ಲಿಂ| ಹಾನಗಲ್ ಕುಮಾರ ಶಿವಯೋಗಿಗಳ ಕೊಡುಗೆ ಅಪಾರ..
ಲಿಂ| ಹಾನಗಲ್ ಕುಮಾರ ಶಿವಯೋಗಿಗಳ ಕೊಡುಗೆ ಅಪಾರ..
ಶಿಕಾರಿಪುರ: ನಾಡಿನಾದ್ಯಂತ ನೂರಾರು ಶಿವಯೋಗ ಮಂದಿರ ಗಳನ್ನು ಸ್ಥಾಪಿಸಿ, ಸಂಸ್ಕಾರ ಆಚಾರ ವಿಚಾರದ ಜತೆಗೆ ಕಾಯಕ ದಾಸೋಹದ ಪರಂಪರೆಯನ್ನು ಹುಟ್ಟಿಹಾಕಿ ಶಿವಯೋಗ ಮಂದಿರದ ಬಹು ದೊಡ್ಡ ಕೊಡುಗೆಯನ್ನು ಲಿಂ.ಹಾನಗಲ್ ಕುಮಾರ ಶಿವಯೋಗಿಗಳು ನೀಡಿzರೆ ಎಂದು ಕ್ಷೇತ್ರದ ಶಾಸಕ ಬಿ.ವೈ ವಿಜಯೇಂದ್ರ ತಿಳಿಸಿದರು.
ಪಟ್ಟಣದ ಸಾಂಸ್ಕೃತಿಕ ಭವನ ದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ವತಿಯಿಂದ ನಡೆದ ಶಿವಯೋಗ ಮಂದಿರದ ಸಂಸ್ಥಾಪಕ ಪ.ಪೂ.ಲಿಂ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ೧೫೬ನೇ ಜಯಂತಿ ಮಹೋತ್ಸವ, ಪ್ರತಿಭಾ ಪುರಸ್ಕಾರ, ಉಪನ್ಯಾಸ, ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣದಿಂದ ವಂಚಿತವಾಗಿ ಸಮಾಜದಲ್ಲಿ ಸಂಸ್ಕಾರದ ಕೊರತೆ, ದೌರ್ಜನ್ಯ ಹೆಚ್ಚಿದ ಕಾಲಘಟ್ಟದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದಲ್ಲಿ ಮಾತ್ರ ಸಮಾಜದ ಉzರ ಸಾಧ್ಯ ಎಂದರಿತು ನಾಡಿನ ವಿವಿಧೆಡೆ ಹಲವು ಶಿಕ್ಷಣ ಸಂಸ್ಥೆಯ ಜತೆಗೆ ಸಮಾಜದಲ್ಲಿ ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರಗಳ ಮೂಲಕ ತಿದ್ದಲು ಹಲವು ಶಿವಯೋಗ ಮಂದಿರಗಳನ್ನು ಸ್ಥಾಪಿಸಿದ ಲಿಂ.ಕುಮಾರ ಶಿವಯೋಗಿಗಳು ಆ ಮೂಲಕ ಕಾಯಕ ದಾಸೋಹ ತತ್ವವನ್ನು ಎಡೆ ವಿಸ್ತರಿಸಿzರೆ ಎಂದು ತಿಳಿಸಿದರು.
ಶಿವಯೋಗ ಮಂದಿರದ ಮೂಲಕ ಹಲವು ಶ್ರೇಷ್ಟ ಮಠಗಳಿಗೆ ಪೀಠಾದಿಪತಿಗಳನ್ನು ಕೊಡುಗೆ ಯಾಗಿ ನೀಡಿದ ಲಿಂ. ಶಿವಯೋಗಿಗಳು ಆ ಮೂಲಕ ಸಮಾಜದ ಉzರಕ್ಕೆ ಶ್ರಮಿಸಿzರೆ ಎಂದು ತಿಳಿಸಿ ಇದರೊಂದಿಗೆ ಅಖಿಲ ಭಾರತ ವೀರಶೈವ ಮಹಾ ಸಭಾ ಹುಟ್ಟುಹಾಕಿ ಸಮಾಜದ ಸಂಘಟನೆಗೆ ಭದ್ರ ಬುನಾದಿಯನ್ನು ಕಲ್ಪಿಸಿಕೊಟ್ಟಿzರೆ. ಸಂಗೀತದ ಮೇರು ಪ್ರತಿಭೆ ಪಂಚಾಕ್ಷರಿ ಗವಾಯಿಗಳನ್ನು ಸಂಗೀತ ಕ್ಷೇತ್ರಕ್ಕೆ ಪರಿಚಯಿಸಿ ಆ ಮೂಲಕ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿzರೆ ಇಂತಹ ಹಲವು ಪ್ರತಿಭೆಗಳನ್ನು ಸಮಾಜಕ್ಕೆ ಬಳುವಳಿಯಾಗಿ ನೀಡಿದ ಲಿಂ.ಕುಮಾರ ಶಿವಯೋಗಿಗಳು ನಾಡಿನಾದ್ಯಂತ ನೂರಾರು ಮಠ ಮಂದಿರಗಳ ಶಿಕ್ಷಣ ಸಂಸ್ಥೆ ಮೂಲಕ ಕಾಯಕ ದಾಸೋಹದ ಸಂಸ್ಕೃತಿ ಯನ್ನು ಪರಿಚಯಿಸಿzರೆ ಎಂದರು.
