ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಮಹಿಳೆಯರ ಕಷ್ಟಗಳಿಗೆ ಸಾಹಿತ್ಯ ಮzಗಬೇಕು; ಭವಣೆಗಳು ದೂರವಾಗಬೇಕು…

Share Below Link

ಶಿವಮೊಗ್ಗ : ಯುದ್ಧ ಸೇರಿದಂತೆ ಜಗತ್ತಿನ ತಲ್ಲಣ ಗಳಿಗೆ ಸಾಹಿತ್ಯ ಕಾರುಣ್ಯ ನೀಡಬೇಕು ಎಂದು ಖ್ಯಾತ ಲೇಖಕಿ ಹಾಗೂ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣ ಶೆಟ್ಟಿ ಹೇಳಿದರು.
ಅವರು ಇಂದು ಕುವೆಂಪು ವಿವಿ ಕನ್ನಡ ಪದವಿ ಅಧ್ಯಾಪಕರ ವೇದಿಕೆ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಮಹಿಳಾ ಸಮನ್ವಯ ಕಥನ-ಕವನ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ವೇದನೆಗಳು ಆರ್ತನಾದಗಳು, ಕಷ್ಟಗಳು ಮುಂದುವರೆಯುತ್ತಲೆ ಇವೆ. ವರ್ತಮಾನದಲ್ಲಿ ಅದರ ಸ್ವರೂಪಗಳು ಬದಲಾಗುತ್ತಿವೆಯೇ ಹೊರತು ಮುಗಿಯುತ್ತಿಲ್ಲ. ಈ ಎ ಕಷ್ಟಗಳಿಗೆ ಸಾಹಿತ್ಯ ಮzಗ ಬೇಕು. ಭವಣೆಗಳು ದೂರವಾಗ ಬೇಕು. ಮಹಿಳಾ ಲೇಖಕಿಯರು ತಮ್ಮೆ ಸಂಕಟಗಳಿಗೆ ಉತ್ತರ ರೂಪದಲ್ಲಿ ಮತ್ತು ಪ್ರತಿಭಟನೆಯ ರೂಪದಲ್ಲಿ ಸಾಹಿತ್ಯವನ್ನು ರಚಿಸುತ್ತಿರುವುದು ಸ್ವಾಗತದ ವಿಷಯವಾಗಿದೆ ಎಂದರು.


