ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿzರೆ. ಇzಗ ಪ್ರೇಮಿಗಳನ್ನು ಒಂದು ಮಾಡದೆ, ಪ್ರಾಣ ಕಳೆದುಕೊಂಡ ನಂತರ ಕುಟುಂಬಸ್ಥರು ರೋಧನೆ ಪಡುವುದಕ್ಕಿಂತ, ಪ್ರೇಮಿಗಳ ಪ್ರೀತಿನ ಒಪ್ಪಿಕೊಂಡು ಅವರನ್ನು ಒಂದಾಗಿಸಿ ಪ್ರೀತಿಗೆ ಸಹಾಯ ಮಾಡಿ. ಆಗ ಪ್ರೇಮಿಗಳ ಬದುಕು ಸುಂದರವಾಗಿರಲು ಸಾಧ್ಯವಾಗುತ್ತದೆ.
ನಾಗೇಶ್ ಕೆ.ಎಸ್, ಪತ್ರಿಕೋದ್ಯಮ ವಿದ್ಯಾರ್ಥಿ, ಶಂಕರಘಟ್ಟ
