ಲೇಖನಗಳು

ಯುವಕರೇ ಮೈಮರೆಯದಿರಿ; ನಮ್ಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ಹೋಳಿ ಹಬ್ಬವನ್ನು ಆಚರಿಸೋಣ…

Share Below Link

ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಯುವ ಸಮೂಹವು ಯಾವುದೇ ಜತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ.
ಪ್ರತಿಯೊಂದು ಹಬ್ಬವೂ ತನ್ನದೇ ಆದ ಆಚಾರ ಮತ್ತು ಸಂಪ್ರದಾಯ ಗಳನ್ನು ಹೊಂದಿರುತ್ತದೆ. ಅದೇ ರೀತಿ ಹೋಳಿ ಬಣ್ಣಗಳ ಹಬ್ಬವಾಗಿದ್ದು, ದೂರದ ಊರಿನವರು ತಮ್ಮ ತಾಯ್ನಾಡಿಗೆ ಬಂದು ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವನ್ನು ವಸಂತ ಮಾಸದಲ್ಲಿ ಆಚರಿಸಲಾ ಗುತ್ತದೆ. ಚಳಿಗಾಲದ ಕೊನೆಯನ್ನು ವಸಂತದ ಆಗಮನವನ್ನು ಸಾರುವ ಹಬ್ಬವಾಗಿದೆ. ಜನರು ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ.
ಹೋಳಿ ಹಬ್ಬದ ದಿನದಂದು ಮಕ್ಕಳಿಂದ ದೊಡ್ಡವರ ತನಕ ಸಂಭ್ರಮ ಸಡಗರದಿಂದ ಕುಣಿದು ಕುಪ್ಪಳಿಸುತ್ತಾರೆ. ಈ ಹಬ್ಬದ ಆಚರಣೆಯ ದಿನ ಕಾಮನ ಸುಂದರ ಪ್ರತಿಮೆ ಮಾಡಿ ಅದನ್ನು ಶೃಂಗರಿಸಿ ಊರಿನ ಕಾಮನ ಕಟ್ಟೆಯ ಮೇಲೆ ಚಪ್ಪರ ಕಟ್ಟಿ ಇಡುತ್ತಾರೆ. ಕಾಮನ ಮುಂದೆ ಮಂಗಳ ವಾದ್ಯಗಳನ್ನು ಊದುತ್ತಾರೆ ಅದಲ್ಲದೆ ಪರಸ್ಪರ ಬೈಗುಳ, ಬಣ್ಣದ ನೀರು, ಸಗಣಿಯ ಗಂಜಲಗಳನ್ನು ಎರಚುತ್ತಾರೆ.
ಹೋಳಿಯ ಇತಿಹಾಸ:
ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದನು. ಆತ ದುರ ಹಂಕಾರಿಯೂ ಹಾಗೂ ಕ್ರೂರಿಯೂ ಆಗಿದ್ದನು. ತಾರಕಾಸುರ ತನಗೆ ಸಾವು ಬರದಿರಲಿ ಎಂದು ತಪಸ್ಸು ಮಾಡಿದ್ದನು. ಆಗ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ಆಗ ನನಗೆ ಮರಣ ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಎಂಬ ವರವನ್ನು ಕೇಳಿದ್ದನು. ತಾರಕಾಸುರನ ತಪ್ಪಸ್ಸನ್ನು ಮೆಚ್ಚಿ ಬ್ರಹ್ಮ ವರವನ್ನು ಕೊಡುತ್ತಾನೆ. ಆಗ ತನಗೆ ವರ ಸಿಕ್ಕಿದೆ ಎಂದು ತಾರಕಾಸುರ ಮೆರೆಯುತ್ತಿರುತ್ತಾನೆ.
ಇತ್ತ ಭೋಗ ಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾ ಗಮ ಹೊಂದಲು ಸಾಧ್ಯವಿರಲಿಲ್ಲ. ಆಗ ದೇವತೆಗಳು ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ ಅಂದರೆ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದ್ದರು. ಈ ವೇಳೆ ಭೋಗ ಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದುಃಖದಿಂದ ಶಿವನಲ್ಲಿ ಪತಿಭಿಕ್ಷೆ ಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿ ಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕ ಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿ ಮೆಯಂದು. ಆದ್ದರಿಂದ ಈ ದಿನವನ್ನು ಕಾಮನ ಹುಣ್ಣಿಮೆಯಾಗಿ ಆಚರಿಸಲ್ಪಡುತ್ತದೆ.
