ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಮಾತೃ ಭಾಷೆಯನ್ನು ಪ್ರೀತಿಸೋಣ… ಇತರ ಭಾಷೆಯನ್ನು ಗೌರವಿಸೋಣ…

Share Below Link

ಅನಿತಾಸೂರ್ಯ, ಶಿಕ್ಷಕಿ, ಶಿವಮೊಗ್ಗ.
ಮಾತೃಭಾಷೆ ಅಥವಾ ತಾಯಿ ನುಡಿ ಎಂದರೆ ಒಂದು ಮಗು ತನ್ನ ಬಾಲ್ಯದಲ್ಲಿ ಮುಖ್ಯವಾಗಿ ತಾಯಿ ಮತ್ತು ಹೆತ್ತವರಿಂದ ಪ್ರಥಮವಾಗಿ ಕಲಿಯುವ ಭಾಷೆ. ಇದು ಮಗುವಿನ ವ್ಯಕ್ತಿತ್ವ, ಸಂಸ್ಕೃತಿ ಮತ್ತು ಸಾಮಾಜಿಕ ಗುರುತನ್ನು ರೂಪಿಸುವ ಸ್ವಾಭಾವಿಕ ಭಾಷೆಯಾಗಿದೆ. ಆಲೋಚನೆ ಹಾಗೂ ಭಾವನೆ ಗಳನ್ನು ವ್ಯಕ್ತಪಡಿಸುವ ಅತ್ಯಂತ ಸಹಜ ಮಾಧ್ಯಮವಾಗಿದೆ.
ಫೆ.೨೧ನ್ನು ಪ್ರಪಂಚದಾದ್ಯಂತ ವಿಶ್ವ ಮಾತೃ ಭಾಷೆ ದಿವಸವಾಗಿ ಆಚರಿಸಲಾ ಗುತ್ತಿದೆ. ಬಹುಭಾಷೆ ಮತ್ತು ಬಹುಸಂಸ್ಕೃತಿ ಯನ್ನು ಪ್ರತಿಬಿಂಬಿಸಲು ಮತ್ತು ಪ್ರೋತ್ಸಾಹಿಸಿ ಉಳಿಸಲು ಈ ಆಚರಣೆ ಯನ್ನು ಮಾಡಲಾಗುತ್ತಿದೆ. ೧೯೯೯ರಲ್ಲಿ ಮೊದಲ ಬಾರಿಗೆ ಇದನ್ನು ಯುನೆಸ್ಕೋ ಘೋಷಿಸಿತು. ಇದರ ಮುಂದುವರೆದ ಭಾಗವಾಗಿ ವಿಶ್ವಸಂಸ್ಥೆಯು ೨೦೦೮ನ್ನು ವಿಶ್ವ ಭಾಷೆಗಳ ವರ್ಷ ಎಂದು ಆಚರಿಸಿತು. ೨೦೦೦ನೆಯ ಇಸವಿಯಿಂದ ಪ್ರತಿ ವರ್ಷ ವಿಶ್ವ ಮಾತೃ ಭಾಷೆ ದಿವಸವನ್ನು ಆಚರಿಸಲಾಗುತ್ತಿದೆ.
ವಿಶ್ವ ಮಾತೃ ಭಾಷೆ ದಿವಸದ ಹಿನ್ನೆಲೆ: ೧೯೪೭ರಲ್ಲಿ ಭಾರತದಿಂದ ಪಾಕಿಸ್ತಾನ ವಿಭಜನೆಗೊಂಡಾಗ ಅಲ್ಲಿ ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನ ಎಂಬ ಎರಡು ಭೂ ಪ್ರದೇಶಗಳು ರಚನೆಯಾದುವು. ಪೂರ್ವ ಪಾಕಿಸ್ತಾನ ವೆಂದರೆ ಇಂದಿನ ಬಾಂಗ್ಲಾದೇಶ, ಪಶ್ಚಿಮ ಪಾಕಿಸ್ತಾನ ವೆಂದರೆ ಈಗಿರುವ ಪಾಕಿಸ್ತಾನ. ಪೂರ್ವ ಪಾಕಿಸ್ತಾನದ ಮಾತೃಭಾಷೆ ಬಂಗಾಳಿಯಾಗಿತ್ತು. ಪಶ್ಚಿಮ ಪಾಕಿಸ್ತಾನದ ಮಾತೃಭಾಷೆ ಉರ್ದು ಆಗಿತ್ತು. ೧೯೪೮ರಲ್ಲಿ ಪಶ್ಚಿಮ ಪಾಕಿಸ್ತಾನ ಮಾತೃಭಾಷೆ ಉರ್ದುವನ್ನು ರಾಷ್ಟ್ರಭಾಷೆ ಯೆಂದು ಘೋಷಿಸಿತು.
ಇದರಿಂದ ಪೂರ್ವ ಪಾಕಿಸ್ತಾನದ ಬಂಗಾಳಿ ಭಾಷೆಯನ್ನು ಮಾತಾನಾಡುತ್ತಿ ದ್ದವರು ತುಂಬ ಅಸಮಾಧಾನ ಗೊಂಡರು. ಉರ್ದುವನ್ನು ರಾಷ್ಟ್ರಭಾಷೆ ಮಾಡಿದ್ದನ್ನು ವಿರೋಧಿಸಿ ಪ್ರತಿಭಟನೆ ಮಾಡತೊಡಗಿದರು. ಆಗ ಪಾಕ್ ಇವರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು. ಪಾಕ್ ಸರ್ಕಾರದ ನಿಷೇಧವನ್ನು ಮೀರಿ ೨೧-೦೨-೧೯೫೨ ರಂದು ಢಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡತೊಡಗಿದರು.
ಪ್ರತಿಭಟನೆ ತೀವ್ರ ಸ್ವರೂಪ ಪಡೆದಾಗ, ಪಾಕ್ ಸರ್ಕಾರದ ಆದೇಶದಂತೆ ಪೋಲಿಸರು ಪ್ರತಿಭಟನಾ ಕಾರರ ಮೇಲೆ ಗುಂಡು ಹಾರಿಸಿದಾಗ ಢಾಕಾ ವಿಶ್ವವಿದ್ಯಾನಿಲಯದ ಕೆಲವು ವಿದ್ಯಾರ್ಥಿಗಳು ಅಸುನೀಗಿದರು. ಬಾಂಗ್ಲಾ ದೇಶದ ಮಾತೃಭಾಷೆ ಬಂಗಾಳಿಯನ್ನು ಆಡಳಿತ ಭಾಷೆಯನ್ನಾಗಿ ಮಾಡಬೇಕೆಂದು ಪ್ರಾಣತೆತ್ತ ವಿದ್ಯಾರ್ಥಿಗಳ ನೆನಪಿಗಾಗಿ ಆ ದಿನವನ್ನು ವಿಶ್ವಸಂಸ್ಥೆಯ ಯುನೆಸ್ಕೊವು ವಿಶ್ವ ಮಾತೃ ಭಾಷೆ ದಿವಸವನ್ನಾಗಿ ಆಚರಿಸುವಂತೆ ಘೋಷಿಸಿತು.

