ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಖಿದ್ಮಾ ಫೌಂಡೇಶನ್‌ನಿಂದ ಸಾಹಿತ್ಯ ಕಾರ್ಯಕ್ರಮ ವಿವಿಧ ಕ್ಷೇತ್ರಗಳ ಸಾಧರಿಗೆ ಪ್ರಶಸ್ತಿ ಪ್ರಧಾನ …

Share Below Link

ಬೆಂಗಳೂರು: ಖಿದ್ಮಾ ಫೌಂಡೇಶನ್ ಕರ್ನಾಟಕ ಆಯೋಜನೆ ಮಾಡಿರುವ ರಾಜ್ಯ ಮಟ್ಟದ ಖಿದ್ಮಾ ಕಾವ್ಯ ಮತ್ತು ಸಾಂಸ್ಕೃತಿಕ ಸಮಾರಂಭ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವು ಕನ್ನಡ ಸಾಹಿತ್ಯ ಪರಿಷತ್‌ನ ಅಕ್ಕಮಹಾದೇವಿ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
ಎಂಪವರ್ಡ್ ಮೈಂಡ್ಸ್ ಎಡು ಸೊಲ್ಯೂಷನ್ಸ್ ಎಲ್ ಎಲ್ ಪಿ ಸಂಸ್ಥೆಯ ಸಂಸ್ಥಾಪಕರಾದ ಡಾ | ಲತಾ ಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಕವಿಗಳು ಮತ್ತು ಚಿಂತಕರಾದ ಯೂಸಫ್ ಹೆಚ್ ಬಿ ಅವರು ರಾಜ್ಯಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದರೆ, ಡಾ| ಜ್ಯೋತಿ ಶ್ರೀನಿವಾಸ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೊಹಮ್ಮದ್ ಹುಮಾಯೂನ್ ಎನ್ ನೆರವೇರಿಸಿದರು. ಮೈಬೂಬ ಸಾಹೇಬ ವೈ.ಜೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಎಂ.ಎಂ ಭಾಷ ನಂದಿ, ಚಂದ್ರಶೇಖರ್ ಸಿ.ಎನ್ , ಬಿ.ಎನ್ ಸುರೇಶ್ ಬಾಬು, ರಮೇಶ್ ಹಂಜಿ, ಶ್ರೀಮತಿ ಅಶ್ವಿನಿ ಎಸ್ ಅಂಗಡಿ , ಶ್ರೀಮತಿ ಆಶಾ ಶಿವು, ಶ್ರೀಮಂಜು ಟಿ, ಖಿದ್ಮಾ ಫೌಂಡೇಶನ್ ಅಧ್ಯಕ್ಷ ಹಾಶಿಂ ಬನ್ನೂರು ಹಾಗೂ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಡಾ|ಎಪಿಜೆ ಅಬ್ದುಲ್ ಕಲಾಂ ಸೇವಾ ರತ್ನ ಪ್ರಶಸ್ತಿ, ಖಿದ್ಮಾ ಶಿಕ್ಷಕರತ್ನ ಪ್ರಶಸ್ತಿ ಹಾಗೂ ಖಿದ್ಮಾ ಕಾವ್ಯಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾದ ಮೂವತ್ತು ಕವಿಗಳು ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕವನವಾಚನ ಮಾಡಿದರು. ಖಿದ್ಮಾ ಫೌಂಡೇಶನ್ ರಾಜ್ಯ ಸಂಚಾಲಕ ಆಮಿರ್ ಬನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕುಮಾರಿ ಪೂಜ ಸಿ.ಐ ನಿರೂಪಿಸಿ, ಕುಮಾರಿ ಜ್ಯೋತಿ ಜಿ ಮೈಸೂರು ವಂದಿಸಿದರು.