ಮತ್ತೊಂದು ಕಥೆ ಹೀಗಿದೆ:
ಹಿರಣ್ಯಕಶ್ಯಪುವಿನ ಸಹೋದರಿ ಹೋಲಿಕಾ ಇದ್ದಳು. ಹಿರಣ್ಯಕಶ್ಯಪು ತನ್ನ ರಾಜ್ಯದಲ್ಲಿ ದೇವರನ್ನು ಪೂಜಿ ಸುವುದನ್ನು ನಿಷೇಧಿಸಿದ್ದು, ತನ್ನನ್ನೇ ದೇವರೆಂದು ಪೂಜಿಸುವಂತೆ ಆದೇಶಿ ಸಿದ್ದನು. ಆದರೆ ಆತನ ಮಗ ಪ್ರಹ್ಲಾದ ವಿಷ್ಣು ದೇವರ ಪರಮ ಭಕ್ತನಾಗಿದ್ದನು. ತಾನು ಎಷ್ಟೇ ಪ್ರಯತ್ನ ಮಾಡಿದರು ಮಗನಿಂದ ವಿಷ್ಣು ದೇವರ ಆರಾಧಾನೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಕೊನೆಗೆ ಹಿರಣ್ಯಕಶ್ಯಪು ತನ್ನ ಮಗನನ್ನು ದಂಡಿಸಲು ತೀರ್ಮಾನಿಸುತ್ತಾನೆ. ಆಗ ಬೆಂಕಿಯು ಸುಡದಂತೆ ವರವನ್ನು ಪಡೆದಿದ್ದ ತನ್ನ ತಂಗಿ ಹೋಲಿಕಾಳ ಸಹಾಯವನ್ನು ಹಿರಣ್ಯಕಶ್ಯಪು ಪಡೆಯುತ್ತಾನೆ. ಹಿರಣ್ಯಕಶ್ಯಪು ತನ್ನ ಮಗನನ್ನು ಆಕೆಯ ತೊಡೆಯ ಮೇಲೆ ಕೂರಿಸಿಕೊಳ್ಳುವಂತೆ ತಂಗಿಯಲ್ಲಿ ಕೇಳಿದನು. ಹೋಲಿಕಾ ಅಣ್ಣನ ಆeಯಂತೆ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿ ಕೊಳ್ಳುತ್ತಾಳೆ. ಆದರೆ ಈ ಪಾಪ ಕೃತ್ಯವನ್ನು ಹೋಲಿಕಾ ಮಾಡಿದ್ದರಿಂ ದಾಗಿ, ಆಕೆಯ ವರ ನಿಷ್ಫಲವಾಗು ತ್ತದೆ. ಇದರಿಂದ ಹೋಲಿಕಾ ಸುಟ್ಟು ಬೂದಿಯಾಗು ತ್ತಾಳೆ. ಪ್ರಹ್ಲಾದ ಸುರಕ್ಷಿತವಾಗಿ ಬೆಂಕಿಯಿಂದ ಹೊರ ಬರುತ್ತಾನೆ. ಅದಕ್ಕಾಗಿ ಪ್ರತೀ ವರ್ಷ ಹೋಲಿಯ ಮುನ್ನ ಹಿಂದೂ ಮನೆ ಗಳಲ್ಲಿ ಹೋಲಿಕನನ್ನು ಸುಡುತ್ತಾರೆ.
ಈ ಹಬ್ಬ ಮನೆಯ ಪ್ರತಿಯೊಬ್ಬ ಸದಸ್ಯರನ್ನು ಒಂದುಗೂಡಿಸುತ್ತದೆ ಮತ್ತು ಹಬ್ಬದ ಸಡಗರವನ್ನು ಪ್ರತಿಯೊಬ್ಬರಲ್ಲಿ ತುಂಬುತ್ತದೆ. ಕೆಟ್ಟದ್ದು ಒಳ್ಳೆಯದರ ಮುಂದೆ ತಲೆಬಾಗ ಲೇಬೇಕು ಎಂಬ ಸಂದೇಶವನ್ನು ಹೋಳಿ ಹಬ್ಬ ಸಾರುತ್ತದೆ. ದುಷ್ಕೃತ್ಯ ಗಳು ದೇವರ ಶಕ್ತಿಯ ಎದುರು ಎಂದಿಗೂ ಜಯವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಸಾರ ಈ ಹಬ್ಬದ ಹಿಂದಿದೆ. ಹೋಲಿಕಳಂತೆ ಕೆಟ್ಟ ಶಕ್ತಿಗಳು, ದುಷ್ಟ ಆಲೋಚನೆಗಳು ನಾಶವಾಗುತ್ತದೆ.
