ಲಕ್ಷ್ಮೀನಾರಾಯಣರದ್ದ ದೀಪಸ್ತಂಭ ಆದರ್ಶದ ಬದುಕು: ಭಟ್
ಸಾಗರ: ಏಳು ದಶಕಗಳ ಕಾಲ ಯಕ್ಷಗಾನ ಅರ್ಥಧಾರಿಯಾಗಿ ದಕ್ಷಿಣೋತ್ತರ ಕನ್ನಡ ಜಿಯಲ್ಲಿ ಹೆಸರು ಮಾಡಿರುವ ಎಂ.ಆರ್. ಲಕ್ಷ್ಮೀನಾರಾಯಣರವರು ಬಹು ವಿಧದ ಅರ್ಥಧಾರಿ. ಎಲ್ಲರ ಜೊತೆ ಒದಗುವ ಕಲಾವಿದರು. ಅವರದು ದೀಪಸ್ತಂಭ ಆದರ್ಶದ ಬದುಕು ಎಂದು ಹಿರಿಯ ಯಕ್ಷಗಾನ ಅರ್ಥಧಾರಿ, ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ್ ಭಟ್ ವ್ಯಾಖ್ಯಾನಿಸಿದರು.
ತಾಲ್ಲೂಕಿನ ಮಡಸೂರು -ಲಿಂಗದಹಳ್ಳಿಯಲ್ಲಿ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಸ್ನೇಹ ಬಳಗ ಎಂ.ಎಲ್. ಹಳ್ಳಿ, ಹಾಗೂ ಯಕ್ಷ ಪ್ರಪಂಚ ಸಾಗರ, ಯಕ್ಷಶ್ರೀ ವಿಜಯ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ರಜತವರ್ಪ ಸರಣಿ ತಾಳಮದ್ದಳೆ ಕಾರ್ಯಕ್ರಮದಲ್ಲಿ ಹಿರಿಯ ತಾಳಮದ್ದಳೆ ಅರ್ಥಧಾರಿ ಎಂ. ಆರ್. ಲಕ್ಷ್ಮೀನಾರಾಯಣ ಅಮಚಿ ಅವರನ್ನು ಸನ್ಮಾನಿಸಿ, ವಿಠಲ ಶಾಸ್ತ್ರಿ ಸ್ಮೃತಿ ಗೌರವ ಸಮರ್ಪಿಸಿ ಅವರು ಮಾತನಾಡಿ, ಇಂಥವರು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂದರು.
ಎಂ.ಆರ್.ರವರು ಏಳು ದಶಕಗಳ ಕಾಲ ತಿರುಗಾಟ ಮಾಡಿ ದಾಖಲೆ ನಿರ್ಮಿಸಿzರೆ. ನಾಲ್ಕು ತಲೆಮಾರಿನ ಅರ್ಥಧಾರಿಗಳ ಜೊತೆ ಒಡನಾಟವಿದೆ. ಯಕ್ಷಗಾನದ ಸಮಗ್ರ ಅನುಭವ ಅವರಿಗಿದೆ. ಸಮಾಜದಲ್ಲಿ ಎಲ್ಲವನ್ನೂ ಕಂಡು ಉಂಡಿರುವ ಅವರು ಹಿರಿ ಕಿರಿಯ ಕಲಾವಿದರಿಗೆ ಮಾರ್ಗದರ್ಶನ ಮಾಡಬೇಕು ಎಂದರು.