ಯುದ್ಧಗಳು ದೊಡ್ಡ ಶಾಪ, ಈ ಯುದ್ದ ನಿಲ್ಲಲೇಬೇಕು. ಇದರಿಂದ ಮಹಿಳೆಯರು ಕೂಡ ಸಂಕಟಕ್ಕೆ ಈಡಾಗುತ್ತಾರೆ. ಯುದ್ಧದಲ್ಲಿ ಮಡಿದ ಪತಿಯರಿಂದ ಸಂವೇದನೆ ಯನ್ನೇ ಕಳೆದುಕೊಳ್ಳುತ್ತಿzರೆ. ಜಗತ್ತು ಶಾಂತಿಯತ್ತ ಸಾಗಬೇಕಾ ಗಿದೆ. ಸ್ತ್ರೀ ಸಂವೇದನೆ ಮತ್ತಷ್ಟು ಪ್ರಜ್ವಲಗೊಳಿಸಬೇಕಾಗಿದೆ. ಜನಪದ ದಲ್ಲಿ ಹೇಳುವಂತೆ ಹೆಣ್ಣಿನ ಬದುಕು ಹುಲ್ಲಿಗೆ ಬೆಂಕಿಯನ್ನು ಒಗೆದಾಗೆ. ಇವು ಕೊನೆಯಾಗಬೇಕಾಗಿದೆ. ಹೊಸ ತಲೆಮಾರಿನ ಲೇಖಕಿಯರ ಸ್ಪಂದನೆ ಮತ್ತಷ್ಟು ಹೆಚ್ಚಾಗಬೇಕು ಎಂದರು.
ವಿಶ್ರಾಂತಕುಲಪತಿ ಹಾಗೂ ಲೇಖಕಿ ಪ್ರೊ| ಸಬಿಹಾ ಭೂಮಿಗೌಡ ಅವರು ಮಾತನಾಡಿ, ಮಹಿಳಾ ಪರ ಧ್ವನಿಗಳು ಮತ್ತಷ್ಟು ಹೆಚ್ಚಾಗಬೇಕು, ಗಟ್ಟಿಯಾಗಬೇಕು. ನಮ್ಮ ತಳಸಮುದಾಯಗಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಶಿಕ್ಷಣ ತಲುಪಬೇಕಾಗಿದೆ. ಸಾಹಿತ್ಯದ ನೆಲೆಯಲ್ಲಿ ಇದನ್ನು ಗುರುತಿಸ ಬೇಕು. ಎ ಚಳುವಳಿಗಳು ಸ್ತ್ರೀವಾದಿ ಚಿಂತನೆಯ ನೆಲೆಯಲ್ಲಿ ನೋಡಿ ವಿಮರ್ಶೆಯಾಗ ಬೇಕಾಗಿದೆ. ಸಮುದಾಯದ ಬಗ್ಗೆ ಹೆಚ್ಚು ಲೇಖನಗಳು ಬರಬೇಕಾಗಿದೆ ಎಂದರು.
ಹೆಣ್ಣಿನ ಬರಹಗಳು ಎಂದರೆ ಕೇವಲ ಗೋಳಿನ ಕಥನಗಳು ಅಲ್ಲ. ಆ ಸ್ಥಿತಿಯಿಂದ ನಾವು ಹೊರಬರಬೇಕು. ಗೋಳುಗಳನ್ನು, ಹೇಳುವುದು, ಕೇಳುವುದು ಮುಖ್ಯವಲ್ಲ, ಅದನ್ನು ಬಗೆಹರಿಸು ವುದು ಮುಖ್ಯವಾಗುತ್ತದೆ. ನಾಲ್ಕು ಗೋಡೆಗಳನ್ನು ಹೊಡೆದು ಜಗತ್ತಿನ ಭಾಗವಾಗಿ ಮಹಿಳೆಯರು ಬೆಳೆಯಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿ, ಕುವೆಂಪು ವಿವಿ ಕನ್ನಡ ಅಧ್ಯಾಪಕರ ವೇದಿಕೆಯ ಅಧ್ಯಕ್ಷೆ ಪ್ರೊ. ಸಬಿತಾ ಬನ್ನಾಡಿ, ಮಹಿಳೆ ಕೇವಲ ಚರ್ಚೆಯ ವಸ್ತುವಲ್ಲ, ಅವಳ ಜೀವನವೇ ಒಂದು ನೋಟವನ್ನಾಗಿ ಸ್ವೀಕರಿಸಬೇಕಾಗಿದೆ. ಆ ಹಂಬಲದಿಂದಲೇ ಇಂತಹ ವಿಚಾರ ಸಂಕಿರಣಗಳನ್ನು ಆಯೋಜಿಸಲಾ ಗಿದೆ. ಅಂತರಂಗದ ಸೆಲೆಯಾಗಿ ಅಪೂರ್ಣವಾಗಿದ್ದನ್ನು ಸಂಪೂರ್ಣವಾಗಿ ಎದುರಿಸ ಬೇಕಾದ ಪ್ರಮೇಯವೇ ಈ ವಿಚಾರ ಸಂಕಿರಣದ ಆಶಯ ಎಂದರು.
ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಅವಿನಾಶ್ ಮಾತನಾಡಿ, ಹೊಸ ತಲೆಮಾರಿನ ಲೇಖಕಿಯರು ಇಂದು ಗಟ್ಟಿಯಾಗಿ ಬರೆಯುತ್ತಿ zರೆ. ಬಹು ಸಂಸ್ಕೃತಿಯ ನಾಡಿನಲ್ಲಿ ಮಹಿಳೆಯರ ಸಾವಿರಾರು ಕಥನಗಳು ಹುದುಗಿವೆ. ಅವುಗಳನ್ನು ಹೊರತೆಗೆದು ಅವಕ್ಕೆ ಧ್ವನಿಯಾಗಿ ಕಿವಿಯಾಗುವುದೇ ಇಂತಹ ಸಂಕಿರಣಗಳ ಆಶಯವಾಗಿದೆ. ಅಪರಿಚಿತ ಭಾರತವನ್ನು ಪರಿಚಯಿಸಿದ್ದೇ ಅನುಭವನದ ಕಥನಗಳು. ಸಾಹಿತ್ಯದ ಜೊತೆಗೆ ಬದುಕಿನ ಪ್ರeಯು ಹೊಸತ್ತೋತರ ಧ್ವನಿಗಳು ಮತ್ತಷ್ಟು ಪ್ರಜ್ವಲಗೊಳಲಿ ಎಂಬುವುದು ನಮ್ಮ ಆಶಯ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶ್ ಮರ್‍ಗನಳ್ಳಿ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸದಸ್ಯೆ ರೇಖಾಂಬ ಟಿ.ಎಲ್., ಅಧ್ಯಾಪಕರ ವೇದಿಕೆಯ ಕಾರ್ಯದರ್ಶಿ ಡಾ. ಎಸ್.ಎಂ. ಮುತ್ತಯ್ಯ, ಲವ ಸೇರಿದಂತೆ ಹಲವರಿದ್ದರು.
ಡಾ.ಭಾರತಿ ನಿರೂಪಿಸಿದರು. ಹಾಲಮ್ಮ ಸ್ವಾಗತಿಸಿದರು. ರೇಣುಕಾ ಪೂಜರಿ ಉದ್ಘಾಟನೆಯ ಅಂಗವಾಗಿ ಚೌಡಿಕೆ ಪದ ಹಾಡಿದರು. ನಂತರ ಡಾ. ರತ್ನಮ್ಮ, ರಾಧಾ ರಂಗೇನಹಳ್ಳಿ, ಡಾ. ಪ್ರತಿಭಾ ಆರ್. ಡಾ. ದು. ಸರಸ್ವತಿ ಮುಂತಾದವರು ಗೋಷ್ಠಿಗಳಲ್ಲಿ ಮಾತನಾಡಿದರು.

Leave a Reply

Your email address will not be published. Required fields are marked *