ವಿದ್ಯಾರ್ಥಿಗಳು ಸಾಧನೆಗೆ ನಿರಂತರ ಶ್ರಮವಹಿಸಬೇಕು, ಸಾಧನೆಗೆ ಸಮೀಪದ ಹಾದಿಯಿಲ್ಲ ಶ್ರಮದ ಮೂಲಕ ಮಾತ್ರ ಸಾಧಿಸಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಗುರುಹಿರಿಯರಲ್ಲಿ ಭಯ ಭಕ್ತಿ, ವಿನಯವಂತಿಕೆ, ಶ್ರz, ಪ್ರಾಮಾಣಿಕತೆ, ಸಾಧಿಸುವ ಛಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಲತಾಣದ ದುರುಪಯೋಗ ಹೆಚ್ಚಾಗಿ ವಿದ್ಯಾರ್ಥಿಗಳ ಸಾಧನೆಗೆ ಅಡ್ಡಿಯಾಗಿದ್ದು ಪೂರಕವಾಗಿ ಮಾತ್ರ ಬಳಸಿಕೊಳ್ಳುವಂತೆ ಎಚ್ಚರಿಸಿದರು.
ಹಾವೇರಿ ಹುಕ್ಕೇರಿ ಮಠದ ಶ್ರೀ ಮನಿಪ್ರ ಸದಾಶಿವ ಮಹಾ ಸ್ವಾಮಿಗಳು ಉಪದೇಶಾಮೃತ ನೀಡಿ, ವೀರಶೈವ ಸಮಾಜ ಸಮಷ್ಠಿ ಯಲ್ಲಿನ ಪ್ರತಿಯೊಬ್ಬರ ಹಿತಾಸಕ್ತಿ ಯನ್ನು ಬಯಸುತ್ತದೆ. ಈ ದಿಸೆಯಲ್ಲಿ ಸಮಸ್ತ ಸಮಾಜದ ಉzರಕ್ಕಾಗಿ ಸಂಸ್ಕೃತಿ ಸಂಸ್ಕಾರವನ್ನು ರೂಪಿಸಲು ಲಿಂ. ಶ್ರೀಗಳು ಶಿವಯೋಗ ಮಂದಿರದ ಮೂಲಕ ಶ್ರಮಿಸಿzರೆ ಬದುಕು ಅರ್ಥ ಪೂರ್ಣವಾಗಲು ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಯ ಕಷ್ಟಕ್ಕೆ ಸ್ಪಂದಿಸಬೇಕು ಸ್ವಾರ್ಥ ರಹಿತ ಬದುಕನ್ನು ರೂಡಿಸಿಕೊಳ್ಳಬೇಕು ಎಂದು ತಿಳಿಸಿ ಈ ದಿಸೆಯಲ್ಲಿ ಸ್ಥಳೀಯ ವೀರಶೈವ ಸಮಾಜದ ಅಧ್ಯಕ್ಷ ಈರೇಶ್ ರವರು ಸಮಾಜದ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಮಾದರಿಯಾ ಗಿzರೆ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಎನ್.ವಿ ಈರೇಶ್ ವಹಿಸಿ ಮಾತನಾಡಿದರು. ಧಾರವಾಡದ ಹ್ಯೂಮನ್ ಮೈಂಡ್ಸೆಟ್ ಕೋಚ್, ಆಪ್ತ ಸಲಹೆಗಾರ ಮಹೇಶ್ ಬಿ. ಮಾಸಾಳ್ ಹಾಗೂ ಕಾಲೇಜು ಶಿಕ್ಷಣ ಇಲಾಖೆ ವಿಶೇಷ ಅಧಿಕಾರಿ, ಸಾಧನಾ ಅಕಾಡೆಮಿ ಸಂಸ್ಥಾಪಕ ಬಿ.ಎಂ ಮಂಜುನಾಥ್ ರಿಂದ ವಿಶೇಷ ಉಪನ್ಯಾಸ ನಡೆಯಿತು. ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು. ಕಿರುತೆರೆಯ ಸುಪ್ರಸಿದ್ದ ಬಾಲ ಕಲಾವಿದೆ ಸರಿಗಮಪ ಖ್ಯಾತಿಯ ಕು.ದಿಯಾ ಹೆಗಡೆ ರವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಅಖಿಲ ಭಾರತ ವೀರಶೈವ ಮಹಿಳಾ ತಾ.ಘಟಕದ ಅಧ್ಯಕ್ಷೆ ಕಾಂಚನಾ ಕುಮಾರ್, ರಾಷ್ಟ್ರೀಯ ಕಾರ್ಯದರ್ಶಿ ನಿವೇದಿತಾ ರಾಜು, ನಗರಾದ್ಯಕ್ಷ ಗಿರೀಶ್ ಧಾರವಾಡದ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಡಿ ಭೂಕಾಂತ್ ಸಮಾಜದ ಮುಖಂಡ ಅಶ್ವಿನ್ ಪಾಟೀಲ್,ಶಶಿಧರ ಚುರ್ಚುಗುಂಡಿ, ಬಿಇಒ ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.