ಮಣ್ಣಿನ ಗಣಪನ ಬಳಸೋಣ; ಪರಿಸರಸ್ನೇಹಿ ಗಣೇಶೋತ್ಸವ ಆಚರಿಸೋಣ….
ಚಿಕ್ಕ ಮಕ್ಕಳಿಂದ ಹಿಡಿದು ಯುವಕರು ಹಿರಿಯರಿಗೆ ಅಚ್ಚುಮೆಚ್ಚು ವಿಘ್ನವಿನಾಶಕ ಗಣೇಶ. ಸಣ್ಣ ಕಣ್ಣು ಉದ್ದ ಸೊಂಡಿಲು ಮೊರದಗಲದ ಕಿವಿ ಮೂಷಿಕ ವಾಹನ ಡೊಳ್ಳುಹೊಟ್ಟೆ ಅದಕ್ಕೆ ಬೆಲ್ಟ್ನಂತೆ ಸುತ್ತಿಕೊಂಡಿರುವ ಹಾವು…. ಒಂದು ರೀತಿಯ ವಿಶೇಷವಾಗಿ ಕಾಣುವ ಆದಿಪೂಜಿತ ಗಜವದನ… ಗಣಪನನ್ನು ವರ್ಷಕೊಮ್ಮೆ ಬರಮಾಡಿ ಕೊಂಡು ವಿವಿಧ ವಿನ್ಯಾಸದ, ಆಕರ್ಷಕ ಬಣ್ಣಗಳಿಂದ ತಯಾರಿಸಿದ ಗಣೇಶನನ್ನು ಮೆರವಣಿಗೆ ಮಾಡಿಕೊಂಡು ತಂದು ಮನೆ ಮನೆಗಳಲ್ಲಿ ಬೀದಿ ಬೀದಿಗಳಲ್ಲಿ ಪೆoಡಾಲ್ ಗಳನ್ನು ಹಾಕಿ ವಿಜೃಂಭಣೆಯಿಂದ ಅಲoಕರಿಸಿ ಎಲ್ಲರೂ ಸೇರಿ ಆಚರಿಸುವ ಉತ್ಸವ ಇದಾಗಿದೆ.

ಬಿಟ್ರೀಷರನ್ನು ನಮ್ಮ ದೇಶವನ್ನು ಆಳುವಾಗ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದರು.ಅಂಥಹ ಸಂದರ್ಭದಲ್ಲಿ ನಾವು ಭಾರತೀಯರು ಒಗ್ಗಟಾಗಬೇಕಿತ್ತು.ಒಗ್ಗಟ್ಟಿನಿoದ ಸ್ವಾತಂತ್ರ್ಯ ಹೋರಾಟಕ್ಕಿಳಿಯಬೇಕಿತ್ತು.ಆಗ ಲೋಕಮಾನ್ಯ ಬಾಲಗಂಗಾಧರ ತಿಲಕರು ದೇಶದ ವಿವಿಧ ಧರ್ಮ ಜತಿ ಭಾಷೆಯ ಜನರನ್ನು ಒಂದೆಡೆ ಸೇರಿಸುವ ಸಲುವಾಗಿ ಗಣೇಶೋತ್ಸವ ಆಚರಣೆಯನ್ನು ಆರಂಭಿಸಿದರು.ನೂರಾರು ವರ್ಷಗಳಿಂದ ಈ ಧಾರ್ಮಿಕ ಆಚರಣೆ ನಡೆದುಕೊಂಡು ಬಂದಿದೆ.