ನಮ್ಮಲ್ಲಿ ಹೆಚ್ಚಿನವರು ಪ್ರತಿ ವರ್ಷ ಹೋಳಿ ಆಚರಿಸುತ್ತಾರೆ, ಆದರೆ ನಾವು ಅದನ್ನು ಏಕೆ ಆಚರಿಸುತ್ತೇವೆ ಎಂದು ಅರಿವು ನಮಗಿರುವುದಿಲ್ಲ.
ಹೋಳಿ ಹಬ್ಬದ ಆಚರಣೆಗೂ ಒಂದು ನಂಬಿಕೆ ಇದೆ. ಕಾಮನ ದಹನ ಮಾಡುವ ಸಮಯದಲ್ಲಿ ಕಾಮಣ್ಣನಿಗೆ ಧರಿಸಿದ ಜನಿವಾರವನ್ನು ಮದುವೆ ಆಗದ ಯುವಕರು ಧರಿಸಿದರೆ ಆ ವರ್ಷದಲ್ಲಿ ಮದುವೆ ಆಗುತ್ತದೆ ಎಂದು ನಂಬಿಕೆ ಇದೆ ಮತ್ತು ಕಾಮನ ದಹನ ಮಾಡಿದಾಗ ಬೆಂಕಿ ನಿಂದಿಸಲು ವರುಣದೇವನು ಭೂಲೋಕಕ್ಕೆ ಬರುವನೆಂದು ನಂಬಿಕೆ ಇದೆ. ದಹನ ಮಾಡಿದ ೩ ದಿನದಲ್ಲಿ ಮಳೆಯು ಪ್ರಾರಂಭವಾಗುತ್ತದೆ ಹೀಗೆ ಮಳೆ ಪ್ರಾರಂಭವಾದರೆ ವರ್ಷ ವೆಲ್ಲವೂ ಸಮೃದ್ಧಿಯಾಗಿ ಮಳೆ ಯಾಗುತ್ತದೆ ಎಂದು ನಂಬಿಕೆ ಇದೆ.
ಇಂಥ ಅದ್ಭುತವಾದ ಸಂಸ್ಕೃತಿ ಇರುವ ನಮ್ಮ ನಾಡು, ನಾವು ಹೇಗೆ ಹಬ್ಬ ಆಚರಿಸಬೇಕು ಎನ್ನುವುದೇ ಮರೆತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಹೋಳಿ ಹಬ್ಬದ ಸಂಭ್ರಮ ಮಂಕಾ ಗಲು ಕಾರಣ ಯುವ ಪೀಳಿಗೆ. ಇಂದಿನ ಪೀಳಿಗೆಗೆ ಹಬ್ಬ ಆಚರಿಸಿ ಸಂಭ್ರಮ ಪಡುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಅವರಿಗೆ ಸ್ಮಾರ್ಟ್ ಫೋನ್ ಒಂದಿದ್ದರೆ ಸಾಕು ಇಡೀ ಪ್ರಪಂಚ ತಮ್ಮ ಅಂಗೈಯಲ್ಲಿ ಇದೆ ಎಂದು ಒಂದು ರೂಮಿನಲ್ಲಿ ಕೂತರೆ ಮುಗಿದೇ ಹೋಯಿತು. ಪಬ್ಜಿ ರಮ್ಮಿ ಎಂಬ ಆಟದಲ್ಲಿ ಮುಳುಗಿ ಹೋಗುತ್ತಾರೆ. ಹಬ್ಬದ ಸಡಗರ ಸಂಭ್ರಮ ಅವರಿಗೆ ಬೇಡವಾಗಿದೆ.
ಹಬ್ಬದ ಇನ್ನೊಂದು ವಿಶೇಷ ಅಂದರೆ ಪ್ರಕೃತಿಯಲ್ಲಿರುವ ಏಳು ಬಣ್ಣಗಳು ಬಳಸಿ ಓಕಳಿ ಆಡುವುದೇ ಹೋಳಿ ಹಬ್ಬದ ಒಂದು ವಿಶೇಷ. ಆದರೆ ಇಂದಿನ ಕೆಲ ಯುವಕರು ಹೋಳಿ ಹಬ್ಬದ ಅರ್ಥವನ್ನೇ ಮರೆಯುತ್ತಿzರೆ . ಬಣ್ಣದ ಹೆಸರಿನಲ್ಲಿ ಕೆಮಿಕಲ್ ಮಿಶ್ರಣದ ಬಣ್ಣಗಳು, ಗ್ರೀಸ್, ಆಯಿಲ್, ಮೊಟ್ಟೆ ಹಾಗೂ ಕೊಳೆತ ಟೊಮೋಟೊ ಪರಸ್ಪರ ಹೊಡೆದುಕೊಂಡು ಅದೆಷ್ಟು ಕಾಯಿಲೆಗಳಿಗೆ ತುತ್ತಾಗುತ್ತಾರೆ.
