ಜಿಲ್ಲಾ ಸುದ್ದಿತಾಜಾ ಸುದ್ದಿ

ಕನಿಷ್ಠ ಬೇಡಿಕೆ ಈಡೇರಿಕೆಗಾಗಿ ಲೋಕಸಭಾ ಚುನಾವಣೆ ಬಹಿಷ್ಕಾರ ನಿರ್ಧಾರ…

Share Below Link

ಶಿಕಾರಿಪುರ: ತಾಲೂಕಿನಲ್ಲಿ ಕುಂಬಾರ ಸಮುದಾಯ ತೀವ್ರ ನಿರ್ಲಕ್ಷ್ಯಕ್ಕೊ ಳಗಾಗಿದ್ದು ಸಮಾಜದ ಹಲವು ವರ್ಷದ ಕನಿಷ್ಠ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಈ ಬಾರಿಯ ಲೋಕಸಭಾ ಚುನಾವಣೆಯನ್ನು ಸಮಾಜದ ಸದಸ್ಯರು ಬಹಿಷ್ಕರಿಸುವ ಕಠಿಣ ನಿರ್ಧಾರವನ್ನು ಕೈಗೊಂಡಿರು ವುದಾಗಿ ತಾ.ಕುಂಬಾರ ಸಮಾಜದ ಗೌರವಾಧ್ಯಕ್ಷ ಹಾಗೂ ಸರ್ವಜ್ಞ ಕುಂಬಾರ ಉತ್ಪನ್ನ ಸಹಕಾರ ಸಂಘದ ಅಧ್ಯಕ್ಷ ಶಿವರುದ್ರಪ್ಪ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕುಂಬಾರಿಕೆಯ ಮೂಲ ವೃತ್ತಿ ಇತ್ತೀಚಿನ ವರ್ಷದಲ್ಲಿ ತೀವ್ರ ಕಷ್ಟಕರವಾಗಿದ್ದು ವೃತ್ತಿಯನ್ನು ನಂಬಿ ಬದುಕಲು ಸಾಧ್ಯವಿಲ್ಲ. ಸಾಮಾನ್ಯ ವಾಗಿ ಎಲ್ಲರ ಮನೆಯಲ್ಲಿ ಹಣತೆ ಹೊರತುಪಡಿಸಿ ಬೇರಾ ವುದೇ ವಸ್ತುಗಳನ್ನು ಜನತೆ ಉಪ ಯೋಗಿ ಸುತ್ತಿಲ್ಲ. ಇದರಿಂದಾಗಿ ಕುಂಬಾರರು ಮೂಲ ವೃತ್ತಿಯಿಂದ ಅನಿವಾರ್ಯ ವಾಗಿ ವಿಮುಖ ರಾಗುತ್ತಿzರೆ ಎಂದು ವಿಷಾದಿಸಿದ ಅವರು ತಾಲೂಕಿನಾದ್ಯಂತ ಕುಂಬಾರರು ವಿವಿಧ ಗ್ರಾಮಗಳಲ್ಲಿ ಚದುರಿ ಹೋಗಿದ್ದು ೨.೫ ಸಾವಿರ ಜನಸಂಖ್ಯೆಯ ಕುಂಬಾರರು ಅಲ್ಪಸಂಖ್ಯಾತರಾಗಿ ಕಳೆದ ಹಲವು ವರ್ಷದಿಂದ ಸಮಾಜದ ಸಂಘಟನೆ ಗಾಗಿ ಸಮುದಾಯ ಭವನ ಸಹಿತ ಪ್ರಮುಖ ವೃತ್ತದಲ್ಲಿ ತ್ರಿಕಾಲ eನಿ ಸರ್ವಜ್ಞನ ಮೂರ್ತಿ ಅನಾವರಣದ ಬೇಡಿಕೆ ಇದುವರೆಗೂ ಈಡೇರಿಲ್ಲ ಈ ಬಗ್ಗೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಸಹಿತ ಸಂಸದ ರಾಘವೇಂದ್ರ ಪುರಸಭೆ, ತಾಲೂಕು ಕಚೇರಿಗೆ ಹಲವು ಬಾರಿ ಮನವಿ ಸಲ್ಲಿಸಿ ನಿರ್ಲಕ್ಷೆಗೊಳ ಪಟ್ಟಿದ್ದೇವೆ ಎಂದು ಅಳಲು ತೋಡಿಕೊಂಡರು.