ಕುರಿಯ ವಿಠಲ ಶಾಸ್ತ್ರಿ ಕುರಿತು ಪ್ರಸ್ತಾಪಿಸಿದ ಅವರು. ಉತ್ತರ ಕನ್ನಡ ಜಿಯಲ್ಲಿ ಧರ್ಮಸ್ಥಳ ಮೇಳವನ್ನು ಪೋಷಿಸಿದವರು ಶಾಸ್ತ್ರಿಯವರು. ರಂಗ ಪದ್ಧತಿ, ರಂಗ ಚಲನೆ ಮುಂತಾದ ವಿಷಯ ಕುರಿತು ಯಕ್ಷಗಾನದ ಆವಿಷ್ಕಾರ ಮಾಡಿದವರು. ಯಕ್ಷಗಾನದ ಸಮಗ್ರ ಚಿತ್ರಣ ನೀಡಿದ ಖ್ಯಾತಿ ಅವರಿಗೆ ಸೇರುತ್ತದೆ. ಅಂಥ ಸಂಪ್ರದಾಯದ ದಾಖಲೀಕರಣ ಆಗಬೇಕು ಎಂದರು.
ವಿಜಯ ಸೇವಾ ಟ್ರಸ್ಟ್‌ನ ಡಾ.ಎಚ್.ಎಸ್.ಮೋಹನ್ ಮಾತನಾಡಿ, ಮಲೆನಾಡಿನಲ್ಲಿ ಯಕ್ಷಗಾನ ಅರ್ಥಧಾರಿಯಾಗಿ ಒಳ್ಳೆಯ ಹೆಸರನ್ನು ಎಂ.ಆರ್. ಮಾಡಿzರೆ. ಶೇಣಿ, ಸಾಮಗ, ತೆಕ್ಕಟ್ಟೆ, ಜೋಶಿ ಮುಂತಾದ ದಿಗ್ಗಜ ಅರ್ಥಧಾರಿಗಳ ಎದುರು ಸಮರ್ಥ ವಾಗಿ ಅರ್ಥ ಹೇಳಿದ ಹೆಗ್ಗಳಿಕೆ ಲಕ್ಷ್ಮೀನಾರಾಯಣ ಅವರದು. ಅವರದು ಬಹುಮುಖ ಪ್ರತಿಭೆ ಎಂದು ಅಭಿನಂದಿಸಿದರು.
ಯಕ್ಷ ಪ್ರಪಂಚದ ಎಂ.ಎಲ್. ಭಟ್, ಕಟ್ಟಿನಕೆರೆ ಸೀತಾರಾಮಯ್ಯ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಲಕ್ಷ್ಮೀ ನಾರಾಯಣರಿಗೆ ಮಾಲಾರ್ಪಣೆ ಮಾಡಿ ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿದ ಎಂ.ಆರ್. ಲಕ್ಷ್ಮೀನಾರಾಯಣ ಅಮಚಿ ಮಾತನಾಡಿ, ಈ ಭಾಗದ ಸುತ್ತಮುತ್ತಲಿನ ಒಡನಾಡಿಗಳು, ಸಮುದಾಯ ನನಗೆ ಪ್ರೋತ್ಸಾಹ ನೀಡಿದ್ದರಿಂದ ಯಕ್ಷಗಾನ ಅರ್ಥಧಾರಿಯಾಗಿ ಬೆಳೆಯಲು ಕಾರಣವಾಯಿತು. ಅವರಿಗೆ ಈ ಗೌರವ ಸಲ್ಲಬೇಕು. ಒಬ್ಬನಿಂದ ಯಾವುದೇ ಸಾಧನೆ ಸಾಧ್ಯವಿಲ್ಲ. ದಕ್ಷಿಣ ಕನ್ನಡದಲ್ಲಿ ಉತ್ತಮ ಸ್ನೇಹಿತರಿದ್ದು, ಸಮರ್ಥ ಅರ್ಥಧಾರಿಯಾಗಲು ಅವರ ಸಹಕಾರವನ್ನು ಮರೆಯುವಂತಿಲ್ಲ ಎಂದರು.
ಸ್ನೇಹ ಬಳಗದ ಅಧ್ಯಕ್ಷ ರಾಜಕುಮಾರ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಮಾಮಹೇಶ್ವರ ಸ್ವಾಗತಿಸಿದರು. ಎಂ.ಎಲ್.ಭಟ್ ವಂದಿಸಿದರು.