ಸಾಹಿತ್ಯ ನಮ್ಮ ಅರಿವು ಪ್ರeಯನ್ನು ವಿಸ್ತರಿಸುತ್ತದೆ: ಡಾ| ಅವಿನಾಶ್
ಶಿವಮೊಗ್ಗ: ಸಾಹಿತ್ಯ ಓದಿದಾಗ ನಮಗೊಂದು ದೃಷ್ಟಿಕೋನ ಲಭಿಸುತ್ತದೆ ಮತ್ತು ನಮ್ಮ ಅರಿವಿನ ಪ್ರeಯನ್ನು ವಿಸ್ತರಿಸುತ್ತದೆ ಎಂದು ಸಾಹಿತಿ ಡಾ.ಅವಿನಾಶ್ ಅಭಿಪ್ರಾಯಪಟ್ಟರು.
ಈಚೆಗೆ ಶಿವಮೊಗ್ಗ ಜಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬಾಪೂಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ದೇವರಹಳ್ಳಿ ಜಿ. ಟಿ. ಮಹಾಲಿಂಗಪ್ಪ ಅವರು ಲಿಂ. ಪಾರ್ವತಮ್ಮ ಗೌಡ ಬಸಪ್ಪ ದತ್ತಿ ಆಶಯದಂತೆ ಕನ್ನಡ ಸಾಹಿತ್ಯ ಅರಿವಿನ ಮಹತ್ವ ವಿಚಾರವಾಗಿ ಮಾತನಾಡಿದರು.
ಸಾಹಿತ್ಯದ ಪಠ್ಯದಲ್ಲಿ ಸಮಾಜ ದಲ್ಲಿನ ವಿಚಾರಗಳೇ ಒಡಲಿನೊಳಗಿ ರುತ್ತೆ. ಲೇಖಕರು ತಮ್ಮ ಎದುರಿನ ಸಮಾಜದೊಂದಿಗೆ ಮಾತನಾಡುತ್ತಿರುತ್ತಾರೆ ನಮ್ಮ ಎದುರಿನ ಸಮಾಜವನ್ನು ಅರ್ಥ ಮಾಡಿಕೊಳ್ಳಲು, ವ್ಯಾಖ್ಯಾನಿಸಲು, ಪರಿಚಯಿಸಲು ಓದಿನ ಅರಿವಿಂದ ಮಾತ್ರ ಸಾಧ್ಯ ಎಂಬುದನ್ನು ವಿವರಿಸಿದರು.
ಕನ್ನಡ ಸಂಸ್ಕೃತಿ ಎಂದರೆ ಏಕ ಸಂಸ್ಕೃತಿಯಲ್ಲ. ಬೇರೆ ಬೇರೆ ಸಾಮಾಜಿಕ ಹಿನ್ನೆಲೆ ಅರಿವಾಗಲಿದೆ. ಕನ್ನಡದ ಬಹುತ್ವ ಅರಿಯಲು ಕನ್ನಡ ಸಾಹಿತ್ಯ ಓದಿನ ಅಗತ್ಯವಿದೆ. ಹೊರ ರಾಜ್ಯದವರಿಗೆ, ಬೇರೆ ಭಾಷೆ, ರಾಷ್ಟ್ರದವರಿಗೆ ಅನುವಾದದ ಮೂಲಕ ಕನ್ನಡದ ಮಹತ್ವ ಅರಿವಾಗುತ್ತದೆ. ಅದು ನಮಗೆ ಮಾತ್ರವಲ್ಲ. ಬೇರೆಯವರಿಗೂ ಅಗತ್ಯವಿದೆ ಎಂದು ಹೇಳಿದರು.
ದಿ.ಜಿ.ಬಿ. ರುದ್ರಪ್ಪ ಅವರು ಲಿಂ.ಜಿ.ಆರ್. ಪ್ರವೀಣ್ ದಿ.ಜಿ. ಬಿ. ರುದ್ರಪ್ಪ ದತ್ತಿಯ ಆಶಯದಂತೆ ಸಾಹಿತ್ಯ-ಸಂಗೀತ ಮಹತ್ವ ವಿಚಾರವಾಗಿ ಶಿರಾಳಕೊಪ್ಪ ಕದಂಬ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು, ಗಾಯಕರಾದ ಡಾ. ಟಿ.ಆರ್. ರಾಜೇಂದ್ರ ಅವರು ಸಂಗೀತ, ಸಾಹಿತ್ಯ ನಮ್ಮ ಬದುಕಿನ ಭಾಗವಾಗಿದೆ. ಕರ್ನಾಟಕ ಸಂಗೀತ ಸಾಹಿತ್ಯ ಪ್ರಧಾನ ವಾಗಿದ್ದರೆ, ಹಿಂದೂಸ್ತಾನಿ ಸಂಗೀತ ಪ್ರಧಾನ, ರಾಗ ಪ್ರಾಧಾನವಾಗಿದೆ. ದುಖಃ ಸಂತೋಷ ವಿಷಾದ, ಏಕಾಂಗಿ, ದಿಗ್ ಭ್ರಮೆ ಸಂದರ್ಭದಲ್ಲಿ ಸಂಗೀತ ಮನರಂಜನಾ ಮಾರ್ಗ ಮಾತ್ರವಲ್ಲ. ಅದು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹಾಸಿಗೆ ಹಿಡಿದವರು ಸಂಗೀತ ಕೇಳುತ್ತಾ ಜಡತ್ವವನ್ನು ದೂರವಾಗಿಸಿದ್ದನ್ನು ನೆನಪು ಮಾಡಿದ ಅವರು ರಸ ಸ್ವಾದಕ್ಕೆ ಸಂಗೀತ, ಸಾಹಿತ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ನಿರೂಪಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿ ಅಧ್ಯಕ್ಷರಾದ ಡಿ. ಮಂಜುನಾಥ ಉದ್ಘಾಟಿಸಿದರು. ಕಾಲೇಜು ಪ್ರಾಂಶುಪಾಲರಾದ ಡಾ. ವಿಷ್ಣುಮೂರ್ತಿ ಕೆ.ಎ. ಅಧ್ಯಕ್ಷತೆ ವಹಿಸಿದ್ದರು. ಡಾ.ಚನ್ನೇಶ್ ಹೊನ್ಮಾಳಿ ಉಪಸ್ಥಿತರಿದ್ದರು. ಪ್ರಸಾದ್ ಭಾವಗೀತೆ ಹಾಡಿದರು. ಉಪನ್ಯಾಸಕರಾದ ಸಕ್ರಾನಾಯ್ಕ ಸ್ವಾಗತಿಸಿದರು. ಹರೀಶ್ ನಿರೂಪಿಸಿ ದರು. ಹರೀಶ್ ವಂದಿಸಿದರು.