ಧಾರ್ಮಿಕವಾಗಿ ಸಾಂಸ್ಕೃತಿಕವಾಗಿ ಎಲ್ಲರನ್ನು ಈ ಹಬ್ಬಗಳು ಒಂದು ಗೂಡಿಸುತ್ತವೆ. ದೇಶದಾದ್ಯಂತ ಗಲ್ಲಿ ಗಲ್ಲಿಗಳಲ್ಲಿ ಯುವಕ ಸಂಘಗಳು ಮಕ್ಕಳು ಸಹ ಗಣೇಶ ವಿಗ್ರಹವನ್ನು ಪ್ರತಿಷ್ಟಾಪಿಸುತ್ತಾರೆ. ಮಹಾನಗರಗಳಲ್ಲಿ ಅತಿ ಎತ್ತರದ ಗಣಪನನ್ನು ಕೂರಿಸುತ್ತಾರೆ. ಬಹುದಿನಗಳು, ತಿಂಗಳು ಗಟ್ಟಲೆ ಇಟ್ಟು ಪೂಜಿಸುವ ವಾಡಿಕೆಯು ಇದೆ. ಇವೆಲ್ಲದರ ನಡುವೆ ನಾವು ನಮ್ಮ ಪರಿಸರ ಸoರಕ್ಷಣೆಯ ಬಗ್ಗೆಯು ಜಗೃತರಾಗಬೇಕಿದೆ.
ಈ ಉತ್ಸವದಲ್ಲಿ ಬಳಸುವ ಧ್ವನಿವರ್ಧಕ ಗಳಿಂದ ಶಬ್ದಮಾಲಿನ್ಯ ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ, ಗಣೇಶ ಮೂರ್ತಿಗೆ ಬಳಸುವ ಬಣ್ಣಗಳು, ಪೂಜ ಸಾಮಾಗ್ರಿಗಳನ್ನು ನೀರಿಗೆ ಬಿಡುವುದರಿಂದ ಜಲಮಾಲಿನ್ಯ ಉoಟಾಗುತ್ತದೆ. ಈ ಬಗ್ಗೆ ಆಕ್ಷೇಪಣೆಗಳು ವ್ಯಕ್ತವಾಗುತ್ತಿರುವುದು ಸ್ವಾಗತಾರ್ಹ. ರಾಜ್ಯ ಮಾಲಿನ್ಯ ನಿಯಂತ್ರಣ ಮoಡಳಿಯ ಅಧ್ಯಯನವೂ ಇದನ್ನು ದೃಢಪಡಿಸಿದೆ.
ಗಣೇಶನ ವಿಗ್ರಹಗಳಿಗೆ ಬಳಸುವ ಬಣ್ಣಗಳಲ್ಲಿ ಕಬ್ಬಿಣ ಕ್ಯಾಡ್ಮಿಯಂ, ಕ್ರೋಮಿಯಂ, ಸೀಸ, ನಿಕ್ಕಲ್, ಜಿಂಕ್ ತಾಮ್ರ ಮೊದಲಾದ ಲೋಹಗಳಿವೆ .ಇದರಲ್ಲಿ ಸೀಸ ಅತ್ಯಂತ ವಿಷಕಾರಿ. ಇದರಿಂದ ಜಲಮೂಲಗಳು ಮಲಿನಗೊಳ್ಳುತ್ತವೆ.ಜಲಜೀವರಾಶಿಗಳ ಮೇಲೆ ದುಷ್ಪರಿಣಾಮ ಬೀರುತ್ತವೆ.
ಈ ಹಿನ್ನಲೆಯಲ್ಲಿ ಜಲಮೂಲಗಳ ಸಂರಕ್ಷಣೆಗೆ ಮಹತ್ವದ ಹೆಜ್ಜೆಯಿಟ್ಟಿರುವ ಪರಿಸರ ನಿಯಂತ್ರಣ ಮಂಡಳಿ ಪ್ಲಾಸ್ಟರ್ ಆಫ಼್ ಪ್ಯಾರೀಸ್ ನಿಂದ ತಯಾರಿಸಿದ ಗಣೇಶ ವಿಗ್ರಹಗಳ ಬಳಕೆಯನ್ನು ಬಹಳ ವರ್ಷಗಳಿಂದ ನಿಷೇದಿಸಿದೆ.
