ಸಮಾಜದ ಒಳಿತಿಗೆ ಬದುಕುವುದು ಸಾರ್ಥಕ ಜೀವನ: ಜಿ.ಎಸ್. ನಟೇಶ್
ಶಿವಮೊಗ್ಗ: ಸಮಾಜದಲ್ಲಿ ಬೆರೆತು ಬದುಕಿದರೆ ಬದುಕಿಗೊಂದು ಅರ್ಥ. ಜಗತ್ತಿಗೆ ಸಂತೋಷ ನೀಡುವ ಜತೆಯಲ್ಲಿ ಅದರಲ್ಲಿ ಸಂತಸದ ಪಾಲನ್ನು ನಾವು ತೆಗೆದು ಕೊಂಡು ಬದುಕಿದರೆ ಆ ಸಂತೋಷ ಇನ್ನಷ್ಟು ಸಾರ್ಥಕ ಎಂದು ವಿದ್ವಾನ್ ಜಿ.ಎಸ್.ನಟೇಶ ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಜೀವನದ ಸಾರ್ಥಕತೆ ಎಂಬ ಉಪನ್ಯಾಸ ಮಾಲಿಕೆಯಲ್ಲಿ ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡು ಮಾತನಾಡಿದರು.
ಎಲ್ಲರೊಳಗೆ ಒಂದಾಗಿ ಬದುಕುವ ಬದುಕು ಭಗವಂತನಿಗೂ ಹಿತ. ಬದುಕಿನ ಸಾರ್ಥಕತೆಗೆ ಪ್ರಕೃತಿಯತ್ತ ದೃಷ್ಟಿ ಹರಿಸಬೇಕು. ಗಿಡ, ಮರ, ಪಶು ಪಕ್ಷಿಗಳು ಎಂದೂ ದಾರಿ ತಪ್ಪಿ ನಡೆದಿಲ್ಲ. ಪರೋಪಕಾರಕ್ಕಾಗಿಯೇ ಬದುಕುತ್ತವೆ ಎಂದು ತಿಳಿಸಿದರು.
ಮನುಷ್ಯ ಪ್ರಾಣಿ ಪಕ್ಷಿಗಳಿಂದ ಕಲಿಯಬೇಕಾಗಿದೆ. ಸ್ವಾರ್ಥವಿಲ್ಲದ ಸೇವೆ, ಸಾಮಾಜಿಕ ಕಳಕಳಿ, ಸ್ನೇಹಭಾವ ಇವೆಲ್ಲ ರೋಟರಿಯ ತತ್ತ್ವಗಳು ನಿಜವಾದ ಬದುಕಿನ ದಾರಿದೀಪಗಳು. ಮನುಷ್ಯ ಅಹಂಕಾರ ಬಿಟ್ಟು ಎಲ್ಲರೊಳ ಗೊಂದಾದರೆ ಅದೇ ಜೀವನದ ಸಾರ್ಥಕತೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಒಳ್ಳೆಯ ಉಪನ್ಯಾಸಗಳು ನಮ್ಮ ಜೀವನವನ್ನು ಸುಂದರಗೊಳಿಸುತ್ತದೆ. ಅರ್ಥಪೂರ್ಣ ವಿಚಾರಗಳು ನಮ್ಮ eನವನ್ನು ಹೆಚ್ಚಿಸುತ್ತದೆ. ಅದರಿಂದ ನಾವು ಸಂಸ್ಕಾರಯುತರಾಗುತ್ತೇವೆ ಎಂದು ಹೇಳಿದರು.
ಆಧುನಿಕ ತಂತ್ರeನದಲ್ಲಿ ಯುವ ಜನತೆ ಕಂಪ್ಯೂಟರ್ ಟಿವಿ ಮೊಬೈಲ್ಗಳನ್ನ ಬಿಟ್ಟು ಇಂತಹ ಉಪನ್ಯಾಸಗಳಲ್ಲಿ ಪಾಲ್ಕೊಂಡರೆ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಜಿ.ಎಸ್. ನಟೇಶ್ ಅವರಿಗೆ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಸದಸ್ಯರು ಇನ್ನರ್ ವೀಲ್ ಕ್ಲಬ್ಬಿನ ಸದಸ್ಯರು ಆತ್ಮೀಯವಾಗಿ ಸನ್ಮಾನಿಸಿದರು.
ಸಮಾರಂಭದಲ್ಲಿ ಡಾ. ಕಡಿದಾಳ್ ಗೋಪಾಲ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯ ಕುಮಾರ್, ಚಂದ್ರಹಾಸ್ ಪಿ ರಾಯ್ಕರ್, ಡಾ. ಗುಡದಪ್ಪ ಕಸಬಿ, ಮಾಜಿ ಅಧ್ಯಕ್ಷ ಡಾ. ಪರಮೇಶ್ವರ್ ಡಿ ಶಿಗ್ಗಾವ್, ಶ್ರೀಕಾಂತ್, ಮಹೇಶ್ ಎ ಓ, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್ ಕುಮಾರ್, ಎಂಪಿ ನಾಗರಾಜ್, ಡಾ. ಅರುಣ್, ಚಂದ್ರಶೇಖರಯ್ಯ, ಇನ್ನರ್ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ ಕುಮಾರ್, ವಿಜಯ ರಾಯ್ಕರ್, ಮಧುರ ಮಹೇಶ್, ಶ್ವೇತಾ ಹಾಗೂ ನಿರ್ದೇಶಕರು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.