ತಮ್ಮ ಬೈಕ್ ಸೈಲೆನ್ಸರ್ ತೆಗೆದು ಕರ್ಕಶ ಶಬ್ದದಿಂದ ಜನರಿಗೆ ತೊಂದರೆ ಕೊಡುತ್ತಾ ಹೋಳಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಹೋಳಿ ಮುಗಿದ ನಂತರ ಸ್ನಾನ ಮಾಡಲು ಅಕ್ಕಪಕ್ಕದ ಕೆರೆ ನದಿ ಸ್ನಾನಕ್ಕೆ ಹೋಗುತ್ತಾರೆ ಈಜಲು ಬರದೆ ಅದೆಷ್ಟು ಯುವಕರು ತಮ್ಮ ಪ್ರಾಣ ವನ್ನು ಕಳೆದುಕೊಂಡು ಮನೆಯಲ್ಲಿ ಸಡಗರದಿಂದ ಹಬ್ಬವನ್ನು ಮಾಡುತ್ತಿ ದ್ದವರು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡುತ್ತಾರೆ.
ಇಂತಹ ಕಹಿ ನೆನಪಿನಿಂದ ಹಬ್ಬ ಆಚರಣೆ ಮಾಡಲು ಮನಸ್ಸು ಬರುವುದಿಲ್ಲ. ಇಂತಹ ಘಟನೆ ಕಂಡು ಕೆಲವರು ಈ ಗೋಜಿಗೆ ಹೋಗದೆ ಮನೆಯಲ್ಲಿ ಕುಳಿತು ಹಬ್ಬ ಆಚರಣೆ ಮಾಡುತ್ತಾರೆ.
ಒಟ್ಟಾರೆಯಾಗಿ ಹಬ್ಬಗಳ ಹಿನ್ನೆಲೆಯನ್ನು ಅರಿತು ಸುಸಂಸ್ಕೃತರಾಗಿ ಅದನ್ನು ಆಚರಣೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹೋಳಿ ಹೆಸರಿನಲ್ಲಿ ಅಸಹಾಯಕರ ಮೇಲೆ ಬಣ್ಣ ಎರಚುವುದು, ಯುವತಿಯರಿಗೆ ಒತ್ತಾಯಪೂರ್ವಕವಾಗಿ ಬಣ್ಣ ಮತ್ತು ಬಣ್ಣದ ನೀರನ್ನು ಎರಚುವುದು. ಕೇಕೆ ಹೊಡೆಯುವುದು ಒಂದೆಡೆಯಾದರೆ, ಕುಡಿದ ಮತ್ತಿನಲ್ಲಿ ಮೂಕ ಪ್ರಾಣಿಗಳಿಗೆ ಬಣ್ಣ ಎರಚಿ ವಿಕೃತಿ ಮೆರೆಯುವುದು ಕೂಡ ನಡೆ ಯುತ್ತಿದೆ. ಕೇವಲ ಮೋಜು ಮಸ್ತಿಯ ಹೆಸರಿನಲ್ಲಿ ತಮ್ಮತನವನ್ನು ಮರೆಯುತ್ತಿರುವ ಯುವ ಪೀಳಿಗೆ ಇನ್ನಾದರೂ ಎಚ್ಚೆತ್ತುಕೊಂಡು ನಮ್ಮ ಸಂಸ್ಕೃತಿಯ ನಿಜಾರ್ಥವನ್ನು ತಿಳಿದು ಹಬ್ಬ ಹರಿದಿನಗಳನ್ನು ಆಚರಣೆ ಮಾಡುವ ಮೂಲಕ ಮುಂದಿನ ಪೀಳಿ ಗೆಗೆ ಈ ಸುಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಿದೆ. ಇದೇ ನಾವೆಲ್ಲರೂ ಮಾನವ ಕುಲಕ್ಕೆ ನೀಡುವ ಅತ್ಯುನ್ನತ ಕೊಡುಗೆಯಾಗಿದೆ

-ಸುನಿತಾ ಜಾಧವ್