  • ಮಾತೃ ಭಾಷೆಗಳ ಸಂರಕ್ಷಣೆ ಮತ್ತು ಪ್ರಚಾರ ವಿಶ್ವ ಮಾತೃ ಭಾಷಾದಿನದ ಉzಶವಾಗಿದೆ.
  • ಭಾಷಾ ವೈವಿಧ್ಯತೆ ಮತ್ತು ಬಹುಭಾಷಾ ಸಂಸ್ಕೃತಿಯನ್ನು ಉತ್ತೇಜಿಸುವುದಾಗಿದೆ.
  • ವಿಶ್ವದಾದ್ಯಂತ ಭಾಷೆಗಳ ಮಲ್ಯವನ್ನು ಒತ್ತಿ ಹೇಳುವುದು
    ವಿಶ್ವ ಮಾತೃಭಾಷಾ ದಿನದ ಮಹತ್ವ:
    -ಉತ್ತಮ ಕಲಿಕೆ ಮತ್ತು ಗ್ರಹಿಕೆಯನ್ನು ಉತ್ತೇಜಿಸಲು ಶಾಲೆಗಳಲ್ಲಿ ಮಾತೃಭಾಷೆಯ ಬಳಕೆಯನ್ನು ಉತ್ತೇಜಿಸುತ್ತದೆ.
    -ಅಳಿವಿನಂಚಿನಲ್ಲಿರುವ ಭಾಷೆಗಳ ಪುನರುಜ್ಜೀವನ ಮತ್ತು ಅವುಗಳ ಪುನರುಜ್ಜೀವನ ವನ್ನು ಪ್ರತಿಪಾದಿಸುತ್ತದೆ.
    ಇತರ ಸಮುದಾಯದ ಭಾಷಾ ಸಂಪ್ರದಾಯಗಳನ್ನು ಪಾಲಿಸಲು ಮತ್ತು ರವಾನಿಸಲು ಸಹಾಯ ಮಾಡುತ್ತವೆ.
    -ಸ್ಥಳೀಯ ಜನಸoಖ್ಯೆಯ ಭಾಷಾ ಹಕ್ಕುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.
    ಮಾತೃಭಾಷೆ ಹೃದಯದಭಾಷೆ. ಬೇರೆ ಭಾಷೆಯನ್ನು ಕೇಳಿದಾಗ ನಾವು ಮೊದಲು ಅರ್ಥೈಸಿ ಕೊಳ್ಳುವುದು. ಎದೆಗಿಳಿಸಿ ಕೊಳ್ಳುವುದು ನಮ್ಮ ಮಾತೃಭಾಷೆಯಲ್ಲಿಯೆ.
    ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡುವುದು. ಮಗುವಿನ ಸರ್ವತೋಮುಖ ಅಭಿವೃದ್ಧಿ ಹಾಗೂ ಕಲಿಕೆಯ ಗುಣಮಟ್ಟ ಹೆಚ್ಚಿಸಿ eನ ವನ್ನು ಶಾಶ್ವತ ವಾಗಿರಿಸಲು ಸಾಧ್ಯವಾಗುತ್ತದೆ.
    ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಹೇಳುತ್ತಾರೆ. ಮಾತೃಭಾಷೆ ಎಶ್ಟೊoದು ಆಪ್ತ ಮತ್ತು ಆತ್ಮೀಯ.ನಮ್ಮ ಆಲೋಚನೆಗೂ ಮತ್ತು ಅಭಿವ್ಯಕ್ತಿ ಗೂ ಮಧ್ಯೆ ಕoದರವೇ ಇರುವುದಿಲ್ಲ. ಮಾತೃಭಾಷೆ ನಮ್ಮ ಸಂಸ್ಕೃತಿ ಹಾಗೂ ಅಸ್ಮಿತೆಯ ಪ್ರತೀಕವಾಗಿದೆ.ಇತರೆ ಭಾಷೆಯನ್ನು ಕಲಿಯೋಣ. ಗೌರವಿಸೋಣ.ನಮ್ಮ ಮಾತೃಭಾಷೆಯನ್ನು ನಿರoತರ ಕಲಿಯುತ್ತಾ ಬಳಸುತ್ತಾ, ಜೀವಂತವಾಗಿರಿಸೋಣ. ಭಾಷೆ ಉಳಿದರೆ ಸಂಸ್ಕೃತಿ ಸಂಪ್ರದಾಯ ಗಳು ಉಳಿಯುತ್ತವೆ.

Leave a Reply

Your email address will not be published. Required fields are marked *