ಅತಿಯಾದ ಶಬ್ದಮಾಲಿನ್ಯ ಉಂಟು ಮಾಡುವ ಧ್ವನಿವರ್ಧಕಗಳ ಬಳಕೆಯಿಂದ ಹೃದಯಾಘಾತ ಆಗಿರುವ ಘಟನೆಗಳು ಸಂಭವಿಸಿರುವುದರಿಂದ ಡಿಜೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸ್ಥಳೀಯ ವಾದ್ಯಗಳು ಡೊಳ್ಳು ಕುಣಿತ, ಕಂಸಾಳೆ ನೃತ್ಯ , ಇತ್ಯಾದಿ ಜನಪದ ಕಲೆ ವಾದ್ಯಗಳನ್ನು ಬಳಸುವುದುದರಿoದ ನಮ್ಮ ಜನಪದ ವನ್ನು ಜೀವಂತವಾಗಿರಿಸಬಹುದು.
ಹಬ್ಬವನ್ನು ಪರಿಸರಸ್ನೇಹಿಯಾಗಿ ಆಚರಿಸೋಣ, ಸಾದಾ ಜೇಡಿಮಣ್ಣಿನಿಂದ ತಯಾರಿಸಿದ ಪುಟ್ಟ ಗಣೇಶ ಮೂರ್ತಿಗಳನ್ನಿಟ್ಟು ಪೂಜಿಸೋಣ. ಬಣ್ಣ ಹಚ್ಚಲೇಬೇಕೆoದರೆ ನೈಸರ್ಗಿಕ ಬಣ್ಣಗಳನ್ನು ಹಚ್ಚಿದ ವಿಗ್ರಹಗಳನ್ನು ಪೂಜಿಸಿ. ಸಾಮೂಹಿಕವಾಗಿ ನಡೆಸುವ ಗಣೇಶನ ಪೂಜಚಪ್ಪರಕ್ಕೆ ಬಾಳೆದಿಂಡು ಬಾಳೆ ಎಲೆ, ತೆಂಗಿನಗರಿ, ಮಾವಿನಸೊಪ್ಪು ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸೋಣ. ಶುದ್ಧ ನೀರಿನ ಮೂಲಗಳಲ್ಲಿ ಗಣೇಶ ವಿಸರ್ಜನೆ ಮಾಡಬೇಡಿ. ಮಣ್ಣಿನ ಗಣೇಶ ವಿಗ್ರಹವನ್ನು ಒಂದು ಬಕೆಟ್ ಅಥವಾ ಬಾವಿ ಸಣ್ಣ ಕೆರೆಗಳಲ್ಲಿ ಸೂಚಿತ ಕೆರೆಗಳಲ್ಲಿ ವಿಸರ್ಜಿಸೋಣ.
ಹಬ್ಬಗಳು ಆಡಂಬರದ ಪ್ರದರ್ಶನಕ್ಕಲ್ಲ. ಸೌಹಾರ್ಧತೆಯ ಸಾರುವುದಕ್ಕೆ. ಸಂಸ್ಕೃತಿಯನ್ನು ಪ್ರತಿಬಿಂಬಿಸುವುದಕ್ಕೆ ಆಚರಿಸಲಾಗುತ್ತದೆ.ಮರೆಯದಿರಿ ಪರಿಸರ ಸ್ನೇಹಿ ಗಣೇಶ ವಿಗ್ರಹವನ್ನು ಪೂಜಿಸೋಣ.ಪರಿಸರವನ್ನು ಸಂರಕ್ಷಿಸೋಣ.
ಸರ್ವರಿಗೂ ವಿಘ್ನನಿವಾರಕ ಸನ್ಮಂಗಳವನ್ನುoಟು ಮಾಡಲಿ.
ಶ್ರೀಮತಿ.ಅನಿತಸೂರ್ಯ, ಶಿಕ್ಷಕಿ ಸಾಹಿತಿ.ಶಿವಮೊಗ್ಗ.


