ಜಿಲ್ಲಾ ಸುದ್ದಿತಾಜಾ ಸುದ್ದಿ

ಕಿತ್ತೂರು ರಾಣಿ ಚನ್ನಮ್ಮರ ಹಾದಿಯಲ್ಲಿ ಸಾಗಿ ಮಹಿಳೆಯರು ಸಾಧನೆ ಮಾಡಲಿ…

Share Below Link

ಶಿವಮೊಗ್ಗ : ಸ್ವಾತಂತ್ರ್ಯ ಹಂಬಲದ ನಿದರ್ಶನ ಹಾಗೂ ಶೌರ್ಯ ದೊಂದಿಗೆ ಕಾರುಣ್ಯ ಮೂರ್ತಿಯಾದ ಕಿತ್ತೂರಿನ ರಾಣಿ ಚನ್ನಮ್ಮನವರ ಹಾದಿಯಲ್ಲಿ ನಡೆದು ಹೆಣ್ಣುಮಕ್ಕಳು ಸಾಧನೆ ಮಾಡಬೇಕೆಂದು ಸಿರಿಕನ್ನಡ ಪುಸ್ತಕ ಮನೆಯ ಎಸ್.ಸುಂದರ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಶಿವಮೊಗ್ಗ ಆಶ್ರಯದಲ್ಲಿ ಇಂದು ಕುವೆಂಪು ರಂಗ ಮಂದಿರದಲ್ಲಿ ಆಯೋಜಿಸಿದ್ದ ವೀರಮಾತೆ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ದೇಶ ಬ್ರಿಟಿಷರಿಂದಾಗಿ ೨೦೦ ವರ್ಷಗಳ ಕಾಲ ಗುಲಾಮಗಿರಿಯಿಂದ ನಲುಗಿದ ಸಂದರ್ಭದಲ್ಲಿ, ಸ್ವಾತಂತ್ರ್ಯ ಸಂಗ್ರಾಮಕ್ಕೂ ೩೩ ವರ್ಷಗಳ ಪೂರ್ವದಲ್ಲಿ ಮೊಟ್ಟ ಮೆದಲ ಬಾರಿಗೆ ಬಸವ ತತ್ವ ಪ್ರೇರಣೆಯಿಂದ ಬೆಳೆದು ಬಂದ ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ದ ಸಂಗ್ರಾಮ ಸಾರಿ ದೊಡ್ಡ ಜಯ ಸಾಧಿಸಿ ಕನ್ನಡ ನಾಡಿನಲ್ಲಿ ಹೋರಾಟಕ್ಕೆ ಮುನ್ನುಡಿ ಬರೆದ ದಿನಕ್ಕೆ ಇಂದು ೨೦೦ರ ಸಂಭ್ರಮ ಎಂದರು.
ರಾಣಿ ಚನ್ನಮ್ಮ ಮತ್ತೆ ಮತ್ತೆ ನಮ್ಮೆದೆಯಲ್ಲಿ ಸ್ಫೂರ್ತಿಯಾಗಿದ್ದಾರೆ. ಅವರ ಮಾರ್ಗದಲ್ಲಿ ನಡೆದು ನಮ್ಮ ಹೆಣ್ಣು ಮಕ್ಕಳು ಸಾಧನೆ ಮಾಡಬೇಕು ಎಂದು ಅವರು ಕರೆ ನೀಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಪಂಚಮಸಾಲಿ ಸಂಘದ ಸಂಘಟನಾ ಕಾರ್ಯದರ್ಶಿ ಸಿದ್ದೇಶ್ ಬೇಗೂರು, ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಗೌರವಾಧ್ಯಕ್ಷ ಬಸವರಾಜು ಕನಗಲ್, ಪ್ರಮುಖರಾದ ಗೀತಾ ರವಿಕುಮಾರ್ , ಹೆಚ್.ವಿ. ಮಹೇಶ್ವರಪ್ಪ ಅವರು ಕಿತ್ತೂರು ಚೆನ್ನಮ್ಮರ ಸಾಹಸದ ಬಗ್ಗೆ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇ ಶಕ ಉಮೇಶ್ ನಿರೂಪಿಸಿದರು. ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಎಂ. ಕುಮಾರ್ ವಂದಿಸಿದರು. ಮುಖಂಡರಾದ ಎನ್.ಎಸ್. ಕುಮಾರ್, ಚನ್ನಬಸಪ್ಪ, ಮಾಲತೇಶ, ಮಂಜುನಾಥ, ವೈ.ಹೆಚ್.ನಾಗರಾಜ್ ಶಶಿಕಲ, ಬಸವರಾಜ್ ಇನ್ನಿತರರಿದ್ದರು.