ಸಮುದಾಯಕ್ಕೆ ನೀಡಲಾಗು ತ್ತಿದ್ದ ೨ ಎ ಜತಿ ಧೃಡೀಕರಣ ಪತ್ರ ಸಹ ಸ್ಥಗಿತಗೊಳಿಸಿ ಕುಂಬಾರ ಸಮಾಜ ತೀವ್ರ ನಿರ್ಲಕ್ಷಕ್ಕೊಳಗಾ ಗಿದೆ. ಈ ದಿಸೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಸಮುದಾ ಯದ ಕನಿಷ್ಠ ಬೇಡಿಕೆ ಯನ್ನು ಈಡೇರಿಸುವಂತೆ ಅಂಗಲಾಚುವುದಾಗಿ ತಿಳಿಸಿದ ಅವರು, ಈ ಕೂಡಲೇ ಸ್ಪಂದಿಸು ವಂತೆ ಮನವಿ ಮಾಡಿದರು. ತಪ್ಪಿದಲ್ಲಿ ಲೋಕಸಬಾ ಚುನಾವಣೆಯಲ್ಲಿ ಸಮುದಾಯದ ಮತದಾರರು ಸಾಮೂಹಿಕವಾಗಿ ಮತದಾನ ಬಹಿಷ್ಕರಿಸುವ ನಿರ್ಣಯ ಕೈಗೊಂಡಿರುವುದಾಗಿ ಎಚ್ಚರಿಸಿದರು.
ತಾ.ಕುಂಬಾರ ಸಮಾಜದ ಮುಖಂಡ ಚಂದ್ರಶೇಖರ್ ಮಾತನಾಡಿ, ತಾಲೂಕಿನಲ್ಲಿ ೨೫೦ ಕುಟುಂಬವಿರುವ ಕುಂಬಾರ ಸಮಾಜ ಹಲವು ವರ್ಷಗಳಿಂದ ಒಗ್ಗಟ್ಟು ಸಂಘಟನೆ ಮೂಲಕ ಸಹಕಾರ ಸಂಘವನ್ನು ಆರಂಭಿಸಿದ್ದು ಸಮಾಜದ ಸಂಘಟನೆಗಾಗಿ ಸಮುದಾಯ ಭವನ ನಿರ್ಮಾಣ ಅಗತ್ಯವಾಗಿದೆ ಎಂದ ಅವರು, ತಾಲೂಕಿನಲ್ಲಿ ಎಲ್ಲ ಸಮಾಜಕ್ಕೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಸಮುದಾಯ ಭವನ ನಿರ್ಮಾಣವಾಗಿದ್ದು ಕುಂಬಾರ ಸಮಾಜಕ್ಕೆ ಮಾತ್ರ ಅನಾಥ ಪ್ರe ಕಾಡುತ್ತಿದೆ. ನಾವು ಹಕ್ಕು ಪ್ರತಿಪಾದಿ ಸುತ್ತಿದ್ದು ಯಾರನ್ನು ಬ್ಲಾಕ್ ಮೇಲ್ ಮಾಡುವ ಉದ್ದೇಶ ಹೊಂದಿಲ್ಲ ವೈಯುಕ್ತಿಕ ಹಿತಾಸಕ್ತಿ ಹೊಂದಿಲ್ಲ ಎಂಬ ಸತ್ಯ ನಮ್ಮನ್ನಾಳುವ ಜನಪ್ರತಿನಿಧಿಗಳ ಗಮನ ಸೆಳೆಯಲು ಚುನಾವಣೆ ಬಹಿಷ್ಕಾರದ ದೃಢ ನಿರ್ದಾರಕ್ಕೆ ಬಂದಿರುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಸಮಾಜದ ಅಧ್ಯಕ್ಷ ಸಂಗಪ್ಪ, ಉಪಾಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ಯುವರಾಜ, ಖಜಂಚಿ ಮಹೇಶ್, ರೇವಣೇಶ್, ಶಿವಾನಂದಪ್ಪ ಮತ್ತಿತರರು ಉಪಸ್ಥಿತರಿದ್ದರು.